ಮನೆ ಮನರಂಜನೆ ‘ಬಡೆ ಮಿಯಾನ್  ಛೋಟೆ ಮಿಯಾನ್ʼ  ಸಿನಿಮಾದ ಫಸ್ಟ್‌ ಲುಕ್‌ ಫೋಸ್ಟರ್‌ ರಿಲೀಸ್‌

‘ಬಡೆ ಮಿಯಾನ್  ಛೋಟೆ ಮಿಯಾನ್ʼ  ಸಿನಿಮಾದ ಫಸ್ಟ್‌ ಲುಕ್‌ ಫೋಸ್ಟರ್‌ ರಿಲೀಸ್‌

0

ಮುಂಬಯಿ: ಬಾಲಿವುಡ್‌ನ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿರುವ  ‘ಬಡೆ ಮಿಯಾನ್  ಛೋಟೆ ಮಿಯಾನ್ʼ  ಸಿನಿಮಾದ ಫಸ್ಟ್‌ ಲುಕ್‌ ಫೋಸ್ಟರ್‌ ಶನಿವಾರ(ಜ.20 ರಂದು) ರಿಲೀಸ್‌ ಆಗಿದೆ.

ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ‘ಬಡೆ ಮಿಯಾನ್  ಛೋಟೆ ಮಿಯಾನ್ʼ  ಸಿನಿಮಾ ಅನೌನ್ಸ್‌ ಆದ ದಿನದಿಂದಲೇ ಸದ್ದು ಮಾಡುತ್ತಿದೆ. ಮೊದಲ ಬಾರಿ ಅಕ್ಷಯ್‌ ಕುಮಾರ್‌ ಹಾಗೂ ಟೈಗರ್ ಶ್ರಾಫ್ ಜೊತೆಯಾಗಿ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಬಹು ನಿರೀಕ್ಷೆಯನ್ನು ಹುಟ್ಟಿಹಾಕಿರುವ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ ಆಗಿದೆ. ಬುಲೆಟ್ ಪ್ರೂಫ್‌ ಶೀಲ್ಡ್‌ ಹಾಕಿಕೊಂಡು ಕೈಯಲ್ಲಿ ಗನ್‌ ಗಳನ್ನು ಇಟ್ಟುಕೊಂಡಿರುವ ಲುಕ್‌ ನಲ್ಲಿ ಅಕ್ಷಯ್‌ – ಟೈಗರ್‌ ಕಾಣಿಸಿಕೊಂಡಿದ್ದಾರೆ.

ಯುದ್ದದ ಸನ್ನಿವೇಶ ಸಾರುವ ಪೋಸ್ಟರ್‌ ನಲ್ಲಿ ಅಕ್ಷಯ್‌ ಕುಮಾರ್‌ – ಟೈಗರ್‌ ಶ್ರಾಫ್‌ ಮಿಂಚಿದ್ದಾರೆ. ಪೋಸ್ಟರ್‌ ನೊಂದಿಗೆ ಇದೇ ಜನವರಿ 24 ರಂದು ಸಿನಿಮಾದ ಟೀಸರ್‌ ರಿಲೀಸ್‌ ಆಗಲಿದೆ ಎಂದು ಸಿನಿಮಾ ತಂಡ ಹೇಳಿದೆ.

ಪ್ಯಾನ್‌ ಇಂಡಿಯಾ ಭಾಷೆಯಲ್ಲಿ ಸಿನಿಮಾ ತೆರೆ ಕಾಣಲಿದ್ದು, ಈ ವರ್ಷದ ಈದ್‌ ಹಬ್ಬದಂದು ಸಿನಿಮಾ ರಿಲೀಸ್‌ ಆಗಲಿದೆ. ಸ್ಕಾಟ್ಲೆಂಡ್, ಲಂಡನ್, ಭಾರತ ಮತ್ತು ಯುಎಇ ಮುಂತಾದ ಕಡೆ ಸಿನಿಮಾ ಚಿತ್ರೀಕರಣ ಆಗಿದೆ.

ಅಕ್ಷಯ್‌ ಕುಮಾರ್‌ ,ಟೈಗರ್‌ ಶ್ರಾಫ್‌ ಜೊತೆಗೆ ಪೃಥ್ವಿರಾಜ್ ಸುಕುಮಾರನ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.