ಮನೆ ಯೋಗಾಸನ ಭುಜಂಗಾಸನ

ಭುಜಂಗಾಸನ

0

‘ಭುಜಂಗ ’ವೆಂದರೆ ಹಾವು ಆಸನ ಭಂಗಿಯಲ್ಲಿ ಕೆಳಮೊಗಮಾಡಿ, ನೆಲದಮೇಲೆ ಮಲಗಿ, ಮುಂಡವನ್ನು ಮೇಲೆತ್ತಿ ತಲೆಯನ್ನು ಹಿಂಬದಿಗೆ ದೂಡಬೇಕು. ಆಗ  ಈ ಭಂಗಿಯು ರೋಷದಿಂದ ಹೆಡೆಯೆತ್ತಿ ಕಚ್ಚಲು ಸಿದ್ಧವಾಗಿರುವ ಸರ್ಪವನ್ನು ಹೋಲುವುದರಿಂದ ಇದಕ್ಕೆ ಈ  ಹೆಸರು.

Join Our Whatsapp Group

1. ಮೊದಲು ಕೆಳಮೊಗಮಾಡಿ, ನೆಲದಮೇಲೆ ಉದ್ದಕ್ಕೂ ಮಲಗಿ ಕಾಲುಗಳನ್ನು ನೀಳಮಾಡಿ ಪಾದಗಳೆರಡನ್ನೂ ಜೋಡಿಸಿಟ್ಟು,ಮಂಡಿಗಳನ್ನು ಬಿಗಿಗೊಳಿಸಿ ಕಾಲ್ಬೆರಳುಗಳನ್ನು ತುದಿ ಮಾಡಿರಬೇಕು.

2. ಆ ಬಳಿಕ,ಅಂಗೈಗಳೆರಡನ್ನೂ ವಸ್ತಿಕುಹರ(Pelvis)ದೆಡೆಯಲ್ಲಿ ನೆಲೆಸಿಡಬೇಕು.

 3.ಉಸಿರನ್ನು ಒಳಕ್ಕೆಳೆದು ಅಂಗೈಗಳೆರಡನ್ನೂ ನೆಲದ ಮೇಲೆ ಬಲವಾಗಿ ಊಸಿಟ್ಟು ಮುಂಡ ಭಾಗವನ್ನು ಎಳೆದು ಮೇಲೇಳಿಸಬೇಕು( ಚಿತ್ರ 72 ) ಬಳಿಕ ಎರಡು ಸಲ ಉಸಿರಾಟ ನಡೆಸಬೇಕು.

 4.ಅನಂತರ ಉಸಿರನ್ನು ಮತ್ತೆ ಒಳಕ್ಕೆಳೆದು, ಜನನೇಂದ್ರಿಯದ   ಮೇಲೆ ಅದನ್ನಂಟಿ ಕೊಂಡಿರುವ ಎಲುಬು (Pubis)ನೆಲವನ್ನು ಮುಟ್ಟುವವರೆಗೂ ಮುಂಡದಿಂದ ಶರೀರವನ್ನು ಮೇಲಕ್ಕೆತ್ತಿ, ದೇಹ ಭಾರವನ್ನು ಕಾಲು ಅಂಗೈಗಳ ಮೇಲೆ ಹೊರಿಸಿ, ಈ ಭಂಗಿಯಲ್ಲಿ ಸ್ವಲ್ಪ ಕಾಲ ನೆಲೆಸಬೇಕು

5. ಆಮೇಲೆ ಅಸನದ್ವಾರವನ್ನು ಸಂಕುಚಿಸಿ (ಕುಗ್ಗಿಸಿ )ತೊಡೆಗಳನ್ನು ಬಿಗಿ ಮಾಡಬೇಕು.

 6.ಈ ಭಂಗಿಯಲ್ಲಿ ಸುಮಾರು 20 ಸೆಕೆಂಡುಗಳಕಾಲ, ಸಾಮಾನ್ಯ ಉಸಿರಾಟ ನಡೆಸುತ್ತ. ನೆಲೆಸಬೇಕು.

 7. ಉಸಿರನ್ನು ಹೊರಕ್ಕೆ ಬಿಟ್ಟು ಮುಂಡವನ್ನು ನೆಲಕ್ಕೆ ಒರಗಿಸಬೇಕು. ಈ ಭಂಗಿಯನ್ನು ಎರಡುಮೂರು ಸಲ ಮತ್ತೆ ಮತ್ತೆ ಮಾಡಿ ಬಳಿಕ ವಿಶ್ರಮಿಸಿಕೊಳ್ಳಬೇಕು.