ಮನೆ ರಾಜ್ಯ ಕೇವಲ ಆಪರೇಷನ್ ಕಮಲ ಮಾಡುವುದಷ್ಟೇ ಬಿಜೆಪಿಗೆ ಗೊತ್ತಿರುವುದು: ಎನ್.ಎಸ್.ಬೋಸರಾಜು

ಕೇವಲ ಆಪರೇಷನ್ ಕಮಲ ಮಾಡುವುದಷ್ಟೇ ಬಿಜೆಪಿಗೆ ಗೊತ್ತಿರುವುದು: ಎನ್.ಎಸ್.ಬೋಸರಾಜು

0

ಮಡಿಕೇರಿ: ಜನಪರವಾಗಿ ಅಭಿವೃದ್ಧಿ ಮಾಡಿ ತೋರಿಸುವ ಶಕ್ತಿ ಬಿಜೆಪಿಗೆ ಇಲ್ಲ. ಕೇವಲ ಆಪರೇಷನ್ ಕಮಲ ಮಾಡುವುದಷ್ಟೇ ಬಿಜೆಪಿಗೆ ಗೊತ್ತಿರುವುದು ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಖಾತೆ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು.

ಇಲ್ಲಿಯ ತನಕ ಬಿಜೆಪಿಯ ವಿರುದ್ಧವಾಗಿ ಮಾತನಾಡುತ್ತಿದ್ದ ಜಗದೀಶ್ ಶೆಟ್ಟರ್ ಅವರಿಗೆ ಏನು ಆಸೆ ತೋರಿಸಿದ್ದಾರೋ ಗೊತ್ತಿಲ್ಲ. ಶೆಟ್ಟರ್ ಅವರೇ ಬಿಜೆಪಿಯಲ್ಲಿ ತಮಗೆ ಅಗೌರವ ಆಗಿದೆ ಎಂದು ಕಾಂಗ್ರೆಸ್ ಗೆ ಬಂದರು. ನಂತರ ಅವರು ಬಿಜೆಪಿ ಬಗ್ಗೆ, ಯಡಿಯೂರಪ್ಪ, ಅಮಿತ್ ಶಾ ಬಗ್ಗೆ  ಏನೇನು ಮಾತನಾಡಿದ್ದಾರೆ ಎಂಬುದು ಇಡಿ ರಾಜ್ಯಕ್ಕೆ ಗೊತ್ತಿದೆ. ನಾವ್ಯಾರು ಅವರಿಗೆ ಬಿಜೆಪಿ  ಬಗ್ಗೆ ಮಾತನಾಡಿ ಎಂದಿರಲಿಲ್ಲ. ಅವರ ಗೌರವ ಮತ್ತು ಅಗೌರವದ ಬಗ್ಗೆ ಅವರೆ ಮಾತನಾಡುತ್ತಿದ್ದರು. ಕಾಂಗ್ರೆಸ್‌ನವರು ಯಾರೂ ಮಾತನಾಡಲಿಲ್ಲ. ನಾವು ಮಾತ್ರ ಎಲ್ಲಾ ಗೌರವ ಶೆಟ್ಟರ್ ಗೆ ಕೊಟ್ಟಿದೇವೆ. ಈಗ ಅವರು ಯಾವ ಅನುಕೂಲಕ್ಕಾಗಿ ಮತ್ತೆ ಬಿಜೆಪಿಗೆ  ಹೋಗಿದ್ದಾರೆಯೋ ಗೊತ್ತಿಲ್ಲ ಎಂದರು.

ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಎಲ್ಲಾ ರಾಜ್ಯದಲ್ಲೂ ಕೂಡ ಇದೆ ಮಾಡುತ್ತಿದ್ದಾರೆ.  ಜನರೂ ನೋಡುತ್ತಲೆ ಇದ್ದಾರೆ ಸಮಯ ಬರುತ್ತದೆ. ಮುಂದಿನ ದಿನದಲ್ಲಿ ಜನರೆ ಸರಿಯಾದ ಉತ್ತರ ನೀಡುತ್ತಾರೆ. ಆಪರೇಷನ್ ಕಮಲದಿಂದ ನಮ್ಮ ಸರ್ಕಾರಕ್ಕೆ ಏನೂ ತೊಂದರೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.