ಮನೆ ಅಂತಾರಾಷ್ಟ್ರೀಯ ಸಿಧು ಮೂಸೆವಾಲಾ ಹತ್ಯೆ ಹೊಣೆ ಹೊತ್ತ ಕೆನಡಾ ಮೂಲದ ಗ್ಯಾಂಗ್ ಸ್ಟರ್

ಸಿಧು ಮೂಸೆವಾಲಾ ಹತ್ಯೆ ಹೊಣೆ ಹೊತ್ತ ಕೆನಡಾ ಮೂಲದ ಗ್ಯಾಂಗ್ ಸ್ಟರ್

0

ಚಂಡೀಗಡ(Chandighad): ಕಾಂಗ್ರೆಸ್ ಮುಖಂಡ ಮತ್ತು ಪಂಜಾಬ್ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಹೊಣೆಯನ್ನು ಕೆನಡಾ ಮೂಲದ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್  ಹೊತ್ತುಕೊಂಡಿದ್ದಾನೆ.
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸಹಚರ ಗೋಲ್ಡಿ, ಮೂಸೆವಾಲಾ ಮೇಲೆ 30ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಿ ಹತ್ಯೆಗೈದಿದ್ದಾನೆ.

ಮೂಸೆವಾಲಾ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬ್ ಸಿಎಂ ಭಗವಂತ್ ಮಾನ್, ಈ ಘಟನೆಯಿಂದ ಆಘಾತವಾಗಿದೆ.  ಜನರು ದಯವಿಟ್ಟು ಶಾಂತತೆಯಿಂದ ವರ್ತಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಪಂಜಾಬ್‌ನಲ್ಲಿ ಮೂಸೆವಾಲಾ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆದ 24 ಗಂಟೆಗಳಲ್ಲೇ ಅವರನ್ನು ಗುಂಡಿಕ್ಕಿ ಹತ್ಯೆಮಾಡಲಾಗಿದೆ.

ಪಂಜಾಬಿ ಗಾಯಕರಾಗಿ ಹೆಸರು ಗಳಿಸಿದ್ದ ಮೂಸೆವಾಲ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು.

ಎರಡು ಗ್ಯಾಂಗ್ ವೈಷಮ್ಯದಿಂದ ಹತ್ಯೆ: ಕಾಂಗ್ರೆಸ್‌ ನಾಯಕ ಹಾಗೂ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಯು ಎರಡು ಗ್ಯಾಂಗ್‌ಗಳ ನಡುವಿನ ವೈಷಮ್ಯದಿಂದಾಗಿ ನಡೆದಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ವಿ.ಕೆ.ಭಾವರಾ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಮತ್ತು ಲಕ್ಕಿ ಪಟಿಯಾಲಾ ಗ್ಯಾಂಗ್‌ ನಡುವೆ ವೈಷಮ್ಯವಿದೆ. ವಿಕ್ಕಿ ಮಿಧುಖೇರಾ ಹತ್ಯೆಗೆ ಪ್ರತೀಕಾರವಾಗಿ ಸಿಧು ಮೂಸೆವಾಲಾ ಹತ್ಯೆಯಾದಂತೆ ಕಾಣುತ್ತಿದೆ’ ಎಂದು ತಿಳಿಸಿದ್ದಾರೆ.

ಹಿಂದಿನ ಲೇಖನತ್ವರಿತ ತನಿಖೆಗೆ ಸಮಯ ಮಿತಿ ನಿಗದಿಗೊಳಿಸಿದ ಕರ್ನಾಟಕ ಹೈಕೋರ್ಟ್: ಸಣ್ಣ ಅಪರಾಧಗಳಿಗೆ 60 ದಿನ, ಘೋರ ಅಪರಾಧಗಳಿಗೆ 90 ದಿನ
ಮುಂದಿನ ಲೇಖನಭಾರತದ ಅಥ್ಲೀಟ್ ಗಳು ನಿಷೇಧಿತ ಡ್ರಗ್ಸ್ ಹಂಚುತ್ತಿದ್ದಾರೆ: ಅಂಜು ಬಾಬಿ ಜಾರ್ಜ್ ಆರೋಪ