ಮನೆ ಸುದ್ದಿ ಜಾಲ ಪ್ಯಾಲೇಸ್ ಗೈಡ್ ಗಳಿಗೆ ಕಾರ್ಯಾಗಾರ: ರಾಜವಂಶಸ್ಥ ಯದುವೀರ್ ಚಾಲನೆ

ಪ್ಯಾಲೇಸ್ ಗೈಡ್ ಗಳಿಗೆ ಕಾರ್ಯಾಗಾರ: ರಾಜವಂಶಸ್ಥ ಯದುವೀರ್ ಚಾಲನೆ

0

ಮೈಸೂರು (Mysuru)-ಪ್ಯಾಲೇಸ್ ಗೈಡ್ ಗಳಿಗೆ ಇಂದಿನಿಂದ ಆಯೋಜಿಸಿರುವ ಒಂದು ವಾರಗಳ ಕಾಲ ಕಾರ್ಯಾಗಾರಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಮೈಸೂರು ಅರಮನೆ ಮಂಡಳಿ ಕಚೇರಿಯಲ್ಲಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಮೈಸೂರು ಅರಮನೆ ಮಂಡಳಿ, ಮೈಸೂರು ಪುರಾತತ್ವ ಅಧ್ಯಯನ ಕೇಂದ್ರ ಹಾಗೂ ಮುಕ್ತ ವಿವಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರವಾಸಿಗರಿಗೆ ಮಾಹಿತಿ ನೀಡುವ ಗೈಡ್ ಗಳಿಗೆ ತರಬೇತಿ ಕಾರ್ಯಗಾರ ಇದಾಗಿದ್ದು, ಮೈಸೂರು ಸಂಸ್ಥಾನದ ಇತಿಹಾಸ, ಪುರಾಣ, ರಾಜರ ಆಳ್ವಿಕೆ ಬಗ್ಗೆ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್, ಇತಿಹಾಸಕಾರ ಪ್ರೊ.ನಂಜರಾಜೇ ಅರಸು ಅವರು ತಿಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅರಮನೆ ಮಂಡಳಿ ನಿರ್ದೇಶಕ ಸುಬ್ರಮಣ್ಯ, ಕೆಎಸ್ಓಯು ಕುಲಪತಿ ಪ್ರೊ.ವಿದ್ಯಾಶಂಕರ್ ಭಾಗಿಯಾಗಿದ್ದರು.