ಈ ವರ್ಷ ರಿಲೀಸ್ ಆದ ಮಲಯಾಳಂನ ಸೂಪರ್ ಹಿಟ್ ಸಿನಿಮಾ ‘ಮಂಜುಮ್ಮೇಲ್ ಬಾಯ್ಸ್’ ವಿರುದ್ಧ ಇಳಯರಾಜ ಕೇಸ್ ಹಾಕಿದ್ದರು. ಈ ಸಿನಿಮಾದಲ್ಲಿ ಬಳಕೆ ಆದ ‘ಕಣ್ಮಣಿ..’ ಹಾಡಿನ ಹಕ್ಕು ನಮ್ಮದು ಎಂದು ವಾದಿಸಿದ್ದರು. ಕೋರ್ಟ್ ನಲ್ಲಿ ಇಳಯರಾಜ ಅವರಿಗೆ ಜಯ ಆಗಿದೆ. ವರದಿಗಳ ಪ್ರಕಾರ ನಿರ್ದೇಶಕರು ಇಳಯರಾಜ ಅವರಿಗೆ ಸಿನಿಮಾ ತಂಡ 60 ಲಕ್ಷ ರೂಪಾಯಿ ಕೊಟ್ಟಿದೆ ಎಂದು ವರದಿ ಆಗಿದೆ.
‘ಮಂಜುಮ್ಮೇಲ್ ಬಾಯ್ಸ್’ ಕಥೆ ಸಾಗೋದು ಗುಣ ಗುಹೆಯಲ್ಲಿ. ಹೀಗಾಗಿ, ‘ಗುಣ’ ಚಿತ್ರದಲ್ಲಿ ಬಳಕೆ ಆದ ‘ಕಣ್ಮಣಿ..’ ಸಾಂಗ್ನ ತಂಡದವರು ಬಳಕೆ ಮಾಡಿಕೊಂಡಿದ್ದರು. ಇದಕ್ಕೆ ಮ್ಯೂಸಿಕ್ ಕಂಪನಿಯಿಂದ ಒಪ್ಪಿಗೆ ಕೂಡ ಪಡೆದಿದ್ದರು. ಆದರೆ, ಇವರು ಇಳಯರಾಜ ಅವರ ಒಪ್ಪಿಗೆ ಪಡೆದಿರಲಿಲ್ಲ. ಈ ಕಾರಣದಿಂದಲೇ ಇಳಯರಾಜ ಅವರು ಕೋರ್ಟ್ನಲ್ಲಿ ಕೇಸ್ ಹಾಕಿ, ತಂಡದವರು ಎರಡು ಕೋಟಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ತಮಗೆ 2 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಇಳಯರಾಜ ಕೋರಿದ್ದರು. ಈಗ ‘ಮಂಜುಮ್ಮೇಲ್ ಬಾಯ್ಸ್’ ತಂಡದವರು 60 ಲಕ್ಷ ರೂಪಾಯಿ ಕೊಡಲು ಒಪ್ಪಿದ್ದಾರೆ.
‘ಮಂಜುಮ್ಮೇಲ್ ಬಾಯ್ಸ್’ ತಂಡದವರು ಕೋರ್ಟ್ನಲ್ಲಿ ಸಾಂಗ್ ಹಕ್ಕು ಪಡೆದಿದ್ದಾಗಿ ವಾದ ಮುಂದಿಟ್ಟಿದ್ದಾರೆ. ‘ನಾವು ಮ್ಯೂಸಿಕ್ ಕಂಪನಿಯಿಂದ ಈ ಹಾಡಿನ ಬಳಕೆಗೆ ಹಕ್ಕನ್ನು ಪಡೆದಿದ್ದೇವೆ’ ಎಂದು ಸಿನಿಮಾ ತಂಡದ ಪರ ವಕೀಲರು ಹೇಳಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಇಳಯರಾಜ ಪರ ವಕೀಲರು, ‘ಇಳಯರಾಜ ಅವರು ಮಾಡಿದ ಕೆಲಸಗಳಿಗೆ ಅವರು ಕೂಡ ಹಕ್ಕನ್ನು ಹೊಂದಿದ್ದಾರೆ’ ಎಂದರು.
ಹೀಗಾಗಿ, ಇಳಯರಾಜ ಅವರು ಈ ಹಾಡನ್ನು ಬಳಸಲು ‘ಮಂಜುಮ್ಮೇಲ್ ಬಾಯ್ಸ್’ ತಂಡಕ್ಕೆ ಯಾವುದೇ ಒಪ್ಪಿಗೆ ನೀಡಿರಲಿಲ್ಲ. ಈಗ ರಾಯಲ್ಟಿ ರೂಪದಲ್ಲಿ ಇಳಯರಾಜ ಅವರಿಗೆ 60 ಲಕ್ಷ ರೂಪಾಯಿ ಅನ್ನು ‘ಮಂಜುಮ್ಮೇಲ್ ಬಾಯ್ಸ್’ ತಂಡ ನೀಡಿದೆ.
ಈ ಮೊದಲು ‘ಕೂಲಿ’ ಸಿನಿಮಾ ತಂಡದ ವಿರುದ್ಧ ಇಳಯರಾಜ ಕೇಸ್ ಹಾಕಿದ್ದರು. ‘ವಾ ವಾ ಪಕ್ಕಮ್ ವಾ..’ ಹಾಡಿನ ಹಕ್ಕು ತಮ್ಮದು ಎಂದಿದ್ದರು. ಆದರೆ, ಈ ಸಾಂಗ್ನ ಹಕ್ಕು ಸೋನಿ ಬಳಿ ಇದೆ ಎಂಬುದು ಆ ಬಳಿಕ ತಿಳಿದಿತ್ತು. ಈ ಮೊದಲು ಕೂಡ ಇಳಯರಾಜ ಈ ರೀತಿಯ ಅನೇಕ ಕೇಸ್ ಗಳನ್ನು ಹಾಕಿದ್ದರು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.