ಮನೆ ರಾಜ್ಯ ಕಲಬುರಗಿಯಲ್ಲಿ ಕಳ್ಳರ ದುಕಾನ್ ಬಂದ್ ಆಗಿವೆ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿಯಲ್ಲಿ ಕಳ್ಳರ ದುಕಾನ್ ಬಂದ್ ಆಗಿವೆ: ಸಚಿವ ಪ್ರಿಯಾಂಕ್ ಖರ್ಗೆ

0

    ಕಲಬುರಗಿಯಲ್ಲಿ ಅಕ್ಕಿ ಸೇರಿದಂತೆ ಹಾಲಿನಪುಡಿಯ ಕಳ್ಳರ ದುಕಾನ್ ಬಂದ್ ಆಗಿವೆ. ಈಗ ಉಮೇಶ್ ಜಾಧವನ ದುಕಾನ್ ಮಾತ್ರ ಓಪನ್ ಇದೆ. ಅದನ್ನೂ ಕೂಡಾ ನೀವೆ ಬಂದ್ ಮಾಡಲಿದ್ದೀರಿ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

    Join Our Whatsapp Group

    ಇಂಗಳಗಿ ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

    ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಿಸುತ್ತೇನೆ ಎನ್ನುತ್ತಿರುವ ಜಾಧವ್

    ಚಿತ್ತಾಪುರದ ಅಪರಂಜಿ ಕಾಣೆಯಾಗಿದ್ದಾನೆ. ಕಳ್ಳರ ಎಲ್ಲ ದುಕಾನ್ ಬಂದ್ ಆಗಿವೆ. ಜಾಧವನ ದುಕಾನ್ ಬಂದ್ ಮಾಡಲು 7 ನೇ ತಾರೀಖು ನೀವೇ ನಿರ್ಧರಿಸಲಿದ್ದೀರಿ. ಬಿಜೆಪಿಗೆ ಯಾವುದೇ ಬದ್ಧತೆ ಇಲ್ಲ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿ ಬಂದ್ ಮಾಡಿಸುತ್ತೇವೆ ಎನ್ನುತ್ತಿದ್ದಾರೆ. ಗ್ಯಾರಂಟಿಗಳು ಬಂದ್ ಮಾಡಿಸಬೇಕಾ? ಎಂದು ಸಭಿಕರನ್ನು ಪ್ರಶ್ನಿಸಿದರು. ಆಗ ಜೋರಾದ ಧ್ವನಿಯಲ್ಲಿ ಪ್ರತಿಕ್ರಿಯೆ ನೀಡಿದ ಸಭಿಕರು ” ಬೇಡ… ಬೇಡ.. ” ಎಂದರು.

    ಗ್ಯಾರಂಟಿ ಯೋಜನೆಗಳ ಹಣ ಸದ್ಭಳಕೆಯಾಗುತ್ತಿದೆ ಎಂದ ಸಚಿವರು ರಾಜ್ಯದ ಜನಸಂಖ್ಯೆಯಲ್ಲಿ 4.60 ಕೋಟಿ ಜನರು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಈ ಎಲ್ಲರೂ ಕಾಂಗ್ರೆಸ್ ಗೆ ಮಾತ್ರ ಓಟು ಹಾಕಿದ್ದಾರ? ಯಾವುದೇ ಪಕ್ಷದವರಿಗೆ ಓಟು ಹಾಕಿದ್ದೀರಿ ಎಂದು ಕೇಳಿದ್ದೇವಾ? ಇಲ್ಲಾ ತಾನೆ? ಎಂದರು.

    ಮೋದಿಗೆ ರೈತರ, ಬಡವರ ದೀನ ದಲಿತರ ಬಗ್ಗೆ ಕಾಳಜಿ ಇಲ್ಲ. ಕಾಂಗ್ರೆಸ್ ಪಕ್ಷ ಮುಂದೆ ಅಧಿಕಾರಕ್ಕೆ ಬಂದಾಗ ಮತ್ತೆ ಐದು ಪ್ರಮುಖ ಗ್ಯಾರಂಟಿಗಳನ್ನು ಜಾರಿಗೊಳಿಸಲಿದ್ದೇವೆ ಎಂದು ಸಚಿವರು ಹೇಳಿದರು.

    ಮೋದಿ ಹಳೇ ಗ್ಯಾರೆಂಟಿ ಈಡೇರಿಸಿಲ್ಲ ಈಗ ಪುನಃ ವಾರೆಂಟಿ ಇಲ್ಲದ ಹೊಸ ಗ್ಯಾರೆಂಟಿ

    ಈ ಹಿಂದಿನ ಮೋದಿ ಅವರ ಭರವಸೆಗಳನ್ನು ನೆನಪಿಸಿಕೊಂಡ ಖರ್ಗೆ ಎರಡು ಕೋಟಿ ಉದ್ಯೋಗ, ರೈತರ ಆದಾಯ ದ್ವಿಗುಣ, ಕೋಲಿ ಕಬ್ಬಲಿಗ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸುವ ಎಲ್ಲ ಗ್ಯಾರಂಟಿಗಳು ಏನಾದವು? ಯಾವ ಗ್ಯಾರಂಟಿಗಳನ್ನು ಈಡೇರಿಸಿಲ್ಲ. ಆದರೂ ಈಗ ಮತ್ತೆ ಮೋದಿ ಹೊಸ ಗ್ಯಾರಂಟಿಗಳೊಂದಿಗೆ ಬರುತ್ತಿದ್ದಾರೆ. ಅವರ ಗ್ಯಾರಂಟಿಗಳಿಗೆ ಯಾವುದೇ ವಾರೆಂಟಿ ಇರುವುದಿಲ್ಲ. ಅವುಗಳನ್ನು ನಂಬದೇ ಕಾಂಗ್ರೆಸ್ ಗೆ ಮತ ನೀಡಿ ಕೇಂದ್ರದಲ್ಲಿ ಜನರ ಪರವಾದ ಆಡಳಿತ ಬರುವುದಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

    ವೇದಿಕೆಯ ಮೇಲೆ ಮಹೇಮೂದ್ ಸಾಹೇಬ್, ಶಿವಾನಂದ ಪಾಟೀಲ, ಅಣ್ಣಾರಾವ್ ಪೊಲೀಸ್ ಪಾಟೀಲ, ಮುಕ್ರಂ ಪಟೇಲ್ ಸೇರಿದಂತೆ ಹಲವರಿದ್ದರು.