ಮನೆ ಆರೋಗ್ಯ ಕೀಟೋ ಅಸಿಡೋಸಿಸ್: ಭಾಗ ಎರಡು

ಕೀಟೋ ಅಸಿಡೋಸಿಸ್: ಭಾಗ ಎರಡು

0

ಇನ್ಸುಲಿನ್ ಇಂಜೆಕ್ಷನ್ ಗಳು

Join Our Whatsapp Group

ಡಯಾಬಿಟಿಕ್ ರೋಗಿಗಳು ಯಾವಾಗಲೂ ಇನ್ಸುಲಿನ್,, ಇಂಜೆಕ್ಷನ್ ಮೂಲಕವೇ ತೆಗೆದುಕೊಳ್ಳಬೇಕಾಗುತ್ತದೆ.

 ★ಇನ್ಸುಲಿನನ್ನು ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕೆ ನ್ನುವುದು,ಆಯಾ ರೋಗಿಯ ವೈಯಕ್ತಿಕ ಅಗತ್ಯಗಳಿಗೆ  ಅನುಗುಣವಾಗಿರುತ್ತದೆ. ಇದನ್ನು ಡಾಕ್ಟರ್ ನಿರ್ಧರಿಸುತ್ತಾರೆ.

      ★ರಕ್ತದಲ್ಲಿ ಸಕ್ಕರೆಯ ಮಟ್ಟ ಇಳಿದುಹೋಗಿ ಹೈಪೋಗ್ಲೈಸೀಮಿಯಾ ಬರದಿರಲು,  ಅಂದರೆ ಬ್ಲಡ್ ಷುಗರನ್ನು ನಿಯಂತ್ರಣದಲ್ಲಿರಿಸಲು ತೆಗೆದುಕೊಳ್ಳುವ ಇನ್ಸುಲಿನ್ ಇಂಜೆಕ್ಷನ್ ಗಳು.

  ★ ಇವುಗಳಲ್ಲಿ ಮೂರು ಬಗೆಗಳಿವೆ ಅವು

1. Soluble 2.Protamine 3.Insulin zine suspensions

   ★ ಇಂಜೆಕ್ಷನ್ ಮೂಲಕ ಇನ್ಸೂಲಿನನ್ನು ಶರೀರಕ್ಕೆ ನೀಡಿದಾಗ,ಅದು ಶರೀರ ಕಣಗಳೊ ಳಕ್ಕೆ ಗ್ಲೂಕೋಸ್ ಪ್ರವೇಶಿಸುವಂತೆ ಮಾಡಿ,ಗ್ಲೂಕೋಸ್ ಮೂಲಕ ಶರೀರಕ್ಕೆ ಅಗತ್ಯವಾದ ಶಕ್ತಿ ದೊರಕುವಂತೆ ಮಾಡುತ್ತದೆ.

   ..★ ಬಹಳ ಮಂದಿ ರೋಗಿಗಳಿಗೆ ದಿನಕ್ಕೊಂದು ಇಂಜೆಕ್ಷನ್ ಸಾಕಾಗುತ್ತದೆ ಕೆಲವರಿಗೆ ದಿನಕ್ಕೆರಡು ಅಗತ್ಯವಾಗುತ್ತವೆ. ತೀವ್ರವಾದ ಕೇಸುಗಳಲ್ಲಿ ದಿನಕ್ಕೆ ಮೂರು ನಾಲ್ಕುಡೋಸ್ ಗಳೂ ಆಹಾರ ಸೇವನೆಗೆ ಮುನ್ನ ಅಗತ್ಯವಾಗುತ್ತವೆ.ಎಷ್ಟು ಬಾರಿ ತೆಗೆದುಕೊಳ್ಳಬೇಕು. Krwa ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು,ಎಂಬುದನ್ನು   ಡಾಕ್ಟರ್ ನಿರ್ಧರಿಸುತ್ತಾರೆ.

ಹೇಗೆ ಉಂಟಾಗುತ್ತದೆ?

 ಕೀಟೋ ಅಸಿಡೋಸಿಸ್ ಗೆ ಕಾರಣವಾಗುವ ಘಟನೆಗಳನ್ನು ಮೊಟ್ಟಮೊದಲನೆಯದು ಶರೀರದ ಅಗತ್ಯಗಳಿಗೆ ಸಾಕಷ್ಟು ಇನ್ಸುಲಿನ್  ಇಲ್ಲದೆ ಹೋಗುವುದು.

     ★ಶರೀರದಲ್ಲಿ ಸೋಂಕಾಗುವುದು ಅನಾರೋಗ್ಯ, ಶರೀರದ ಮೇಲೆ ಗಾಯ ಮಾನಸಿಕ ಒತ್ತಡಕ್ಕೆ ಗುರಿಯಾಗುವುದು, ಮೊದಲಾದ ಸಂದರ್ಭಗಳಲ್ಲಿ ಆಯಾ ಪರಿಸ್ಥಿತಿಗಳನ್ನು ಎದುರಿಸಲು ಶರೀರಕ್ಕೆ ಅಪಾರ ಶಕ್ತಿ ಅಗತ್ಯವಾಗುತ್ತದೆ. ಅಧಿಕ ಶಕ್ತಿ ಬೇಕಾದರೆ ಇನ್ಸುಲಿನ್  ಅಗತ್ಯವಿರುತ್ತದೆ.

     ★ಅನಾರೋಗ್ಯದ  ಸಂದರ್ಭದಲ್ಲಿ ಶರೀರ ತನ್ನಲ್ಲಿರುವ ಇನ್ಸುಲಿನ್ ನನ್ನು ಹೋಗುವುದರಿಂದ,ಉಪಯೋಗಿಸಿಕೊಳ್ಳಲಾರದೆ ಹೋಗುತ್ತದೆ.

      ★ತೆಗೆದುಕೊಳ್ಳಬೇಕಾದ ವೇಳೆ ಸರಿಯಾಗಿ ಇನ್ಸುಲಿನ್  ಇಂಜೆಕ್ಷನ್ ತೆಗೆದುಕೊಳ್ಳದೆ ಹೋಗುವುದರಿಂದ ಶರೀರದಲ್ಲಿ ಇನ್ಸುಲಿನ್ ಕೊರತೆ ಏರ್ಪಡುತ್ತದೆ.

     ★  ಈ ಮೇಲೆ ಹೇಳಿದ್ದ ಸ್ಥಿತಿಗತಿಗಳ ಜೊತೆ ಕಾರ್ಬೋಹೈಡ್ರೇಟ್ ಗಳನ್ನು ಬಹಳ ಹೆಚ್ಚಾಗಿ ಇರುವ ಆಹಾರ ಸೇವನೆ ಕೂಡಾ, ಕೀಟೋ ಅಸಿಡೋಸಿಸ್ ಪರಿಸ್ಥಿತಿಗೆ ದಾರಿ ಮಾಡುತ್ತದೆ.

    ★  ರಕ್ತದಲ್ಲಿನ ಗ್ಲುಕೋಸ್ ಅಧಿಕವಾಗುವುದು,ಕಿಟೋಸ್ ಬಾಡೀಸ್ ಎಂಬ ಪದಾರ್ಥಗಳು ಅಧಿಕವಾಗಿರುವುದು ಈ ಎರಡು ಜೊತೆಗೂಡಿದಾಗ Keto Acidosisಗೆ ದಾರಿಯಾಗುತ್ತದೆ.ಈ ಮೊದಲೇ ಹೇಳಿದಂತೆ ಇದು ಬಹಳ ವಿಷಮ ಪರಿಸ್ಥಿತಿ.ಇದನ್ನು ಪ್ರಾರಂಭದಲ್ಲಿಯೇ ಗುರುತಿಸಿದರೆ,ವೈದ್ಯಕೀಯ ಚಿಕಿತ್ಸೆ ಒಳ್ಳೆಯ ಫಲಿತಾಂಶಗಳನ್ನು ಕೊಡುತ್ತದೆ.

ಲಕ್ಷಣಗಳು

    ಈ ಕಾಯಿಲೆ ಕೀಟೋ ಅಸಿಡೋಸಿಸ್ ಬಹಳ ನಿಧಾನವಾಗಿ ಬೆಳೆಯುತ್ತದೆ ಬಹಳ ದಿನಗಳವರೆಗೆ ಮಾತ್ರ ಪರೀಕ್ಷೆಯಲ್ಲಿ ಗ್ಲೂಕೋಸ್ ಕಿಟೋನ್ ಗಳ ಪಾಸಿಟಿವ್ ರಿಪೋರ್ಟ್ ಬರುತ್ತದೆ. ಚಿಕ್ಕ ಮಕ್ಕಳಲ್ಲಿ ಇದು ಬಹಳ ವೇಗವಾಗಿ ಮುಂದೆ ಸಾಗುತ್ತದೆ. ಡಯಾಬಿಟಿಕ್ ಕೋಮ 12 – 24 ಗಂಟೆಗಳಲ್ಲೇ ಬರಬಹುದು.

ಇದಕ್ಕೆ ಸಂಬಂಧಿಸಿದ ಲಕ್ಷಣಗಳು ಈ ಕೆಳಕಂಡಂತಿವೆ :

★ ಅತಿಯಾದ ಮೂತ್ರ ವಿಸರ್ಜನೆ

 ★ವಿಪರೀತ ಬಾಯಾರಿಕೆ

 ★ ಹಸಿವು ಹೆಚ್ಚಾಗುವುದು

  ★ಆಮೇಲೆರಿದಂತಿರುವುದು

   ★ಬಲಹೀನತೆ

     ★ಯಾವ ಕಾರಣವೂ ಇಲ್ಲದೆ ಗಣನೀಯವಾಗಿ ತೂಕ ಕಡಿಮೆಯಾಗುವುದು

     ★ಗಾಯಗಳು ಬಹುಕಾಲ ಮಾಯದಿರುವುದು.