ಮನೆ ಕಾನೂನು ವಕೀಲರ ಸಂಘದಲ್ಲಿ ಶೇ. 33 ಮಹಿಳೆಯರಿಗೆ ಮೀಸಲಾತಿ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ವಕೀಲರ ಸಂಘದಲ್ಲಿ ಶೇ. 33 ಮಹಿಳೆಯರಿಗೆ ಮೀಸಲಾತಿ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

0

ಸುಪ್ರೀಂ ಕೋರ್ಟ್ ವಕೀಲರ ಸಂಘ (ಎಸ್‌ಸಿಬಿಎ) ಕಾರ್ಯಕಾರಿ ಸಮಿತಿಯಲ್ಲಿ ಕನಿಷ್ಟ ಮೂರನೇ ಒಂದರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

Join Our Whatsapp Group

ಸುಪ್ರೀಂ ಕೋರ್ಟ್‌ ನ ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ಕೆ.ವಿ. ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.

ಮೇ 16ರಂದು ಸುಪ್ರೀಂ ಕೋರ್ಟ್‌ ಬಾರ್ ಅಸೋಸಿಯೇಷನ್‌ಗೆ ಚುನಾವಣೆ ಘೋಷಣೆಯಾಗಿದ್ದು, ಈ ಚುನಾವಣೆಗೆ ಎರಡು ವಾರಗಳು ಬಾಕಿ ಇರುವಾಗಲೇ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ.

ಮುಂಬರುವ ಚುನಾವಣೆಯ ಖಜಾಂಚಿ, ಕಾರ್ಯಕಾರಿ ಸಮಿತಿಯ ಒಂಭತ್ತು ಹುದ್ದೆಗಳಲ್ಲಿ ಮೂರು ಮತ್ತು ಹಿರಿಯ ಕಾರ್ಯಕಾರಿ ಸಮಿತಿ 6 ಸದಸ್ಯರ ಪೈಕಿ ಎರಡು  ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಬೇಕು ಎಂದು ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.