ಮನೆ ಸುದ್ದಿ ಜಾಲ ಅಪರೂಪದ ತಾಳೆಗರಿ ಸಂರಕ್ಷಣೆ: ಮೈಸೂರು ವಿವಿ, ದಿ ಮಿಥಿಕ್ ಸೊಸೈಟಿಯೊಂದಿಗೆ ಒಡಂಬಡಿಕೆ

ಅಪರೂಪದ ತಾಳೆಗರಿ ಸಂರಕ್ಷಣೆ: ಮೈಸೂರು ವಿವಿ, ದಿ ಮಿಥಿಕ್ ಸೊಸೈಟಿಯೊಂದಿಗೆ ಒಡಂಬಡಿಕೆ

0

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿರುವ ತಾಳೆಗರಿಗಳು ಮತ್ತು ಅಪರೂಪದ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣದ ‌ಕಾರ್ಯಗಳನ್ನು ನಡೆಸುವ ಉದ್ದೇಶದಿಂದ ಮೈಸೂರು ವಿವಿ ದಿ ಮಿಥಿಕ್ ಸೊಸೈಟಿಯೊಂದಿಗೆ ಶುಕ್ರವಾರ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ.

ವಿಜ್ಞಾನಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಮೈಸೂರು ವಿವಿಗೆ 105 ವರ್ಷ ಇತಿಹಾಸವಿದ್ದರೆ, ಪ್ರಾಚ್ಯ ವಿದ್ಯಾ ಸಂಶೋಧನಾಲಯಕ್ಕೆ 130 ವರ್ಷಗಳ ಹಿನ್ನೆಲೆಯಿದೆ. ಇಡೀ ಕರ್ನಾಟಕದಲ್ಲೇ ಅತಿ ಹೆಚ್ಚಿನ ತಾಳೆಗರಿ ಹಾಗೂ ಹಸ್ತಪ್ರತಿ ಸಂಗ್ರಹ ಇಲ್ಲಿದೆ. ಸದ್ಯ ದಿ ಮಿಥಿಕ್ ಸೊಸೈಟಿ ಸಹಯೋಗದೊಂದಿಗೆ ಡಿಜಿಟಲೀಕರಣಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. 1 ಕೋಟಿ ರೂ. ವೆಚ್ಚದಲ್ಲಿ ಈ ‌ಕಾರ್ಯ ನಡೆಯಲಿದೆ ಎಂದು ಹೇಳಿದರು.

ರಾಷ್ಟ್ರೀಯ ಹಸ್ತಪ್ರತಿ ಅಭಿಯಾನದ ಉನ್ನತಾಧಿಕಾರಿ ಸಮಿತಿ ಸದಸ್ಯರಾದ ಬೀಳೂರು ಸುದರ್ಶನ್ ಮಾತನಾಡಿ, ಅಪರೂಪದ ಹಸ್ತಪ್ರತಿ ಹಾಗೂ ತಾಳೆಗರಿಗಳ ಸಂಗ್ರಹವೇ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿದೆ. ಮೂರು ಹಂತದಲ್ಲಿ ಡಿಜಿಟಲೀಕರಣ ನಡೆಯಲಿದೆ. ಮೊದಲ ಹಂತದಲ್ಲಿ ತಾಳೆಗರಿಗಳನ್ನು ಸಂರಕ್ಷಣೆ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ಗ್ರಂಥಗಳ ಸೂಚಿ ಪೂರ್ಣಗೊಳಿಸಲಾಗುತ್ತದೆ. ಮೂರನೇ ಹಂತದಲ್ಲಿ ಡಿಜಿಟಲೀಕರಣ ನಡೆಯಲಿದೆ. ಇದರಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ಮೈವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ದಿ ಮಿಥಿಕ್ ಸೊಸೈಟಿ ಮ್ಯಾನೇಜಿಂಗ್ ಕಮಿಟಿ ಸದಸ್ಯರಾದ ಎಂ.ಆರ್.ಪ್ರಸನ್ನ, ಜಯಸಿಂಹ, ಪಿಎಂಇಬಿ ನಿರ್ದೇಶಕ ಪ್ರೊ.ಲೋಕನಾಥ್, ಪ್ರಾಚ್ಯ ವಿದ್ಯಾ ಸಂಶೋಧನಾಲಯ ನಿರ್ದೇಶಕ ಡಾ.ರಾಮಪ್ರಿಯ, ಪ್ರಾಧ್ಯಾಪಕ ರೋಹಿತ್ ಈಶ್ವರ್ ಸೇರಿದಂತೆ ಇತರರು ಇದ್ದರು.

ಹಿಂದಿನ ಲೇಖನನೈರುತ್ಯ ರೈಲ್ವೆ ವಿಭಾಗದಲ್ಲಿ ಡಿಜಿಟಲ್ ಪಾವತಿ ಮೂಲಕ ಟಿಕೆಟ್ ಪಡೆಯಲು ಅವಕಾಶ
ಮುಂದಿನ ಲೇಖನಹಿಜಾಬ್ ವಿವಾದದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುತ್ತಿರುವ ವಿಪಕ್ಷಗಳು: ಸಿಎಂ ವಾಗ್ದಾಳಿ