ಮನೆ ಸುದ್ದಿ ಜಾಲ ಚೀನಾ ವಿಮಾನ ನಿಲ್ದಾಣದ ರನ್‌ ವೇಯಲ್ಲಿ ಹೊತ್ತಿ ಉರಿದ ವಿಮಾನ: ವಿಡಿಯೋ ವೈರಲ್

ಚೀನಾ ವಿಮಾನ ನಿಲ್ದಾಣದ ರನ್‌ ವೇಯಲ್ಲಿ ಹೊತ್ತಿ ಉರಿದ ವಿಮಾನ: ವಿಡಿಯೋ ವೈರಲ್

0

ಬೀಜಿಂಗ್(ಚೀನಾ): ಚೀನಾಕ್ಕೆ ಸೇರಿದ ಚೋಂಗ್‌ಕಿಂಗ್ ಜಿಂಗ್ ಬಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಟಿಬೆಟ್‌ ಏರ್‌ಲೈನ್ಸ್‌ನ ವಿಮಾನವೊಂದು ಟೇಕ್‌ ಆಫ್ ಆಗುವ ವೇಳೆ ರನ್‌ವೇನಲ್ಲಿ  ಸ್ಕಿಡ್ ಆಗಿ ಬೆಂಕಿ ಕಾಣಿಸಿಕೊಂಡಿದೆ.

ಘಟನೆಯಲ್ಲಿ 25 ಮಂದಿ ಗಾಯಗೊಂಡರು ಎಂದು ಚೀನಾದ ಸರ್ಕಾರದ ಸುದ್ದಿಸಂಸ್ಥೆ ತಿಳಿಸಿದೆ. ವಿಮಾನವು ಟಿಬೆಟ್‌ನ ನೈಂಗ್‌ಚಿಗೆ ಹೊರಡಬೇಕಿತ್ತು.  ಈ ಸಂದರ್ಭದಲ್ಲಿ ಏರ್‌ಲೈನ್ಸ್ ವಿಮಾನದ ಫ್ಯೂಸ್‌ಲೇಜ್​ನಲ್ಲಿ (ಸಿಬ್ಬಂದಿ ಮತ್ತು ಪ್ರಯಾಣಿಕರಿರುವ ವಿಮಾನದ ಮುಖ್ಯಭಾಗ) ಬೆಂಕಿಯ ಜ್ವಾಲೆ ಮತ್ತು ದಟ್ಟ ಕಪ್ಪು ಹೊಗೆ ಕಾಣಿಸಿಕೊಂಡಿದ್ದು, ವಿಡಿಯೋ ಬಹಿರಂಗವಾಗಿದೆ.

ವಿಮಾನದ ಹಿಂದಿನ ಬಾಗಿಲಿನ ಮೂಲಕ ಜನರು ತಪ್ಪಿಸಿಕೊಂಡು ಓಡುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ನೋಡಬಹುದು. ವಿಮಾನಕ್ಕೆ ಆವರಿಸುತ್ತಿದ್ದ ಬೆಂಕಿಯನ್ನು ನಂದಿಸಲಾಗಿದೆ ಮತ್ತು ರನ್‌ವೇಯನ್ನು ಮುಚ್ಚಲಾಗಿದೆ. ಅಪಘಾತಕ್ಕೆ ಕಾರಣವೇನು ಎಂಬ ಕುರಿತು ತನಿಖೆ ನಡೆಯುತ್ತಿದೆ.