ಮನೆ ಆರೋಗ್ಯ ಕರೋನರಿ ಹಾರ್ಟ್ ಡಿಸೀಜ್

ಕರೋನರಿ ಹಾರ್ಟ್ ಡಿಸೀಜ್

0

 ಹೃದಯದ ಮಾಂಸಖಂಡಗಳಿಗೆ ರಕ್ತವನ್ನು ತರುವ ಕರೋನರಿ ನಾಳಗಳ ಒಳಗೆ ಕೊಲೆಸ್ಟರಾಲ್ ನಿಂದಾಗಲಿ,ಸಾವಯವ ಪದಾರ್ಥಗಳಿಂದಾಗಲಿ, ಅಥವಾ ಇತರ ಕಾರಣಗಳಿಂದ ಕೊಬ್ಬು ಹೆಚ್ಚಾಗಿ ನಾಳಗಳ ಒಳವ್ಯಾಸ ಕಡಿಮೆಯಾಗುತ್ತದೆ. ಧಮನಿಗಳ ಹೊರ ಪದರ ಗಟ್ಟಿಯಾಗುವುದನ್ನು Atherosclerosis ಎನ್ನುತ್ತಾರೆ.

Join Our Whatsapp Group

★ ಸಹಜ ಪರಿಸ್ಥಿತಿಯಲ್ಲಿ ಮೃದುವಾಗಿರುವ ಕರೋನರಿ ಧಮನಿಗಳ ಹೊರ ಪದರ ಕೊಬ್ಬು ಪದಾರ್ಥಗಳು ಶೇಖರವಾದಂತೆ ಗಟ್ಟಿಯಾಗುತ್ತದೆ.

 ಕೆಲವು ದಿನಗಳಲ್ಲಿ ಕೊಬ್ಬು ಹೆಚ್ಚುತ್ತಿದ್ದಂತೆ ಧಮನಿಗಳು ಸಂಕುಚಿತಗೊಳ್ಳುತ್ತವೆ ಇದರಿಂದ ಅವುಗಳಿಂದ ಹರಿಯುವ ರಕ್ತ ಕಡಿಮೆಯಾಗುತ್ತದೆ .

 ★ಕರೋನರಿ ಧಮಗಳಿಂದ ಹರಿದು ಬರುವ ರಕ್ತಕಡಿಮೆಯಾಗುತ್ತಿದ್ದಂತೆ, ಹೃದಯದ ಮಾಂಸಖಂಡಗಳಿಗೆ ಬೇಕಾದ ಆಮ್ಲಜನಕ ದೊರಕದೆ ಹೃದಯ ಕ್ಕಿಣಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿರುವ ಮನುಷ್ಯನಿಗೆ ಮಾನಸಿಕವಾಗಿಯೋ, ಶಾರೀರಿಕವಾಗಿಯೋ ಒತ್ತಡ ಹೆಚ್ಚಾದರೆ ಹಠಾತ್ತನೆ ಬಂದ ಒತ್ತಡದಿಂದ ಹೃದಯ ನೆಲುಗಿಹೋಗುತ್ತದೆ.

 ★ಕರೋನರಿ ಧಮನಿಗಳು ಸಂಕುಚಿತವಾಗುವುದರಿಂದ ಆಗುವ ತೊಂದರೆಗಳನ್ನು ಕರೋನರಿ ಹಾರ್ಟಾ ಡಿಸೀಜ್ ಎನ್ನುತ್ತಾರೆ ವೈದ್ಯಕೀಯ ಭಾಷೆಯಲ್ಲಿ Ishaemic Heart Disease (IHD) Coronary Artery Disease(CAD)ಎನ್ನುತ್ತಾರೆ. Myocaroial Ischaemia ಎಂದು ಹೇಳುತ್ತಾರೆ 

 ★ ಕರೋನರಿ ಹರ್ಟ್ಡ ಡಿಸೀಜ್  ಸಾಮಾನ್ಯ ಆಗಿ ಮಧ್ಯವಹಿಸಿನ ಗಂಡಸರಿಗೆ ಬರುವ ಸಾಧ್ಯತೆ ಹೆಚ್ಚು. ಅಮೆರಿಕದಲ್ಲಿ ಆರೋಗ್ಯ ವಂತರಾದ ಗಂಡಸರಿಗೆ 50 ವರ್ಷ ವಯಸ್ಸಾಗುವವರೆಗೆ ಪ್ರತಿ ಜನರಲ್ಲಿ ಒಬ್ಬರಿಗೆ ಬರುತ್ತದೆ ಎಂದು, ಒಂದು ಅಂಕಿ ಅಂಶ ತಿಳಿಸುತ್ತದೆ.

★ ಮಧ್ಯ ವಯಸ್ಕ ಸ್ತ್ರೀಯರಿಗೂ ಈ ಕಾಯಿಲೆ ಬರುವ ಸಾಧ್ಯತೆಯಿದೆ.

  ★ಇತ್ತೀಚೆಗೆ ನಮ್ಮ ದೇಶದಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ 30 ರಿಂದ 40 ವರ್ಷ ವಯಸ್ಸಿನ ಪುರುಷರುಗೆ ಈ ರೋಗ ಬರುವುದು.

 ★ನಮ್ಮ ದೇಶದಲ್ಲಿ 100 ರಲ್ಲಿ 80 ಜನಕ್ಕೆ ಈ ವ್ಯಾದಿ ಉಂಟಾಗುವ ಸಾಧ್ಯತೆ ಇದೆ. ಈ ವಿಷಯದಲ್ಲಿ ನಾವು ಪಾಶ್ಚತ್ಯ ದೇಶದವರೂಡನೆ ಸ್ಪರ್ಧೆಗಿಳಿಯುತ್ತಿದ್ದೇವೆ ಎಂದೆನಿಸುತ್ತದೆ.