ಮನೆ ರಾಜ್ಯ ಕೆಎಸ್ ​ಆರ್​ ಟಿಸಿ ಬಸ್​ ಚಾಲಕರಿಗೆ ಡಬಲ್ ಡ್ಯೂಟಿಯಿಂದ ಮುಕ್ತಿ: ವಿಶ್ರಾಂತಿ ಕಡ್ಡಾಯ

ಕೆಎಸ್ ​ಆರ್​ ಟಿಸಿ ಬಸ್​ ಚಾಲಕರಿಗೆ ಡಬಲ್ ಡ್ಯೂಟಿಯಿಂದ ಮುಕ್ತಿ: ವಿಶ್ರಾಂತಿ ಕಡ್ಡಾಯ

0

ಬೆಂಗಳೂರು: ಕೆಎಸ್​ ಆರ್​ ಟಿಸಿ ಬಸ್​ ಚಾಲಕರು ಹೆಚ್ಚುವರಿ ಡ್ಯೂಟಿ ಮಾಡುತ್ತಿದ್ದ ಹಿನ್ನೆಲೆ ಅಪಘಾತ ಪ್ರಕರಣಗಳು ನಡೆಯುತ್ತಿದ್ದವು. ಇದೇ ಕಾರಣಕ್ಕೆ ಮಹತ್ವದ ನಿರ್ಧಾರ ಕೈಗೊಂಡ ಕೆಎಸ್ ​ಆರ್​ ಟಿಸಿ, ಬಸ್​ ಚಾಲಕರಿಗೆ ಡಬಲ್ ಡ್ಯೂಟಿಯಿಂದ ಮುಕ್ತಿ ನೀಡಿದೆ. ಅಲ್ಲದೆ, ವಿಶ್ರಾಂತಿ ಪಡೆಯುವುದು ಕಡ್ಡಾಯ ಎಂದು ಆದೇಶಿಸಲಾಗಿದೆ.

ಇಂದಿನಿಂದ ರಾತ್ರಿ ಮತ್ತು ದೂರದ ಪ್ರಯಾಣದ ನಂತರ ಚಾಲಕರು ವಿಶ್ರಾಂತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಎಂಟು ಗಂಟೆಗಳಿಗಿಂತ ಹೆಚ್ಚು ಡ್ಯೂಟಿ ಮಾಡಿಸುವಂತಿಲ್ಲ. 8 ಗಂಟೆಗಿಂತ ಅಧಿಕ ಮತ್ತು ರಾತ್ರಿ ವೇಳೆ ಹೆಚ್ಚುವರಿ ಡ್ಯೂಟಿ ಮಾಡಿದರೆ ನಾಲ್ಕೈದು ಗಂಟೆಗಳ ಕಾಲ ವಿಶ್ರಾಂತಿಗೆ ಅವಕಾಶ ನೀಡಬೇಕು. ವಾರದಲ್ಲಿ ಕೆಲಸದ ಅವಧಿ 48 ಗಂಟೆ ದಾಟುವಂತಿಲ್ಲ ಎಂದು ಸೂಚಿಸಲಾಗಿದೆ.

ಕೆಎಸ್​ ಆರ್ ​ಟಿಸಿ ಬಸ್​ ಗಳಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಏನೆಂಬುದನ್ನು ಪತ್ತೆಹಚ್ಚಲು ಸಮಿತಿ ರಚನೆ ಮಾಡಲಾಗಿತ್ತು. ಅದರಂತೆ ಡಬಲ್ ಡ್ಯೂಟಿ ಮತ್ತು ರಾತ್ರಿ ವಿಶ್ರಾಂತಿಯನ್ನು ನೀಡದಿರುವುದರಿಂದ ನಿದ್ದೆಗೆಟ್ಟು ಬಸ್ ಚಲಾಯಿಸಲು ಸಾಧ್ಯವಾಗದೆ ಅಪಘಾತಗಳು ಸಂಭವಿಸುತ್ತಿವೆ ಎಂದು ತಿಳಿದುಬಂದಿದೆ. ಈ ಸಂಬಂಧ ಸಮಿತಿಯು ಕೆಎಸ್​ ಆರ್ ​ಟಿಸಿಗೆ ವರದಿ ಸಲ್ಲಿಸಿತ್ತು.

ಇದರ ಬೆನ್ನಲ್ಲೇ, ವರದಿ ಆಧರಿಸಿ ಕೆಎಸ್​ ಆರ್ ​ಟಿಸಿ ಬಸ್ ಚಾಲಕರಿಗೆ ಡಬಲ್​ ಡ್ಯೂಟಿಗೆ ಬ್ರೇಕ್ ಹಾಕಿ ವಿಶ್ರಾಂತಿಗೆ ಅವಕಾಶ ನೀಡಲಾಗಿದೆ.