ಮನೆ ಯೋಗಾಸನ ಬದ್ಧಪದ್ಮಾಸನ

ಬದ್ಧಪದ್ಮಾಸನ

0

ಬದ್ದವೆಂದರೆ ಕಟ್ಟಲ್ಪಟ್ಟ ಅಥವಾ ಬಿಗಿತನಕ್ಕೆ ಒಳಗಾದುದು ಈ ಭಂಗಿಯಲ್ಲಿ ಕೈಗಳನ್ನು ಬೆನ್ನಹಿಂದೆ ಎದುರು ಬದರು ದಿಕ್ಕಿನಲ್ಲಿ ಅಡ್ಡಾಗಿಸಿದ ಅವುಗಳಿಂದ ಕಾಲಿನ ಹೆಬ್ಬೆರಳುಗಳನ್ನು ಹಿಂಗಡೆಗೆಯಿಂದ ಬಿಗಿಯುವುದು,ಮುಂಗಡೆ ಅಡ್ಡಾಗಿಸಿದ ಕಾಲುಗಳೂ. ಹಿಂಗಡೆಯಲ್ಲಿ ಅದೇ ಬಗೆಯಲ್ಲಿ ಕೈಗಳೂ, ಇವೆರಡರ ಮಧ್ಯೆ ದೇಹವು ಹಿಡಿತಕ್ಕೆ ಒಳಪಟ್ಟಿರುವುದರಿಂದ ಈ ಭಂಗಿಗೆ ಈ ಹೆಸರು.

Join Our Whatsapp Group

 ಅಭ್ಯಾಸ ಕ್ರಮ

1. ಮೊದಲು ಪದ್ಮಾಸನದ ಭಂಗಿಯಲ್ಲಿ ನೆಲದ ಮೇಲೆ ಕುಳಿತುಕೊಳ್ಳಬೇಕು

2. ಬಳಿಕ ಉಸಿರನ್ನು ಹೊರಕ್ಕೆ ಬಿಟ್ಟು ಎಡಗೈಯನ್ನು ಭುಜಗಳಿಂದ ತೂಗಿಟ್ಟು ಬೆನ್ನ ಹಿಂದೆ ಬಲದೃಷ್ಟದ ಬಳಿಕೆ ಬರುವಂತೆ ಒಗೆದು, ಅದರಿಂದ ಎಡಗಾಲ ಹೆಬ್ಬೆರಳನ್ನು ಹಿಡಿದು, ಉಸಿರನ್ನು ಒಳಕ್ಕೆ ಳೆದುಕೊಳ್ಳಬೇಕು.

3. ಆಮೇಲೆ, ಮೇಲಿನ ಬಗೆಯಲ್ಲಿಯೇ ಉಸಿರನ್ನು ಹೊರಕ್ಕೆ ಬಿಟ್ಟು ಬಲಗೈಯನ್ನು ಬೆನ್ನಹಿಂದೆ ಬರುವಂತೆ ಬೀಸಿ ಟ್ಟು ಎಡವೃಷ್ಠದ ಬಳಿ ಅದನ್ನು ತಂದು, ಅದರಿಂದ ಬಲಗಾಲು ಹೆಬ್ಬೆರಳನ್ನು ಹಿಡಿದು ಉಸಿರನ್ನು ಒಳಕ್ಕೆಳೆಯಬೇಕು. 

4. ಅನಂತರ ಕಾಲ ಹೆಬ್ಬೆರಳುಗಳನ್ನು ಆಯಾ ಕೈಗಳಿಂದ ಹಿಡಿದುಕೊಳ್ಳುವುದು ಕಷ್ಟವಾಗಿ ತೋರಿದಲ್ಲಿ ,ಭುಜಗಳನ್ನು ಹಿಂದಕ್ಕೆ ಹೀಗ್ಗಿಸಿ, ಹೆಗಲೆಲ ಲುಬುಗಳನ್ನು ಒಂದರ ಬಳಿ ಮತ್ತೊಂದನ್ನು ತರಬೇಕು. ಉಸಿರು ಹೊರಕ್ಕೆ ಬಿಟ್ಟು  ಕೈಗಳನ್ನು ಬಿಸಿ ಹಿಂದಕ್ಕೆ ತರುವುದು ಅಭ್ಯಾಸದಿಂದ ಸುಗಮವಾಗಿ ಕೈಗಳು ಕಾಲ್ಬೇ ರಳುಗಳನ್ನು ಹಿಡಿದುಕೊಳ್ಳಲು ಸಾಧ್ಯವಾಗುತ್ತದೆ.

5. ಮೊದಲು ಬಲಪಾದವನ್ನು ಎಡತೊಡೆಯ ಮೇಲೆಯೂ, ಬಳಿಕ ಎಡಪಾದವನ್ನು ಬಲತೊಡೆಯ ಮೇಲೆಯೂ ತಂದಿಟ್ಟುದೇ ಆದರೆ,ಎಡದುಂಗುಟವನ್ನು ಎಡಗೈಯಿಂದ ಹಿಡಿದು, ಬಳಿಕ ಬಲಗೈಯಿಂದ ಬಲಗಾಲಿನುಂ ಗುಟವನ್ನು ಹಿಡಿದುಕೊಳ್ಳಬೇಕು ಹಾಗಲ್ಲದೆ, ಮೊದಲು ಎಡಪಾದವನ್ನು ಬಲ ತೊಳೆಯ ಮೇಲೆಯೂ, ಬಳಿಕ ಎಡಪಾದಗಳನ್ನು ಬಲತೊಡೆಯ ಮೇಲೆಯೂ, ತೊಂದುದೇ ಆದರೆ ಮೊದಲು ಬಲದುಂಗುಟವನ್ನು  ಆ ಬಲ ಕೈಯಿಂದಲೂ,ಆಮೇಲೆ ಎಡ ದುಂಗುಟವನ್ನು ಎಡಗೈಯಿಂದಲೂ ಹಿಡಿದುಕೊಳ್ಳಬೇಕು.ಈ ಭಂಗಿಯಲ್ಲಿ ಕಾಲ್ಬೇ ಬರಳುಗಳಲ್ಲಿ ಉಂಗುಟವೇ ಮೇಲಿರುವುದರಿಂದ ಅದನ್ನೇ ಹಿಡಿದುಕೊಳ್ಳಬೇಕು.

6. ಆ ಬಳಿಕ ತಲೆಯನ್ನು ಸಾಧ್ಯವಾದಷ್ಟು ಹಿಂದಕ್ಕೆ ಬೀಸಿಟ್ಟು ಬಾಗಿಸಿ ನೀಳವಾಗಿ ಉಸಿರಾಟ ನಡೆಸಬೇಕು.

7. ಇದಾದ ಮೇಲೆ ಉಸಿರನ್ನು ನೀಳವಾಗಿ ಒಳಕ್ಕೆಳೆದು ಬಳಿಕ ಉಸಿರನ್ನು ಹೊರಕ್ಕೆ ಬಿಟ್ಟು, ಮುಂಡವನ್ನು ಪೃಷ್ಠಿಗಳಿಂದ ಮುಂಬರುವಂತೆ ಬಾಗಿಸಿ, ಕಾಲ್ಬೆರಳುಗಳನ್ನು ಕೈ ಬಿಗಿತದಿಂದ ಸಡಿಲಗೊಳಿಸದೆ,ತಲೆಯನ್ನು ನೆಲದ ಮೇಲೋಗಿಸಿರಬೇಕು.‘ಬದ್ದಪದ್ಮಾಸನ’ದಲ್ಲಿ ಮುಂದಕ್ಕೆ ಬಾಗಿ ನೆಲದಮೇಲೆ ತಲೆಯನ್ನೊರಗಿಸಿಡುವುದೇ ‘ಯೋಗಮುದ್ರಾಸನ’.