ನವದೆಹಲಿ: ಅಬುಜ್ಮಾರ್ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ 8 ನಕ್ಸಲರು ಹತರಾಗಿದ್ದಾರೆ.
ಒಬ್ಬ ಯೋಧ ಪಟ್ಟಿದ್ದಾರೆ. ಇಬ್ಬರಿಗೆ ಗಾಯಗಳಾಗಿವೆ. ಛತ್ತೀಸ್ ಗಢದ ನಾರಾಯಣಪುರ ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಸುದೀರ್ಘ ಗುಂಡಿನ ಚಕಮಕಿ ನಡೆಯುತ್ತಿದೆ.
ಅಬುಜ್ಮಾರ್ ನಾರಾಯಣಪುರ, ಬಿಜಾಪುರ ಜಿಲ್ಲೆ ಮತ್ತು ದಾಂತೇವಾಡ ಜಿಲ್ಲೆಗಳಲ್ಲಿ ಬರುವ ಗುಡ್ಡಗಾಡು, ಅರಣ್ಯ ಪ್ರದೇಶವಾಗಿದೆ. ಭೌಗೋಳಿಕವಾಗಿ ಪ್ರತ್ಯೇಕವಾದ ಮತ್ತು ಹೆಚ್ಚಾಗಿ ಪ್ರವೇಶಿಸಲಾಗದ ಈ ಪ್ರದೇಶವನ್ನು ಮಾವೋವಾದಿಗಳ ಚಟುವಟಿಕೆಗಳ ಕೇಂದ್ರವೆಂದು ಪರಿಗಣಿಸಲಾಗಿದೆ.
ನಾರಾಯಣಪುರ, ಕಂಕೇರ್, ದಾಂತೇವಾಡ ಮತ್ತು ಕೊಂಡಗಾಂವ್ ಎಂಬ 4 ಜಿಲ್ಲೆಗಳ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಅಬುಜ್ಮಾರ್ ಅರಣ್ಯದಲ್ಲಿ ಇಂದು ಬೆಳಗ್ಗೆ ಗುಂಡಿನ ಚಕಮಕಿ ನಡೆದಿದೆ ಎಂದು ಪಿಟಿಐ ವರದಿ ಮಾಡಿದೆ.
4 ಜಿಲ್ಲೆಗಳ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆ ರ್‌ಜಿ) ಸಿಬ್ಬಂದಿ, ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಇಂಡೋ ಟಿಬೆಟಿಯನ್ ಬಾರ್ಡರ್ ಪೋಲೀಸ್ (ಐಟಿಬಿಪಿ) 53 ನೇ ಬೆಟಾಲಿಯನ್ ಅನ್ನು ಒಳಗೊಂಡ ಕಾರ್ಯಾಚರಣೆಯನ್ನು ಜೂನ್ 12ರಂದು ಪ್ರಾರಂಭಿಸಲಾಯಿತು.
ಈ ತಿಂಗಳ ಆರಂಭದಲ್ಲಿ ನಾರಾಯಣಪುರದಲ್ಲಿ 6 ಮಾವೋವಾದಿಗಳನ್ನು ಹತ್ಯೆ ಮಾಡಲಾಗಿತ್ತು. ಛತ್ತೀಸ್ ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು 6 ಮಾವೋವಾದಿಗಳನ್ನು ಹತ್ಯೆ ಮಾಡಿದ ಕೆಲವು ದಿನಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ.