ಮನೆ ದೇವಸ್ಥಾನ ಶ್ರೀ ಕ್ಷೇತ್ರದಲ್ಲಿ ಪ್ರಧಾನ ಉತ್ಸವಗಳು

ಶ್ರೀ ಕ್ಷೇತ್ರದಲ್ಲಿ ಪ್ರಧಾನ ಉತ್ಸವಗಳು

0

ಈ ಕ್ಷೇತ್ರದಲ್ಲಿ ಒಂದು ವರ್ಷದಲ್ಲಿ’ 144 ವಿಶೇಷ ಆರಾಧನಾ ವೇಳೆಗಳು ‘ ಎಂಬ ಪೂಜಾ ಸಂಪ್ರದಾಯದಲ್ಲಿ ನಿತ್ಯ ನೈಮಿತ್ತಿಕ ಆರಾಧನೆಗಳು ನಡೆಯುತ್ತಿವೆ.

1. ಮೇಷ ಮಾಸ ( ಏಪ್ರಿಲ್- ಮೇ ತಿಂಗಳು ):

ಮೇಷ ಮಾಸ1ಕ್ಕೆ ವಿಷು ಕಣಿ ಉತ್ಸವ. ಭಗವತಿಯ ಉತ್ಸವ ಬಿಂಬವನ್ನು ತಿರುವಾಭರಣಗಳಿಂದ ಅಲಂಕರಿಸಿ ಮುಖ ಮಂಟಪದಲ್ಲಿರಿಸುವುದಾಗಿದೆ. ಕಣಿ ಸಾಧನೆಗಳನ್ನೆಲ್ಲಾ ಇಟ್ಟು ಮುಂಜಾನೆ ಕಣಿ ಕಾಣಬಹುದಾಗಿದೆ. ಅಂದಿನಿಂದ 11 ದಿನಗಳ ಕಾಲ ವಿಶೇಷವಾದ ವಿಷು ಪೂಜೆಗಳು ಇರುತ್ತದೆ ಸಂಧ್ಯಗೆ ಅಲಂಕರಿಸಿದ ಉತ್ಸವ ಮೂರ್ತಿಯ ಸುತ್ತುಬಲಿಯಿರುವುದಾಗಿದೆ.

 2 ವೃಷಭ ರಾಶಿ ( ಮೇ -ಜೂನ್ ತಿಂಗಳು ):

  ವೃಷಭ ಮಾಸದ ಸಂಕ್ರಮಣ ದಿನದಿಂದಾರಂಭಿಸಿ ತೆಯ್ಯಂಗಳು ಪೆರುಂಕಳಿಯಾಟ ಜರುಗುವವರೆಗೆ ಎಲ್ಲಾ ಆದಿತ್ಯ,ಮಂಗಳ, ಶುಕ್ರವಾರಗಳಲ್ಲಿ ಕ್ಷೇತ್ರದ ಬಡಗು ದಿಕ್ಕಿನಲ್ಲಿರುವ ಹೊರಾಂಗಣದಲ್ಲಿ ಕಣಿಯೆಂಬಳ್ಳಿ ಮಾಡಕ್ಕೆ ತಾಗಿಕೊಂಡಿರುವ ತೆಯ್ಯಾಂಣದಲ್ಲಿ ತೆಯ್ಯಾಂ ಕೋಲಧಿಕಾರಿಗಳಾದ ವಣ್ಣಾನ್ ಸಮುದಾಯದವರಿಂದ ತೊತ್ತಂಪಾಟು ಇರುವುದು. ಈ ಎಲ್ಲಾ ದಿನಗಳಲ್ಲೂ ನಿಶ್ಚಿತ ಸಮುದಾಯದವರು ತಂದೋಪ್ಪಿಸುವ ಮೀನುಗಳನ್ನು ಭಗವತಿಗೆ ನೈವೇದಿಸುವ ಮೀನಾಮೃತ ಸೇವೆ ಯಿರುವುದಾಗಿದೆ.

     ವೃಷಭ ಮಾಸ 10ರಂದು ದೈವಗಳ ಕಳಿಯಾಟ ದಿನವನ್ನು ನಿಗದಿಗೊಳಿಸುವುದಾಗಿದೆ. ಕಳಿಯಾಟ ದಿನ ಬೆಳಿಗ್ಗೆ ತೆಯ್ಯಾಂಗಣದಲ್ಲಿ ಕಲಶ ಪಾತ್ರೆ ಯಿಟ್ಟು (ಮಧು ತುಂಬಿದ ಕಳಸ ಪಾತ್ರೆ ) ತೋತ್ತಂಪಾಟ್ಟುಗಳನ್ನು ಹಾಡಲಾಗುತ್ತದೆ. ಸಾಯಂಕಾಲಕ್ಕೆ ಹತ್ತಿರದ ನಿಶ್ಚಿತ ಪ್ರದೇಶವಾಸಿಗಳು ತಂದೊಪ್ಪಿಸುವ ಕಳಶತಟ್ಟು ಘೋಷಯಾತ್ರೆಯಲ್ಲಿ ತೆಯ್ಯಾಂಗಣಕ್ಕೆ ಆಗಮಿಸುವುದಾಗಿದೆ. ನಿಶ್ಚಿತ ವಿಧಿ ವಿಧಾನಗಳ ನಿರ್ವಹಣೆಯ ನಂತರ ಮಾಡಾಯಿ ಕಾವಿಲಮ್ಮನನೊಳಗೊಂಡ 7 ತೆಯ್ಯಂಗಳನ್ನುಕಟ್ಟಿಆಡುವುದಾಗಿದೆ.ತಿರುವರ್ ಕಟ್ ಭಗವತಿ, ಕ್ಷೇತ್ರ ಪಾಲನ್,ಮಾಂಞಾಳಮ್ಮವೇಟುವಚೇಕ್ಕವನ್,ಚುಅಳಂ ಭಗವತಿ,ಕಾಳರಾತ್ರಿ,ಸೋಮೇಶ್ವರ ಎಂಬೀ ತೆಯ್ಯಂಗಳನ್ನು ಕೋಲಸ್ವರೊಪದಲ್ಲಿ ವಣ್ಣಾನ್ ಸಮುದಾಯದ ಕೋಲಧಾರಿಗಳು ಒಟ್ಟಿಗೆ ಕಟ್ಟಿ ಆಡುವುದಾಗಿದೆ. ಶ್ರೀ ತಿರುವರ್ ಕಾಟ್ ಭಗವತಿ ತೆಯ್ಯವು ಭದ್ರಕಾಳಿಯ ಕೋಲ ಸ್ವರೂಪವಾಗಿದೆ. ಈ ಶಕ್ತಿಯನ್ನು ತಿರುಮುಡಿ ಏರಿಸಿ ಕೊಂಡಾಡುವುದಾಗಿದೆ.ಪ್ರಸಾದ ವಿತರಣೆಯೊಂದಿಗೆ ಕಳಿಯಾಟವು ಸಮಾಪ್ತಿಗೊಳ್ಳುವುದಾಗಿದೆ.

3. ಮಿಥುನ ಮಾಸ (ಜೂನ್- ಜುಲೈ ತಿಂಗಳು ):

ಮಿಥುನ ಮಾಸ 13 ಭಗವತಿ ದೇವಿಯ ಪ್ರತಿಷ್ಠಾ ದಿನವಾಗಿದೆ.ಆ ದಿವಸ ಕ್ಷೇತ್ರದಲ್ಲಿ ಶಾಕ್ತೇಯ  ಪೂಜೆಗಳಿರುವುದಿಲ್ಲ. ಕ್ಷೇತ್ರತಂತ್ರಿಗಳಿಂದ ವೈದಿಕ ಕ್ರಮದಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ.

4. ಕರ್ಕಾಟಕ ಮಾಸ (ಜುಲೈ- ಆಗಸ್ಟ್ ತಿಂಗಳು ):

ಕರ್ಕಾಟಕ ಮಾಸದಲ್ಲಿ ಎಲ್ಲಾ ದೇವರಿಗಳಿಗೂ ಹೋದಳು ನೈವೇದ್ಯ  ಪ್ರಾಧಾನ್ಯವಾಗಿದೆ. ಎಲ್ಲಾ ದಿನಗಳಲ್ಲಿಯೂ ಭಗವತಿಗೆ ಹೋದಳು ನೈವೇದ್ಯ ಇರುವುದಾದರೂ ಕರ್ಕಾಟಕ ಮಾಸದ ಹೋದಳು ನೈವೇದ್ಯಕ್ಕೆ ಪ್ರಾಧ್ಯಾನತೆ ಇರುವುದಾಗಿದೆ ಈ ತಿಂಗಳಲ್ಲಿ ಎಲ್ಲಾ ದೇವರುಗಳಿಗೂ ಹೋದಳು ನೈವೇದ್ಯ ಇರುವುದು. ಹಿಂದೆ ನಿವೇದ್ಯಕ್ಕಿರುವ ಹೋದಳನ್ನು ಮನೆಯಲ್ಲಿ ಶುದ್ಧಾಚಾರದಲ್ಲಿ ತಯಾರಿಸಿ ಕ್ಷೇತ್ರಕ್ಕೆ ಒಪ್ಪಿಸಲಾಗುತ್ತಿತ್ತು. ಈ ಹೋದಳು ನಿವೇದ್ಯಪ್ರಸಾದವನ್ನು ಭಕ್ತಾದಿಗಳು ಮನೆಗೆ ಒಯ್ಯುವುದಾಗಿದೆ.

 ಕರ್ಕಾಟಕ ಮಾಸದಲ್ಲಿ ಶುಭ ಮುಹೂರ್ತದ ದಿನ ನೀರ ಉತ್ಸವ ಅಂದರೆ ಕದಿರ್ ತುಂಬಿಸುವ ಉತ್ಸವವನ್ನು ಜರಗಿಸಲಾಗುತ್ತದೆ. ಕದಿರ್ ಕಟಟ್ಟೆಯಿಂದ ಕದಿರು ಸಾಧನಗಳನ್ನು ವಾದ್ಯ ಘೋಷಣೆದೊಂದಿಗೆ ತಂದು ಕ್ಷೇತ್ರ ನಡೆಯಲ್ಲಡುವುದಾಲಗಿದೆ. ಅನಂತರ ಇದನ್ನು ಪೂಜಿಸಿ ಗುಡಿಗಳಿಗೆಲ್ಲಾ ಕಟ್ಟುವುದಾಗಿದೆ.

ಕರ್ಕಾಟಕ 16ರಂದು ಪೂರ್ವಾಹ್ನ’ಮಾರಿ ತೆಯ್ಯಾಟಂ’ ಉತ್ಸವ ಜರುಗುತ್ತದೆ ನಾಳಿನ ಜನರಿಗೂ ಜಾನುವಾರಗಳಿಗೂ ಬರುವಂತಹ ದುರಿತಗಳನ್ನು ನೀಗಿಸಲಿಕ್ಕಾಗಿ ಮಾರಿ ತೆಯ್ಕಾಟಂ ಜರಗಿಸುವುದಾಲದೆ. ಕ್ಷೇತ್ರದ ಬಡಕು ದಿಕ್ಕಿಗೆ ಅನತಿ ದೂರದಲ್ಲಿರುವ ಮಾರಿ ತೆಯ್ಯಾಟಂ ತರ ಎಂಬ ವಿಶಾಲ ಪ್ರದೇಶದಲ್ಲಿ ಮಾರಿ ದೈವಗಳಾದ ಮಾರಿ ಕಲುವನ್ -ಮಾಮಾಯಿ ಕುಲುವನ್, ಮಾರಿಕಲಿಚ್ಚಿ -ಮಮಾಯಿಕಲಿಚ್ಚಿ,ಮಾರಿ ಗುಳಿಗನ್   –  ಮಾಮಾಯಿಗುಳಿಗನ್  ಎಂಬ ತೆಯ್ಯಂಮ್ ಗಳನ್ನು    ಒಟ್ಟಿಗೆ ಕಟ್ಟಿ ಆಡುವುದಾಗಿದೆ. ಈ ತೆಯ್ಯಂಮ್ ಗಳನ್ನು ಮಲಯಾಳ ಕೋಪಾಳ (ಪೊಳ್ಳ )ಸಮುದಾಯದವರು ಕಟ್ಟುವುದಾಗಿದೆ.

5. ಸಿಂಹ ಮಾಸ (ಆಗಸ್ಟ್ –ಸೆಪ್ಟಂಬರ್ ತಿಂಗಳು ):

  ಸಿಂಹ ಮಾಸದ ಒಂದು ಶುಭ ಮುಹೂರ್ತದ ದಿನ ಭಗವತಿಗೆ ಮತ್ತು ಇತರ ದೇವತೆಗಳಿಗೆ ‘ಪುತ್ತರಿ’ (ಹೊಸ ಹಕ್ಕಿ )ಉತ್ಸವವು ನಡೆಯುವುದಾಗಿದೆ.ಊರ ಭಕ್ತರು ಕ್ಷೇತ್ರಕ್ಕೆ ಒಪ್ಪಿಸಿದಂತಹ ಭತ್ತವನ್ನು ಕ್ಷೇತ್ರ ವಠಾರದಲ್ಲಿ ಕುಟ್ಟಿ ಅಕ್ಕಿ ಮತ್ತು  ಮತ್ತು ಅವಲಕ್ಕಿಯನ್ನು ಮಾಡುವ ಕೆಲಸವನ್ನು ಮುತ್ತೈದ ಸ್ತ್ರೀಯರು ನಿರ್ವಹಿಸುವುದಾಗಿದೆ.ವಿಶೇಷ ಪೂಜೆಗಳೊಂದಿಗೆ ಪುತ್ತರಿ ಕ್ರಮವು ನಡೆಯುವುದಾಗಿದೆ.

ಸಿಂಹಾಸನದ ತಿರುವೋಣಂ ದಿವಸ ನೂತನ ವಸ್ತ್ರಗಳನ್ನು ಭಗವತಿ ಸಹಿತ ಎಲ್ಲಾ ದೇವತೆಗಳಿಗೂ ತೊಡಿಸಿ ಅಲಂಕರಿಸುವುದಾಗಿದೆ.ಈ ದಿನವೂ ಎಲ್ಲಾ ದೇವರಿಗಳಿಗೂ ವಿಶೇಷ ಪೂಜೆಗಳು ಸಲ್ಲುತ್ತವೆ.ವಿನಾಯಕ ಚೌತಿಯನ್ನು ವಿಶೇಷ ಪೂಜೆಗಳೊಂದಿಗೆ ಆಚರಿಸಲಾಗುತ್ತದೆ.

 6 ಕನ್ಯಾ ಮಾಸ ( ಸೆಪ್ಟಂಬರ್ -ಅಕ್ಟೋಬರ್ ತಿಂಗಳು ):

ಕನ್ಯಾ ಮಾಸದಲ್ಲಿ ಮುಂಜಾನೆ ಕ್ಷೇತ್ರದ ಭಗವತಿ ಮಂಟಪದಲ್ಲಿ ದೀಪ ಪ್ರಜ್ವಲಿಸಿ, ಮಿಳಾವ್ ವಾದ್ಯ ಬಾರಿಸಿ, ಚಾಕ್ಯಾರರು ‘ಚಾಕ್ಯಾರ್ ಕೋತ್ತ್’ ಕಲೆಯನ್ನು ನಿರ್ವಹಿಸುತ್ತಾರೆ.

ಶ್ರೀ ರಾಮಾವತಾರದಿಂದ ಲಂಕಾ ದಹನದ ತನಕವಿರುವ ಕಥಾ ಭಾಗವನ್ನು  ಚಾಕ್ಯಾರ್ ಚಾಕ್ಯಾರ್ ರ್ಕೊತ್ತ್ ನಲ್ಲಿ ಪ್ರದರ್ಶಿಸುವುದಾಗಿದೆ.

7 ತುಲಾ ಮಾಸ( ಅಕ್ಟೋಬರ -ನವೆಂಬರ ತಿಂಗಳು):

ತುಲಾ ಮಾಸ1ರಿಂದ8 ವರೆಗೆ ಬೆಳಿಗ್ಗೆ ಭಗವತಿ ಮಂಟಪದಲ್ಲಿ ದೀಪ ಪ್ರಜ್ಞಲಿಸಿ ಕೊಡಿಯಿಲ ಪೂಜೆ ‘ನೆರೆವೇ ರುವುದಾಗಿದೆ. 8ನೇ ದಿನ ‘ಕಳತ್ತಿಲರಿ ‘ಪೂಜೆಯೂ ತೆಯ್ಯಾಂಬಾಡಿ  ನಂಬ್ಯಾರುಗಳಿಂದ ವಾಯ್ ತ್ತಿಪ್ಪಾಟ್ ಕ್ರಮ ವೂ

 ಇರುವುದಾಗಿದೆ.

8. ವೃಶ್ಚಿಕ ಮಾಸ (ನವೆಂಬರ -ದಶಂಬರ ತಿಂಗಳು ):

  ವೃಶ್ಚಿಕ ಸಂಕ್ರಮಣದಂದು ಭಗವತಿ ಮಂಟಪದದಲ್ಲಿ ಕಳತ್ತಿಲರಿ ಪೂಜೆಯು ನೆರವೇರುವುದು.ಅಂದಿನಿಂದ ಕ್ಷೇತ್ರದಲ್ಲಿ ಮಂಡಲ ಪೂಜೆಯು ನಡೆಯುವುದಾಗಿದೆ ಈ ದಿನಗಳಲ್ಲಿ ಬೆಳಗ್ಗಿನ ಉಷ್ಣ ಪೂಜೆಯು ಮುಂಜಾನೆ5.00 ಗಂಟೆಯೊಳಗಾಗಿ ಜರುಗುವುದಾಗಿದೆ. ಎಲ್ಲಾ ದಿನಗಳಲ್ಲೂ ಬೆಳಿಗ್ಗೆ ಮಂಟಪದಲ್ಲಿ ಕೊಡಿಯಿಲ ಪೂಜೆ ಮತ್ತು ಸಂಧ್ಯೆಗೆ ಭಾವತಿಯ ಸುತ್ತ ಬಲಿ ಉತ್ಸವವಿರುವುದು.ಸಧ್ಯೆಗೆ ಎಲ್ಲಾ ದೇವರುಗಳಿಗೂ ಅಪ್ಪ ನೈವೇದ್ಯವು  ವಿಶೇಷವಾಗಿರುವುದು.ವೃಶ್ಚಿಕ ಮಾಸದ ಕಾರ್ತಿಕ ನಕ್ಷತ್ರವು ಅಮ್ಮನ ಜನ್ಮದಿನವಾಗಿದೆ, ಅಂದು ಭಗವತಿಗೆ 100 ನೇಂದ್ರ ಮತ್ತು 1001 ಕದಳಿ ಹಣ್ಣುಗಳನ್ನು ನಿವೇದಿಸಲಾಗುತ್ತದೆ.

9. ಧನು ಮಾಸ (ದಶಂಬರ- ಜನವರಿ ತಿಂಗಳ)

ಧನುಮಾಸದ ಎಲ್ಲಾದಿನಗಳಲ್ಲೂ ಮುಂಜಾನೆ ವಿಶೇಷವಾದ ಧನು ಪೂಜೆ ಇರುವುದು.ಈ ಪೂಜೆಗೆ ‘ತಿರುವಾತಿರ ಪೂಜೆ’ ಎಂದು ಹೆಸರು.

10. ಮಕರ ಮಾಸ (ಜನವರಿ -ಫೆಬ್ರವರಿ ತಿಂಗಳು )

ಮಕರ ಸಂಕ್ರಮಣದಿಂದ 13 ದಿನಗಳು ಭಗವತಿಯ ಕಲ್ಯಾಣ ಪ್ಯಾಟ್ವ್ ಉತ್ಸವವಾಗಿದೆ.ಈ ದಿನಗಳಲ್ಲಿ ಬೆಳಿಗ್ಗೆ ಮತ್ತು ಸಂಧ್ಯೆಗೆ ವಾದ್ಯ ಘೋಷದೊಂದಿಗೆ ವಿಶೇಷ ಪೂಜೆಯನ್ನು ಜರಗಿಸಲಾಗುತ್ತದೆ.ಸಂಧ್ಯೆಗೆ ಭಗವತಿಯ ಸ್ವರ್ಣ ನಂದಕಂ ತಿರುವಾಯುಧದ ಸುತ್ತು ಬಲಿ ಪ್ರದಕ್ಷಿಣೆಯು ಇರುವುದು 13ನೇ ದಿನ ಬೆಳಿಗ್ಗೆ 10 ಗಂಟೆಗೆ ಮತ್ತು ಸಂಧ್ಯೆಕ್ಕೆ ಮಂಟಪದಲ್ಲಿ ‘ಕಳತ್ತಿಲರಿ ಪೂಜೆ ‘ಯು ಇರುವುದು.

11. ಕುಂಭ ಮಾಸ (ಫೆಬ್ರವರಿ ಮಾರ್ಚ್ ತಿಂಗಳು )”

   ಕುಂಭಮಾಸದ ಶಿವರಾತ್ರಿಯಂದು ಮಹಾದೇವನಿಗೆ ಮತ್ತು ಇತರ ಎಲ್ಲಾ ದೇವತೆಗಳಿಗೂ ವಿಶೇಷ ಪೂಜೆಯು ಜರುಗುವುದು.ಸಂಧ್ಯೆಯ  ಶಿವ ಪೂಜೆಯು ಪ್ರಾಧಾನ್ಯವಾದುದಾಗಿದೆ.

12. ಮೀನ ಮಾಸ (ಮಾರ್ಚ್ ಏಪ್ರಿಲ್ ತಿಂಗಳು  )

ಈ ಕ್ಷೇತ್ರದಲ್ಲಿ ಮೀನ ಮಾಸದ ಕಾರ್ತಿಕ ನಕ್ಷತ್ರದಿಂದ ಪೂರ್ವಾಷದ ನಕ್ಷತ್ರದ ವರೆಗೆ ಒಂಭತ್ತು ದಿನಗಳಲ್ಲಿ ‘ಪೂರೋತ್ಸವ ‘ನಡೆಯುತ್ತದೆ ಈ ಉತ್ಸವವನ್ನು  ಮಡಾಯಿಕಾವಿಲಮ್ಮನ ಪ್ರಧಾನವಾದ ಮಹೋತ್ಸವವಾಗಿದೆ ಈ ಉತ್ಸವನ್ನು ಕಾಣಲು ದೂರ ದೂರದ ಊರುಗಳಿಂದ ಸಾವಿರಾರು ಸ್ತ್ರೀ ಪುರುಷರು ಅಗಮಿಸುತ್ತಾರೆ.