ಮನೆ ಕಾನೂನು ಲಂಚ ಪಡೆಯುತ್ತಿದ್ದ ನಂಜನಗೂಡು ಬಿಇಒ ಲೋಕಾಯುಕ್ತ ಬಲೆಗೆ

ಲಂಚ ಪಡೆಯುತ್ತಿದ್ದ ನಂಜನಗೂಡು ಬಿಇಒ ಲೋಕಾಯುಕ್ತ ಬಲೆಗೆ

0

ಮೈಸೂರು: ಅಂಗವಿಕಲ ಶಿಕ್ಷಕ ನರಸಿಂಹಮೂರ್ತಿ ಅವರ ಮೂರು ತಿಂಗಳ ಗೌರವ ಧನ ಬಿಡುಗಡೆಗೆ ವಿಶೇಷ ಶಿಕ್ಷಕ ರಮೇಶ ಅವರ ಮೂಲಕ ₹ 5 ಸಾವಿರ ಲಂಚ ಪಡೆಯುತ್ತಿದ್ದ ನಂಜನಗೂಡು ಬಿಇಒ ಎ.ಟಿ.ಶಿವಲಿಂಗಯ್ಯ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Join Our Whatsapp Group

ಬಿಇಒ ಶಿವಲಿಂಗಯ್ಯ ₹ 10 ಸಾವಿರಕ್ಕೆ ಬೇಡಿಕೆ ಇರಿಸಿರುವುದಾಗಿ ನರಸಿಂಹಮೂರ್ತಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆ ಪ್ರಕಾರ ಕಾರ್ಯಾಚರಣೆ ನಡೆಸಿದಾಗ ಶಿವಲಿಂಗಯ್ಯ, ರಮೇಶ ಅವರು ಸಿಕ್ಕಿಬಿದ್ದರು ಎಂದು ಲೋಕಾಯುಕ್ತ ಎಸ್‌ಪಿ ವಿ.ಜೆ.ಸಜಿತ್ ಹೇಳಿದರು.