ಮನೆ ಅಪರಾಧ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸ: ಪೊಲೀಸ್ ಕಾನ್‍ ಸ್ಟೆಬಲ್ ವಿರುದ್ಧ ದೂರು

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮೋಸ: ಪೊಲೀಸ್ ಕಾನ್‍ ಸ್ಟೆಬಲ್ ವಿರುದ್ಧ ದೂರು

0

ಕಾರವಾರ: ಹಾಸನ ಮೂಲದ ಯುವತಿಯೊಬ್ಬರು ಪೊಲೀಸ್ ಕಾನ್‍ಸ್ಟೆಬಲ್ ಮೇಲೆ 420 ಕೇಸ್ ದಾಖಲಿಸಿದ್ದಾರೆ.

Join Our Whatsapp Group

ಉತ್ತರ ಕನ್ನಡ ಜಿಲ್ಲೆಯ ಮುಂಡಗೊಡ ಪೊಲೀಸ್ ಠಾಣೆ ಕಾನ್‍ಸ್ಟೆಬಲ್ ಗಿರೀಶ್ ಎಸ್ ಎಮ್ ವಿರುದ್ಧ ಸುಚಿತ್ರಾ ಎಂಬ ಯುವತಿ ಕೇಸ್ ದಾಖಲಿಸಿದ್ದಾರೆ.

ಹಾಸನ ಜಿಲ್ಲಾ ಚೆನ್ನರಾಯಪಟ್ಟಣ ಮೂಲದ ಸುಚಿತ್ರಾ ಎಂಬ ಯುವತಿಗೆ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಯುವತಿಯಿಂದ ಕಾನ್‍ಸ್ಟೆಬಲ್ ಗಿರೀಶ್ 20 ಲಕ್ಷ ಪಡೆದಿದ್ದ. ಹಣ ಪಡೆದ ಬಳಿಕ ಮದುವೆ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಮೋಸ ಮಾಡಿದ್ದ. ಸುಚಿತ್ರಾಳಿಂದ ಪಡೆದ ಹಣ ಕೂಡ ಹಿಂತಿರುಗಿಸಲು ನಿರಾಕರಿಸಿದ್ದ. ಈ ವಿಚಾರವಾಗಿ ಕೆಲ ತಿಂಗಳ ಹಿಂದೆ ಉತ್ತರ ಕನ್ನಡ ಎಸ್ ಪಿ ಗೆ ದೂರು ನೀಡಿದ್ದಳು. ಬಳಿಕ ಪೊಲೀಸ್ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಣ ಹಿಂತಿರುಗಿಸುವುದಾಗಿ ಗಿರೀಶ್ ಒಪ್ಪಿದ್ದ. ಆದರೆ ಇದುವರೆಗೂ ಯುವತಿಗೆ ಹಣ ಹಿಂತಿರುಗಿಸಿಲ್ಲ. ಹೀಗಾಗಿ ನಿನ್ನೆ ರಾತ್ರಿ ಮುಂಡಗೊಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.