ಮನೆ ರಾಷ್ಟ್ರೀಯ ತೆಲಂಗಾಣ: ಕುಡಿಯುವ ನೀರಿನ ಟ್ಯಾಂಕ್ ​ನಲ್ಲಿ 30 ಮಂಗಗಳ ಶವ ಪತ್ತೆ

ತೆಲಂಗಾಣ: ಕುಡಿಯುವ ನೀರಿನ ಟ್ಯಾಂಕ್ ​ನಲ್ಲಿ 30 ಮಂಗಗಳ ಶವ ಪತ್ತೆ

0

ತೆಲಂಗಾಣ:  ನಲ್ಗೊಂಡ ಜಿಲ್ಲೆಯ ಕುಡಿಯುವ ನೀರಿನ ಟ್ಯಾಂಕ್ ​ನಲ್ಲಿ 30 ಮಂಗಗಳ ಶವ ಪತ್ತೆಯಾಗಿದೆ.

Join Our Whatsapp Group

ನಂದಿಕೊಂಡ ಪುರಸಭೆಯ ವಾರ್ಡ್ ಸಂಖ್ಯೆ 1 ರ ನೀರಿನ ಟ್ಯಾಂಕ್‌ ನಲ್ಲಿ ಮಂಗಗಳ ಶವಗಳು ತೇಲುತ್ತಿರುವುದು ಕಂಡುಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ನೀರಿನ ಟ್ಯಾಂಕಿನ ಮುಚ್ಚಳ ತೆರೆದಿದ್ದರಿಂದ ಮಂಗಗಳು ಒಳಗೆ ಸಿಲುಕಿಕೊಂಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಟ್ಯಾಂಕ್‌ ನಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಅಲ್ಲಿನ ನಿವಾಸಿಗಳು ಅಧಿಕಾರಿಗಳಿಗೆ ದೂರು ನೀಡಿದ ನಂತರ ಪುರಸಭೆಯ ಸಿಬ್ಬಂದಿ ಸತ್ತ ಮಂಗಗಳನ್ನು ಟ್ಯಾಂಕ್‌ ನಿಂದ ತೆಗೆದಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.