ಎಲ್ಲೆಲ್ಲೂ ನೀನಿರುವೆ ಮೂಕಾಂಬಿಕೆ ||
ಆದರಿಲ್ಲಿರುವ ನಿನಗಿಲ್ಲ ಹೋಲಿಕೆ |
ಆದಿಗುರು ಶಂಕರನ ತಪದ ಬಲವೆ|
ನೀನಾದೆ ಜಗದಂಬಿಕೆ ||ಎಲ್ಲೆಲ್ಲೂ||
ಕಲ್ಪನೆಗೆ ಮೀರಿದ ಕಲ್ಪಲತೆ
ದಯಾರಸವಾಹಿಣಿ ಧರ್ಮಲತೆ ||
ಆದಿಶಕ್ತಿ ನೀ ಅಮೃತವರ್ಷಿಣೀ ||
ಅಂಬಾ ಶರಣು ಜಗಜನನಿ || ಎಲ್ಲೆಲ್ಲೂ ||
ಜ್ಞಾನ ಗಂಗೆ ನೀ ಭಾರತೀ
ಸರ್ವಶಕ್ತಿ ನೀ ಶಿವನ ಸತೀ||
ಸರಸಿಜಾಕ್ಷನ ಶ್ರೀಮತೀ ||
ಮೂರು ಶಕ್ತಿಗಳ ಮೂಕುತಿ ||ಎಲ್ಲೆಲ್ಲೂ ||