ಬಾಲಚಂದಿರನ ಬಾಳದಿ ಮುಡಿದವನ
ವೇಳೆಯ ನೋಡಲು ಬಾಂದಾನವ್ವ ||
ಹಾಲ ದಿಲೆಯ ಮೇಲೆ ಲಾಲಿ ಹಾಡಲು ನಮ್ಮ |
ಬಾಲ ನಾಯಕ ಬಂದಾನವ್ವ
ಲೀಲೆಯ
ನೋಡಲು ||ಬಾಲಚಂದಿರನ||
ಲಂಬಾಣಿ ಲಲನೆಯರ ತುರುಬೆಯರ ||
ದಿಬ್ಬ ದರೆಯರ ರಂಬೆ ರಾಧೆಯರ |
ತುಂಬು ಜಬನೆಯರ ಜಂಬ ಗಾತಿಯರ ||
ದಿಬ್ಬಿನ ಲಾಡಿಸುವ ನಿಂಬೆಯ ಬಣ್ಣದ |
ಬಾಲನಾಯಕ ಸ್ವಾಮಿ ಬಂದನವ್ವ |
ಲೀಲೆಯ ನೋಡಲು ಬಂದಾನವ್ವ || ಬಾಲಚಂದಿರನ ||
ಚಿಲ್ಲಿ ಕವಡೆಗಳ ಇಲ್ಲಿ ಬಾಹುಲಿಗಳ
ದತ್ತದ ದಾವಣಿ ಹೊದೆದ ಮೇಲ್ಚಾವಣಿ ||
ಚೆಲ್ಲಿ ಚೆಲ್ಲಿ ಚೆಲುವೆಲ್ಲೆಡೆಯಲ್ಲಿ ಚೆಲ್ಲಿ ||
ಶಮರಿ ಬೀಸುವ ಚೆನ್ನ ಚೆಲುವೆಯರ |
ಜೊತೆ ಗೂಡಿ ಜೋತೆ ಗೂಡಿ |
ಬಾಲನಾಯಕ ಸ್ವಾಮಿ ಬಂದಾನವ್ವ |
ಲೀಲೆಯ ನೋಡಲು ಬಂದಾನವ್ವ || ಬಾಲಚಂದಿರನ ||