ಮನೆ ಮನರಂಜನೆ ಫೆಬ್ರವರಿ 2 ರಂದು ‘ಸತ್ಯಂ ಶಿವಂ’ ಚಿತ್ರ ತೆರೆಗೆ

ಫೆಬ್ರವರಿ 2 ರಂದು ‘ಸತ್ಯಂ ಶಿವಂ’ ಚಿತ್ರ ತೆರೆಗೆ

0

ಯತಿರಾಜ್‌ ನಿರ್ದೇಶನದ ಸತ್ಯಂ ಶಿವಂ ಚಿತ್ರ ಫೆಬ್ರವರಿ 2 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಚಿತ್ರದ ಬಿಡುಗಡೆ ಬಗ್ಗೆ ಮಾತನಾಡಿದ ನಿರ್ದೇಶಕ ಯತಿರಾಜ್‌, ವಿಭಿನ್ನ ಕಥಾಹಂದರ ಹೊಂದಿರುವ ಸತ್ಯಂ ಶಿವಂ ಚಿತ್ರ ಫೆಬ್ರವರಿ 2ರಂದುಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರದ ನಿರ್ಮಾಪಕ ಬುಲೆಟ್‌ ರಾಜು ಅವರೆ ನಾಯನಾಗೂ ನಟಿಸಿದ್ದಾರೆ. ಸಂಜನ ನಾಯ್ಡು ಈ ಚಿತ್ರದ ನಾಯಕಿ. ಮೈಕೋ ನಾಗರಾಜ್, ಬಾಲ ರಾಜವಾಡಿ, ಅರವಿಂದ್‌ ರಾವ್‌, ತೇಜಸ್ವಿನಿ, ತನುಜ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಾನು ಕೂಡ ನಟಿಸಿದ್ದೇನೆ. ಸಸ್ಪೆನ್ಸ್‌, ಸೆಂಟಿಮೆಂಟ್, ಥ್ರಿಲ್ಲರ್‌ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ’ ಎಂದರು.

ನಿರ್ಮಾಪಕ ರಾಜು ಮಾತನಾಡಿ, “ನಾನು ಈ ಹಿಂದೆ ಭಿಕ್ಷುಕ ಎಂಬ ಸಿನಿಮಾ ಮಾಡಿದ್ದೆ. ಇದು ಎರಡನೇ ಸಿನಿಮಾ. ಯತಿರಾಜ್‌ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಬಂದಿದೆ. ಸೆನ್ಸಾರ್‌ ಮಂಡಳಿ ಯು/ಎ ಅರ್ಹತಾ ಪತ್ರ ನೀಡಿದೆ’ ಎಂದರು. ನಾಯಕಿ ಸಂಜನಾ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.