ಮನೆ ಸುದ್ದಿ ಜಾಲ ಮೇ 7 ರಂದು ಇಂಧನ ಸಚಿವ ಸುನೀಲ್ ಕುಮಾರ್ ಜಿಲ್ಲಾ ಪ್ರವಾಸ

ಮೇ 7 ರಂದು ಇಂಧನ ಸಚಿವ ಸುನೀಲ್ ಕುಮಾರ್ ಜಿಲ್ಲಾ ಪ್ರವಾಸ

0

ಮೈಸೂರು (Mysuru)-ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವರಾದ ವಿ.ಸುನೀಲ್ ಕುಮಾರ್ (Sunil Kumar) ಅವರು ಮೇ 7ರಂದು ಮೈಸೂರು ಜಿಲ್ಲಾ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.

ಮೇ 7 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು-ಊಟಿ ರಸ್ತೆಯಲ್ಲಿರುವ ಕಡಕೋಳದ ಕೆಇಬಿಇಎ ತರಬೇತಿ ಕೇಂದ್ರದಲ್ಲಿ ವಿದ್ಯುತ್ ಚಾಲಿತ ವಾಹನಗಳು ಮತ್ತು ಅದರ ಚಾರ್ಜಿಂಗ್ ತಂತ್ರಜ್ಞಾನಗಳ ಕುರಿತು ವಿಚಾರ ಸಂಕೀರ್ಣ ಹಾಗೂ ನೂತನವಾಗಿ ನಿರ್ಮಿಸಲಾಗಿರುವ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರದ ಉದ್ಘಾಟನೆ ಮಾಡುವರು.

ಮಧ್ಯಾಹ್ನ 3.30 ರಿಂದ 4 ಗಂಟೆಯವರೆಗೆ ಮೈಸೂರಿನ ಮಾನಸ ಗಂಗೋತ್ರಿಯಲ್ಲಿರುವ ಶಾಸ್ತ್ರೀಯ ಕನ್ನಡ ಉನ್ನತ ಅಧ್ಯಯನ ಸಂಸ್ಥೆಗೆ ಭೇಟಿ ನೀಡುವರು ಹಾಗೂ ಶ್ರೀರಾಂಪುರದ 2ನೇ ಹಂತದ ಎಸ್.ಬಿ.ಎಂ ಲೇಔಟ್‌ನಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಾಂಧಿಭವನ ನಿರ್ಮಾಣಕ್ಕೆ ಉದ್ದೇಶಸಿರುವ ಸ್ಥಳ ಪರಿಶೀಲನೆ ನಡೆಸುವರು.

ಸಂಜೆ 6.30 ಕ್ಕೆ ಗಂಟೆಗೆ ನಗರದ ಕವಿಪ್ರನಿನಿ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ವಿಶೇಷ ಕರ್ತವ್ಯಾಧಿಕಾರಿಗಳಾದ ಡಾ.ಕೆ.ಎಸ್. ಶ್ರೀನಾಥ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.