ಮನೆ ಅಪರಾಧ ತುಮಕೂರಿನಲ್ಲಿ ಹೆಚ್ಚಾದ ಮೀಟರ್ ಬಡ್ಡಿ ದಂಧೆ: ಸಾಲಗಾರರ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆಗೆ ಯತ್ನ

ತುಮಕೂರಿನಲ್ಲಿ ಹೆಚ್ಚಾದ ಮೀಟರ್ ಬಡ್ಡಿ ದಂಧೆ: ಸಾಲಗಾರರ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆಗೆ ಯತ್ನ

0

ತುಮಕೂರು: ತುಮಕೂರಿನಲ್ಲಿ ಮೀಟರ್ ಬಡ್ಡಿ ದಂಧೆ ಹೆಚ್ಚಾಗಿದ್ದು, ಸಾಲಗಾರರ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರಿನ ಪಿ.ಹೆಚ್ ಕಾಲೋನಿಯಲ್ಲಿ ನಡೆದಿದೆ.

ಝೋಹರಾ ಎಂಬ ಮಹಿಳೆಯಿಂದ ಆತ್ಮಹತ್ಯೆಗೆ ಯತ್ನಿಸಿದವರು.

ಇತ್ತೀಚಿಗಷ್ಟೇ ಸಾಲಗಾರರ ಕಾಟ ತಾಳಲಾರದೇ ಒಂದೇ ಕುಟುಂಬದ ಐವರು ಸಾವಿಗೆ ಶರಣಾದ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ಮಹಿಳೆ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ರತ್ನಾ, ವನ, ಅನುಪಮ ಹಾಗೂ ಫಜೀಲಾ ಎಂಬುವವರ ವಿರುದ್ಧ ಬಡ್ಡಿ ದಂಧೆ ಆರೋಪ ಕೇಳಿಬಂದಿದೆ.

ತಿಂಗಳಿಗೆ 3 ಸಾವಿರ ಬಡ್ಡಿಗೆ 45 ಸಾವಿರ ಸಾಲ ಪಡೆದುಕೊಂಡಿದ್ದ ಝೋಹರಾ,  ಬಡ್ಡಿ ಕಟ್ಟಲಾಗದೇ ಕಂಗಾಲಾಗಿದ್ದರು.

ಸಾಲಗಾರರು ಮನೆ ಬಳಿ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು. ಇದರಿಂದ ಮನನೊಂದ ಝೋಹರಾ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ.

ಸದ್ಯ ತುಮಕೂರಿನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ.