ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತನ್ನ ಆದಾಯ ಹೆಚ್ಚಳಕ್ಕೆ ಈಗಾಗಲೇ ಬಾಕಿ ತೆರಿಗೆ ವಸೂಲಿಗೆ ಮುಂದಾಗಿತ್ತು. ಇದೀಗ ತನ್ನ ವ್ಯಾಪ್ತಿಯಲ್ಲಿರೋ ಲೀಜ್ ಆಸ್ತಿಗಳನ್ನ ಮಾರಾಟ ಮಾಡೋಕೆ ಪ್ಲಾನ್ ಮಾಡಿದೆ. ಸರ್ಕಾರದ ಮುಂದೆ ಈಗಾಗಲೇ ಪ್ರಸ್ತಾವನೆ ಇಟ್ಟಿರೋ ಪಾಲಿಕೆ, ಈ ಪ್ಲಾನ್ ಸಕ್ಸಸ್ ಆದ್ರೆ 600 ಕೋಟಿ ಆದಾಯ ಹರಿದುಬರುವ ನಿರೀಕ್ಷೆಯಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ತನ್ನ ಬೊಕ್ಕಸದ ಆದಾಯ ಹೆಚ್ಚು ಮಾಡಿಕೊಳ್ಳುವುದಕ್ಕೆ ಹಲವು ಪ್ಲಾನ್ ಮಾಡಿದೆ. ಈಗಾಗಲೇ ಬಾಕಿ ಆಸ್ತಿ ತೆರಿಗೆ ವಸೂಲಿಗೆ ವೇಗ ನೀಡಿರೋ ಪಾಲಿಕೆ, ಇದೀಗ ತನ್ನ ಗುತ್ತಿಗೆ ಹಾಗೂ ಲೀಜ್ ಆಸ್ತಿಗಳನ್ನ ಹರಾಜಿನ ಮೂಲಕ ಮಾರಾಟ ಮಾಡೋಕೆ ಪ್ಲಾನ್ ಮಾಡಿದೆ. ಸದ್ಯ ಈ ಬಗ್ಗೆ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಿರುವ ಪಾಲಿಕೆ, ಶೀಘ್ರದಲ್ಲೇ ಆಸ್ತಿಗಳನ್ನ ಮಾರಾಟ ಮಾಡಿ ಆದಾಯ ಹೆಚ್ಚಿಸೋಕೆ ಸಜ್ಜಾಗಿದೆ.
ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ನಿರ್ವಹಣಾ ನಿಯಮ 2023 ರ ಜಾರಿಗೆ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದೆ. ಸದ್ಯ ಗುತ್ತಿಗೆಗೆ ನೀಡಿರೋ ಯೂನಿಟಿ ಬಿಲ್ಡಿಂಗ್, ಕಂಠೀರವ ಸ್ಟೇಡಿಯಂ ಸೇರಿದಂತೆ ವಿವಿಧ ಕಡೆ ಇರುವ ಪಾಲಿಕೆ ಆಸ್ತಿಗಳನ್ನ ಹರಾಜಿನ ಮೂಲಕ ಮಾರಾಟ ಮಾಡೋಕೆ ಪಾಲಿಕೆ ಪ್ಲಾನ್ ಮಾಡಿದೆ. ಇನ್ನು ಈ ಹರಾಜಿನಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಸಂಸ್ಥೆಗಳು ಮಾತ್ರ ಆಸ್ತಿಯನ್ನ ಖರೀದಿಸುವ ಅವಕಾಶ ಇದ್ದು, ಪಾಲಿಕೆ ಪ್ಲಾನ್ ಸಕ್ಸಸ್ ಆದ್ರೆ ಬೊಕ್ಕಸಕ್ಕೆ 600 ಕೋಟಿ ಆದಾಯ ಬರುವ ನಿರೀಕ್ಷೆಯಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.