ಮನೆ ರಾಷ್ಟ್ರೀಯ ಪ್ಯಾರಿಸ್ ಒಲಿಂಪಿಕ್ಸ್: ಡಬಲ್ ಕಂಚಿನ ಪದಕ ವಿಜೇತ ಮನು ಭಾಕರ್ ಅವರಿಗೆ ದೆಹಲಿಯಲ್ಲಿ ಅದ್ದೂರಿ ಸ್ವಾಗತ

ಪ್ಯಾರಿಸ್ ಒಲಿಂಪಿಕ್ಸ್: ಡಬಲ್ ಕಂಚಿನ ಪದಕ ವಿಜೇತ ಮನು ಭಾಕರ್ ಅವರಿಗೆ ದೆಹಲಿಯಲ್ಲಿ ಅದ್ದೂರಿ ಸ್ವಾಗತ

0

ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಡಬಲ್ ಕಂಚಿನ ಪದಕ ವಿಜೇತ ಮನು ಭಾಕರ್ ಅವರು ಬುಧವಾರ (ಆಗಸ್ಟ್ 7) ದೆಹಲಿಗೆ ಬಂದಿಳಿದಿದ್ದು ಭರ್ಜರಿ ಸ್ವಾಗತ ನೀಡಲಾಗಿದೆ.

Join Our Whatsapp Group

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಾಖಲೆ ಬರೆದ ಶೂಟರ್‌ಗೆ ವಿಮಾನ ನಿಲ್ದಾಣದ ಸಿಬಂದಿಗಳು, ಮಾಧ್ಯಮ ಪ್ರತಿನಿಧಿಗಳು, ಅಭಿಮಾನಿಗಳು, ಮನು ಭಾಕರ್ ಅವರ ಪೋಷಕರು, ಸಂಬಂಧಿಕರು, ಬಾಲ್ಯದ ತರಬೇತುದಾರರು ಹೂಮಳೆ ಗೈದು ಭವ್ಯವಾದ ಸ್ವಾಗತ ನೀಡಿದರು.

22 ರ ಹರೆಯದ ಮನು ವನಿತೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನೊಂದಿಗೆ ಪದಕಪಟ್ಟಿಯಲ್ಲಿ ಭಾರತದ ಖಾತೆಯನ್ನು ತೆರೆದ ಬಳಿಕ ಸರಬ್ಜೋತ್ ಸಿಂಗ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಇನ್ನೊಂದು ಕಂಚಿನ ಪದಕ ಸೇರಿಸಿದ್ದರು.

ಪ್ಯಾರಿಸ್ ಒಲಿಂಪಿಕ್ಸ್‌ ಸಮಾರೋಪ ಸಮಾರಂಭದಲ್ಲಿ ಮನು ಭಾಕರ್ ಅವರನ್ನು ಭಾರತದ ಧ್ವಜಧಾರಿಯಾಗಿ ಹೆಸರಿಸಲಾಗಿದೆ. ಆಗಸ್ಟ್ 11 ರಂದು ನಡೆಯಲಿರುವ ಸಮಾರಂಭದಲ್ಲಿ ಭಾಗಿಯಾಗಲು ಫ್ರಾನ್ಸ್‌ ಗೆ ಮರಳಲಿದ್ದಾರೆ.