ಮೈಸೂರು: ಹೊಸ ವರ್ಷಾಚರಣೆ ಯಂದು ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಲಡ್ಡೂಗಳನ್ನು ವಿತರಿಸಲಾಗುವುದು. ಇದಕ್ಕಾಗಿ ಸುಮಾರು ಎರಡು ಲಕ್ಷ ಲಡ್ಡೂ ತಯಾರಿಸಲಾಗುತ್ತಿದೆ ಎಂದು ಮೈಸೂರಿನ ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾಪಕ ಬಾಷ್ಯಂ ಸ್ವಾಮಿ ತಿಳಿಸಿದ್ದಾರೆ. ಸು
ದ್ದಿಗಾರರೊಂದಿಗೆ ಮಾತನಾಡಿದ ಅವರು, 1994 ರಿಂದ ದೇವಸ್ಥಾನದಲ್ಲಿ ಹೊಸ ವರ್ಷದಂದು ಲಡ್ಡುಗಳನ್ನು ವಿತರಿಸಲಾಗುತ್ತಿದೆ. ಅದೇ ರೀತಿ ಈ ವರ್ಷವೂ ಎರಡು ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಲಡ್ಡೂಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಜನವರಿ 1 ರಂದು ಬೆಳಿಗ್ಗೆ 4 ರಿಂದ ಪ್ರಾರಂಭವಾಗುವ ಲಡ್ಡೂಗಳ ವಿತರಣೆ ಕಾರ್ಯ ಮಧ್ಯರಾತ್ರಿ 12 ರವರೆಗೆ ನಡೆಯಲಿದೆ ಎಂದು ಅವರು ಹೇಳಿದರು. ದೇವಸ್ಥಾನದ ಅಧಿಕಾರಿಗಳು ತಲಾ 150 ಗ್ರಾಂ ತೂಕದ ಎರಡು ಲಕ್ಷ ಲಡ್ಡೂಗಳನ್ನು ಸಿದ್ಧಪಡಿಸಿದ್ದಾರೆ. ಇದು ಮಾತ್ರವಲ್ಲದೆ, ಎರಡು ಕೆಜಿ ತೂಕದ 15,000 ಲಡ್ಡೂಗಳನ್ನು ಉಚಿತವಾಗಿ ವಿತರಿಸಲು ತಯಾರಿ ನಡೆಸಲಾಗುತ್ತಿದೆ. ಇದಕ್ಕಾಗಿ 60 ಪರಿಣಿತ ಅಡುಗೆಯವರು ಡಿಸೆಂಬರ್ 20 ರಿಂದ ಕಾರ್ಯರ್ನಿವಹಿಸುತ್ತಿದ್ದು, 30 ರವರೆಗೆ ಲಡ್ಡೂ ತಯಾರಿಯಲ್ಲಿ ತೊಡಗಿಕೊಳ್ಳಲಿದ್ದಾರೆ.
ಲಡ್ಡೂ ತಯಾರಿಗಾಗಿ ದೇವಸ್ಥಾನದ ಅಧಿಕಾರಿಗಳು 100 ಕ್ವಿಂಟಾಲ್ ಹಿಟ್ಟು, 200 ಕ್ವಿಂಟಾಲ್ ಸಕ್ಕರೆ, 10,000 ಲೀಟರ್ ಖಾದ್ಯ ಎಣ್ಣೆ, ತಲಾ 500 ಕಿಲೋಗ್ರಾಂ ಗೋಡಂಬಿ, ಒಣದ್ರಾಕ್ಷಿ, 2,000 ಕೆಜಿ ಬೂರಾ ಸಕ್ಕರೆ, 20 ಕೆಜಿ ಪಿಸ್ತಾ, 50 ಕೆಜಿ ಏಲಕ್ಕಿ, 50 ಕೆಜಿ ಜಾಯಿಕಾಯಿ ಅಥವಾ ಜಪಾತ್ರೆ, 20 ಕೆಜಿ ಲವಂಗ ಮತ್ತು 200 ಕೆಜಿ ಕರ್ಪೂರ ಮತ್ತು ಬಾದಾಮ್, 1,000 ಕೆಜಿ ಸಕ್ಕರೆ ಬಳಸಿದ್ದಾರೆ.
ಹೂವಿನ ಅಲಂಕಾರವು ದೇವಾಲಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಹೀಗಾಗಿ ಯೋಗಾನರಸಿಂಹ ಸ್ವಾಮಿಗೆ ಸಹಸ್ರನಾಮ ಪೂಜೆ ಮಾಡಲು ತಮಿಳುನಾಡಿನ ಮಧುರೈನಿಂದ ವಿಶೇಷ ‘ತೋವಲೆ’ ಮತ್ತು ‘ಸ್ವರ್ಣ ಪುಷ್ಪ’ ಪುಷ್ಪಗಳನ್ನು ತರಲಾಗುವುದು. ಆವರಣದಲ್ಲಿರುವ ಮಹಾಲಕ್ಷ್ಮಿ ಮತ್ತು ಪದ್ಮಾವತಿ ದೇವಸ್ಥಾನದಲ್ಲಿಯೂ ಏಕಾದಶ ಪ್ರಕೋರತೋತ್ಸವದ ಪೂಜೆಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.