ಕೊಪ್ಪಳ ತಾಲೂಕಿನ ಬಹದ್ದೂರ್ ಬಂಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರೂಷರ್ ವಾಹನ ವೇಗವಾಗಿ ಚಲಿಸುತ್ತಿದ್ದು ಟೈರ್ ಬ್ಲಾಸ್ಟ್ ಆಗಿದೆ. ಇನ್ನೇನು ಅಂಜನಾದ್ರಿ ಬೆಟ್ಟ ತಲುಪಲು ಕೆಲವೇ ದೂರ ಬಾಕಿ ಇತ್ತು. ಅಷ್ಟರಲ್ಲಿ ಇಡೀ ಹೆದ್ದಾರಿಯೇ ನಡುಗುವಂತಹ ಭೀಕರ ಶಬ್ದವೊಂದು ಕೇಳಿಬಂತು ಎನ್ನಲಾಗಿದೆ.
ಬೆಂಕಿಯಂತಹ ಬಿಸಿಲಿನಲ್ಲಿ ಚಲಿಸುತ್ತಿದ್ದ ಕ್ರೂಷರ್ ವಾಹನದ ಟೈರ್ ಇದ್ದಕ್ಕಿದ್ದಹಾಗೆ ಸ್ಫೋಟಗೊಂಡಿದ್ದು . ಕ್ಷಣಾರ್ಧದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆಯಲ್ಲೇ ಪಲ್ಟಿಯಾಗಿ ಬಿದ್ದಿದೆ ಎನ್ನಲಾಗಿದೆ. ಅದರಲ್ಲಿ ಹತ್ತೂ ಮಂದಿಯ ಕಿರುಚಾಟ, ಆಕ್ರಂದನ ನಡುವೆ ಏನಾಯ್ತು ಎಂದು ಯೋಚಿಸುವಷ್ಟರಲ್ಲಿ ದಿಕ್ಕಪಾಲಾಗಿ ಬಿದ್ದಿದ್ದ ಪ್ರಯಾಣಿಕರು. ಈ ಭೀಕರ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವೀಗೀಡಾಗಿದ್ದಾರೆ.ಹಾಗೂ ವಾಹನದಲ್ಲಿದ್ದ ಇಬ್ಬರು ಪ್ರಯಾಣಿಕರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು ಅವರೆಲ್ಲರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ.
ಅದೃಷ್ಟವಶಾತ್ ಕ್ರೂಷರ್ನಲ್ಲಿದ್ದ ಉಳಿದ ಏಳು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ . ಈ ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕೊಪ್ಪಳ ಗ್ರಾಮೀಣ ಪೊಲೀಸರು ಗಾಯಾಳುಗಳನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ ಎನ್ನಲಾಗಿದೆ. ಹನುಮನ ದರ್ಶನ ಪಡೆಯಬೇಕೆಂಬ ಭಕ್ತರ ಆಸೆ ಅರ್ಧ ದಾರಿಯಲ್ಲೇ ಕಮರಿ ಹೋಗಿದ್ದು, ಘಟನೆಯ ಮಾಹಿತಿ ತಿಳಿದು ಮೃತರ ಕುಟುಂಬದವರ ಗೋಳು ಮುಗಿಲು ಮುಟ್ಟಿದೆ ಎನ್ನಬಹುದು.














