ಬೆಂಗಳೂರು : ಫ್ಲೈಓವರ್ ಕೇಬಲ್ ಅಳವಡಿಕೆ ದುರಸ್ತಿ ಕಾಮಗಾರಿ ಹಾಗೂ ಅಂತಿಮ ಲೋಡ್ ಟೆಸ್ಟಿಂಗ್ ಹಿನ್ನೆಲೆ ಬೆಂಗಳೂರಿನ ಪೀಣ್ಯ ಎಲಿವೇಟೆಡ್ ಫ್ಲೈಓವರ್ 4 ದಿನ ಬಂದ್ ಆಗಲಿದೆ. ಮೇ 5ರ ಬೆಳಗ್ಗೆ 5ರಿಂದ ಮೇ 8ರ ಬೆಳಗ್ಗೆ 11ರವರೆಗೆ ಪ್ಲೈಓವರ್ ಕ್ಲೋಸ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.
ಹೀಗಾಗಿ ಫ್ಲೈಓವರ್ನ 2 ಬದಿಯಲ್ಲಿ ವಾಹನ ಸಂಚಾರಗಳಿಗೆ ನಿರ್ಬಂಧ ವಿಧಿಸಲಾಗಿದ್ದು ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಕೆ ಮಾಡುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಸುರಕ್ಷತೆ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಸೂಚನೆಯನ್ನು ವಾಹನ ಸವಾರರು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿನಂತಿಯನ್ನೂ ಮಾಡಿದ್ದಾರೆ.
ನೆಲಮಂಗಲದಿಂದ ಬೆಂಗಳೂರು ಕಡೆಗೆ – ಕೆನ್ನಮೆಟಲ್ ಫ್ಯಾಕ್ಟರಿಹತ್ತಿರ ಫೈಓವರ್ನ ಫೈಓವರ್ ಕೆಳಭಾಗದ ಎನ್.ಹೆಚ್-4 ಮತ್ತು ಸರ್ವಿಸ್ ರಸ್ತೆ ಮೂಲಕ 8ನೇ ಮೈಲಿ ದಾಸರಹಳ್ಳಿ ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್-ಎಸ್.ಆರ್.ಎಸ್ ಜಂಕ್ಷನ್ – ಗೊರಗುಂಟೆಪಾಳ್ಯ- ಜಾಲಹಳ್ಳಿ ಕ್ರಾಸ್ ಮಾರ್ಗ
ಸಿ.ಎಂ.ಟಿ.ಐ- ನೆಲಮಂಗಲ ಕಡೆಗೆ – ಫೈಓವರ್ ಕೆಳಭಾಗದ ಎನ್.ಹೆಚ್.-4 ಮತ್ತು ಸರ್ವಿಸ್ ರಸ್ತೆ ಮೂಲಕ ಎಸ್.ಆರ್.ಎಸ್ ಜಂಕ್ಷನ್- ಪೊಲೀಸ್ ಠಾಣೆ ಜಂಕ್ಷನ್ -ಜಾಲಹಳ್ಳಿ ಕ್ರಾಸ್ ದಾಸರಹಳ್ಳಿ -8ನೇ ಮೈಲಿ-ರ್ಲೆಜಿ ಟೋಲ್
ಈ ಮೊದಲು ಫ್ಲೈಓವರ್ ಕೇಬಲ್ ಅಳವಡಿಕೆ ದುರಸ್ತಿ ಕಾಮಗಾರಿ ಹಾಗೂ ಅಂತಿಮ ಲೋಡ್ ಟೆಸ್ಟಿಂಗ್ ಹಿನ್ನೆಲೆ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಏಪ್ರಿಲ್ 13ರಿಂದ 5 ದಿನ ಬಂದ್ ಆಗಲಿದೆ ಎಂದು ತಿಳಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಪ್ರಕ್ರಿಯೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದೂಡಿದ ಪರಿಣಾಮ ಪ್ಲೈಓವರ್ ಮೇಲೆ ವಾಹನಗಳ ಸಂಚಾರಕ್ಕೆ ಎಂದಿನಂತೆ ಅನವುಮಾಡಿಕೊಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.














