ಮನೆ ಯೋಗಾಸನ ಪಾರ್ಶ್ವ ಹಲಾಸನ

ಪಾರ್ಶ್ವ ಹಲಾಸನ

0

 ‘ಹಲಾಸನ’ದ ಈ ಭಂಗಿಯಲ್ಲಿ ಕಾಲುಗಳೆರಡೂ ತಲೆಯ ಹಿಂಬದಿಯಲ್ಲಿ ನೆಲೆಸಿದರೆ, ಈ ಭಂಗಿಯಲ್ಲಿ ಅವನು ತಲೆಯ ಒಂದು ಪಕ್ಕಕ್ಕೂ ಮತ್ತು ಅದರ ಮಟ್ಟಕ್ಕೂ ಬರುವಂತೆ ಇಡಬೇಕು. ಇದು ಒಂದು ಪಕ್ಕಕ್ಕೆ ನೇಗಿಲಾ ಕಾರದ ಭಂಗಿಯಾದುದರಿಂದ ‘ಪಾರ್ಶ್ವಹಲಾಸನ’ ಎಂಬ ಹೆಸರು. ಇದಕ್ಕೆ ಒಪ್ಪುತ್ತದೆ.

Join Our Whatsapp Group

ಅಭ್ಯಾಸ ಕ್ರಮ

1. ಮೊದಲು, ‘ಸುಪ್ತ ಕೋನಾಸನ’ವನ್ನು ಅಭ್ಯಸಿಸಿ, ಆ ಬಳಿಕ ‘ಹಲಾಸನ’ದ ಭಂಗಿಗೆ ಹಿಂದುಳಿದಬೇಕು.

2. ಆಮೇಲೆ ಅಂಗೈಗಳನ್ನು ಪಕ್ಕೆ ಲಬುಗಳ ಹಿಂಬದಿಗೆ ಸೇರಿಸಬೇಕು.

3. ಆನಂತರ ಕಾಲುಗಳೆರಡನ್ನು ಎಡಪಕ್ಕಕ್ಕೆ ಸಾಧ್ಯವಾದಷ್ಟು ಚಾಕಿರಬೇಕು.

4. ತರುವಾಯು, ಮಂಡಿಗಳೆರಡನ್ನೂ  ಬಿಗಿಗೊಳಿಸಿ, ಅಂಗೈಗಳ ನೆರವನ್ನು ಪಡೆದು, ಮುಂಡವನ್ನು ಮೇಲೆತ್ತಿ, ಕಾಲುಗಳನ್ನು ಹಿಗ್ಗಿಸಿಡಬೇಕು.

5. ಈ ಭಂಗಿಯಲ್ಲಿ, ಸುಮಾರು ಅರ್ಧ ನಿಮಿಷದ ಕಾಲ ಸಾಮಾನ್ಯ ಉಸಿರಾಟದಿಂದ ನೆರಸಬೇಕು.

6. ಆ ಬಳಿಕ, ಉಸಿರನ್ನು ಹೊರ ಹೋಗಿಸಿ ಕಾಲುಗಳನ್ನು ಬಲಪಕ್ಕಕ್ಕೆ ಸರಿಸುತ್ತ, ಅವುಗಳನ್ನು ತಲೆಮಟ್ಟದ ರೇಖೆಗೆ ಸರಿಯಾಗುವಂತೆ ನೆಲದ ಮೇಲಿಟ್ಟು ಈ ಭಂಗಿಯಲ್ಲಿ ಸುಮಾರು ಅರ್ಧ ನಿಮಿಷ ಕಾಲ ನೆಲೆಸಬೇಕು. ಆಗ ಕಾಲುಗಳನ್ನು ಸರಿಸುವಾಗ ಎದೆ ಮತ್ತು ಮುಂಡ ಇರುವ ಸ್ಥಾನಗಳನ್ನು ಬದಲಾಯಿಸಬಹುದು. ಮುಂಡ ಮತ್ತು ಎದೆ ಇವು ಸರ್ವಾಂಗಸನ ಇಲ್ಲವೇ ‘ಹಲಾಸನ’ಗಳಲ್ಲಿರುವಂತೆಯೇ ಇರಬೇಕು.

ಪರಿಣಾಮಗಳು

ಈ ಆಸನದ ಭಂಗಿಯಲ್ಲಿ, ಬೆನ್ನೆಲುಬು ನೀವು ಪಕ್ಕಗಳಿಗೆ ತಿರುಗಿಸಬೇಕಾಗಿರುವುದರಿಂದ ಅದರ ಪರಿಣಾಮವಾಗಿ ಬೆನ್ನೆಲುಬು ಹೆಚ್ಚು ಸ್ಥಿತಿಸ್ಥಾಪಕತ್ವದ ಗುಣವನ್ನು ಗಳಿಸಿರುವುದಲ್ಲದೆ,ದೊಡ್ಡ ಕರುಳಿನ ಕೆಲ ಭಾಗವು ಈ ಭಂಗಿಯ ಬುಡ ಮೇಲುಸ್ಥಿತಿಗೆ ಬರುವುದರಿಂದ ಅದಕ್ಕೆ ಒಳ್ಳೆಯ ವ್ಯಾಯಾಮ ದೊರೆತು, ಅದರಿಂದ  ಮಲವಿಸರ್ಜನೆಯ ಕಾರ್ಯ  ಕ್ರಮವಾಗಿ ನಡೆಯಲಿ ನಡೆಯಲು ಅನುಕೂಲಕೂಲಿಸುತ್ತದೆ. ಬಹುಕಾಲದಿಂದ ಮಲಬದ್ಧತೆಯಿಂದ ನರಳುವವರು ಈ ಆಸನದಿಂದ ಸತ್ಛಲವನ್ನು ಗಳಿಸುವವರು.ಅನೇಕ ರೋಗಿಗಳಿಗೆ ಮಲಬದ್ಧತೆಯೇ ಮೂಲವಾದುದರಿಂದ ಅದನ್ನು ಈ ಆಸನಾಭ್ಯಾಸದಿಂದ ತಲೆ ತೂಗಿಸಬೇಕಾದುದು ಅತ್ಯಾವಶ್ಯಕ. ಹೊರಗಿನ ಕಸ ಕಡ್ಡಿಗಳ ಶೇಖರಣೆಯೇ ನಮಗೆ ಅಸಹ್ಯವೆನಿಸುವಾಗ, ನಮ್ಮ ದೇಹದಲ್ಲಿಯೇ ವಿಷಜೀವಾಣುಗಳನ್ನು ಉತ್ಪಾದಿಸುವ ಮಲದ ಶೇಖರಣೆ ಯಾದರೆ ಮನಸ್ಸಿಗೂ ಮತ್ತು ದೇಹಕ್ಕೂ ಇದರಿಂದ ಎಷ್ಟು ತೊಂದರೆಯಾಗುತ್ತದೆ. ಎಂಬುದನ್ನು ಗಮನಿಸಿದರೆ, ಅದರ ಮೂಲೋಚ್ಛಾಟನೆಗೆ ಸಾಧನವಾದ ಈ ಅಸನಭ್ಯಾಸವನ್ನು ಪ್ರತಿ ವ್ಯಕ್ತಿಯು  ಕೈಗೊಳ್ಳಬೇಕೆಂಬುದನ್ನು ಒತ್ತಿ ಹೇಳಬೇಕಾಗಿಲ್ಲ.ದೇಹದ ಒಳಕೆಗೆ ಸಲ್ಲದ ಮುತ್ತು ದೇಹಾ ರೋಗ್ಯವನ್ನು ಕಳ್ಳರಂತೆ ಅಪರಿಸುವ ನಿಷ್ಪ್ರಯೋಜನ ವಸ್ತುಗಳನ್ನು ಹೊರದೂಡದಿದ್ದಲ್ಲಿ, ದೇಹಾ ರೋಗ್ಯವು ಕೆಟ್ಟು ಅನೇಕ ವಿಧ ರೋಗಗಳಿಗೀಡಾಗಿ ಜೀವನದ   ಸೌಖ್ಯವೇ ಇಲ್ಲದಂತಾಗುವುದು ಮಾತ್ರವಲ್ಲದೆ, ಈ ಮಲಬದ್ಧತೆಯ ಪರಿಣಾಮವಾಗಿ ಬುದ್ಧಿಶಕ್ತಿ ಕುಸಿದು, ವೈಭಾರ ತಲೆದೂರಿ ಸಿಡುಕುತನ ಮೊದಲಾದ ಬುದ್ಧಿಯ ದುಷ್ಪ್ರವೃತ್ತಿಗಳಿಗೆ ಕಾರಣವಾಗುತ್ತದೆ. ಆ ಆಸನಾಭ್ಯಾಸದಿಂದ ದೇಹಕ್ಕೆ ಲವಲವಿಕೆ,ಬುದ್ಧಿಗೆ ಹುರುಪು ಮನಸ್ಸಿಗೆ ಇಂಪು, ಆ ಮೂಲಕ ಜೀವನದಲ್ಲಿ ಸುಖ ಲಭಿಸುವ ಕಾರಣದಿಂದ ಮೇಲಿನ ಫಲಗಳನ್ನು ಬಯಸುವವರು ಈ ಆಸನಾ ಭ್ಯಾಸವನ್ನು ಆಚರಿಸಲೇಬೇಕು.