ಮನೆ ಅಪರಾಧ ಬೆಂಗಳೂರು: ಆಟೋ ಚಾಲಕನ ಮೇಲೆ ಕ್ರೇನ್ ಹರಿದು ವ್ಯಕ್ತಿ ಸಾವು

ಬೆಂಗಳೂರು: ಆಟೋ ಚಾಲಕನ ಮೇಲೆ ಕ್ರೇನ್ ಹರಿದು ವ್ಯಕ್ತಿ ಸಾವು

0

ಬೆಂಗಳೂರು : ಬೆಂಗಳೂರಿನಲ್ಲಿ ಕ್ರೇನ್ ಹರಿದು ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

Join Our Whatsapp Group

ಇಂದು ಬೆಳಿಗ್ಗೆ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ಆಟೋ ನಿಲ್ಲಿಸಿ ಮಲಗಿದ್ದ ಆಟೋ ಚಾಲಕನ ಮೇಲೆ ಕ್ರೇನ್ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಆಟೋ ಚಾಲಕನನ್ನು ವಿನೋದ್ ಕುಮಾರ್ (೩೯) ಎಂದು ಗುರುತಿಸಲಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.