ಮನೆ ರಾಜಕೀಯ ತನ್ವೀರ್ ಸೇಠ್ ಗೆ ಡಿಸಿಎಂ ಸ್ಥಾನ ಸಿಗಲಿ: ಅಭಿಮಾನಿಗಳಿಂದ ಅಭಿಯಾನ

ತನ್ವೀರ್ ಸೇಠ್ ಗೆ ಡಿಸಿಎಂ ಸ್ಥಾನ ಸಿಗಲಿ: ಅಭಿಮಾನಿಗಳಿಂದ ಅಭಿಯಾನ

0

ಮೈಸೂರು: ಈಗಾಗಲೇ ಕಾಂಗ್ರೆಸ್ ನಲ್ಲಿ ಸಿಎಂ ಗಾದಿಗಾಗಿ ಪೈಪೋಟಿ ನಡೆಯುತ್ತಿರುವ ವೇಳೆಯಲ್ಲಿ ಇತ್ತ ಪಕ್ಷದ ಹಿರಿತನದಲ್ಲಿ ಶಾಸಕ ತನ್ವೀರ್ ಸೇಠ್ ಗೆ ಡಿಸಿಎಂ ಸ್ಥಾನ ಸಿಗಲಿ ಎಂಬ ಕೂಗಿನ ಅಭಿಯಾನ ಆರಂಭಗೊಂಡಿದೆ.
ಈ ಸಂಬಂಧ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ನ ಸಮಿತಿ ಸದಸ್ಯ ಲೋಕೇಶ್ ಅವರು ತಮ್ಮ ಫೇಸಬುಕ್ ಪೇಜ್ ನಲ್ಲಿ ಶಾಸಕ ತನ್ವೀರ್ ಸೇಠ್ ಅವರ ಸಾಧನೆಯ ಸಂಪೂರ್ಣ ವಿವರಗಳನ್ನು ಬರೆದಿದ್ದಾರೆ. ಎರಡು ಬಾರಿ ಸಚಿವರಾಗಿ, ಐದು ಬಾರಿ ಶಾಸಕರಾಗಿ ಶಿಕ್ಷಣ ಸೇರಿ ಹಲವಾರು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿ ಅನೇಕ ಕೊಡುಗೆಗಳನ್ನು ನೀಡಿರುವ ಕುರಿತು ಬರೆದು ಕೊನೆಯಲ್ಲಿ ೨೦೨೩ ರ ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ದೊರಕಲಿ ಎಂದು ಮನವಿ ಮಾಡಿದ್ದಾರೆ.

ಹಿಂದಿನ ಲೇಖನಪಾರಿವಾಳ ಕದ್ದ ವಿಚಾರಕ್ಕಾಗಿ ಗಲಾಟೆ: ಕೊಲೆಯಲ್ಲಿ ಅಂತ್ಯ
ಮುಂದಿನ ಲೇಖನಅಪರಿಚಿತ ವಾಹನ ಡಿಕ್ಕಿ: ಜಿಂಕೆ ಸಾವು