ಮನೆ ಮಾನಸಿಕ ಆರೋಗ್ಯ ಆತಂಕ ಭಯದ ನಿವಾರಣೆ ಹೇಗೆ ?

ಆತಂಕ ಭಯದ ನಿವಾರಣೆ ಹೇಗೆ ?

0

ಮುಂದಕ್ಕೆ ಏನಾಗುತ್ತದೆ; ಒಳ್ಳೆಯದಾಗುತ್ತದೆಯೇ ಅಥವಾ ಕೆಟ್ಟದಾಗಿ ನಾವು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತೇವೆ ಎಂದು ನಮಗೆ ತಿಳಿಯದ ಸಂದರ್ಭಗಳಲ್ಲೆಲ್ಲೋ ನಾವು ಆತಂಕ ಕೊಳ್ಳುತ್ತೇವೆ. ಯಾವುದೇ ಪರೀಕ್ಷೆ,ಸಂದರ್ಶನ, ವ್ಯಾಪಾರದ ಒಪ್ಪಂದ ಅಥವಾ ಖಾಯಿಲೆ ಸ್ಥಿತಿಯಲ್ಲಿ ಆತಂಕ ಸಾಮಾನ್ಯ ಅಂತಕವಾದಾಗ ಏನೋ ಒಂದು ಬಗೆಯ ಸಮಾಧಾನ, ಸಂಕಟವಾಗುತ್ತದೆ.

Join Our Whatsapp Group

ಹೃದಯ ಜೋರಾಗಿ ಬಡಿದುಕೊಳ್ಳುತ್ತದೆ. ಬಾಯಿ ಒಣಗಿ ಮಾತು ಹೊರಡದು. ಕೈಕಾಲುಗಳು ನಡುಗುತ್ತವೆ. ಎದೆಯಲ್ಲಿ ಒತ್ತಿದಂತಾಗಿ ಉಸಿರಾಡಲು ಕಷ್ಟವಾಗುತ್ತದೆ. ಮನಸ್ಸಿಟ್ಟು ಕೆಲಸ ಮಾಡಲು ಆಗದು. ಜ್ಞಾಪಶಕ್ತಿ ಕುಂದುತ್ತದೆ. ಸುಲಭವಾಗಿ ತಪ್ಪುಗಳಾಗುತ್ತವೆ. ಆತಂಕ ಹೆಚ್ಚಾದಾಗ ನಿದ್ರೆಯೂ ಸರಿಯಾಗಿ ಬರುವುದಿಲ್ಲ. ಹಸಿವು ಕಡಿಮೆ ಆಗಿ, ತಿಂದ ಅನ್ನ ರಚಿಸುವುದಿಲ್ಲ. ಪದೇ ಪದೇ ಮೂತ್ರ ಮಾಡುವ ಹಾಗೆ ಆಗುತ್ತದೆ. ಹೀಗೆ ಆತಂಕ ನಮ್ಮ ಸಾಮರ್ಥ್ಯವನ್ನು ಕಡಿಮೆ ಮಾಡಿ ನಮ್ಮನ್ನು ಕಾಡುತ್ತದೆ. ಅನೇಕ ಬಾರಿ ನಾವು ಆತಂಕಪಡಬಾರದು ಎಂದುಕೊಳ್ಳುತ್ತೇವೆ. ಕೆಲವು ವೇಳೆ ಅದರಲ್ಲಿ ನಾವು ಯಶಸ್ವಿಯಾಗುತ್ತೇವೆ. ಕೆಲವು ವೇಳೆ ಸೋಲುತ್ತೇವೆ.

      ಆತಂಕದ ಪ್ರಮಾಣ ಸನ್ನಿವೇಶದಿಂದ ಈ ಸನ್ನಿವೇಶಕ್ಕೆ ವ್ಯಕ್ತಿಯಿಂದ ವ್ಯಕ್ತಿಗೆ. ಕಾಲದಿಂದ ಕಾಲಕ್ಕೆ ಬದಲಾಗುತ್ತದೆ.ಒಂದು ಸನ್ನಿವೇಶದಲ್ಲಿ ಕೆಲವರು ಬಹಳ ಆತಂಕ ಪಟ್ಟು ಅಸಹಾಯಕರಾದರೆ. ಅದೇ ಸನ್ನಿವೇಶದಲ್ಲಿ ಕೆಲವರು ಸ್ವಲ್ಪವೇ ಆತಂಕ ಪಟ್ಟು ಹೆಚ್ಚಿನ ತೊಂದರೆಗೆ ಒಳಗಾಗುವುದಿಲ್ಲ. ಸಾಮಾನ್ಯವಾಗಿ ಎಲ್ಲಿಯವರೆಗೆ ಮುಂದೇನು ಎಂಬ ಅಸ್ಥಿರತೆ ಇರುತ್ತದೆಯೋ, ಎಲ್ಲಿಯವರೆಗೆ ಕಷ್ಟ ಸಮಸ್ಯೆಮುಂದುವರೆಯುತ್ತದೆಯೋ, ಅಲ್ಲಿಯವರೆಗೆ ಆತಂಕವು ಇರುತ್ತದೆ. ನಮಗೆ ಭರವಸೆ ಸಿಕ್ಕ ತಕ್ಷಣ, ಅಸ್ಥಿರತೆ  ಹೋಗಿ ಎಲ್ಲವೂ ಸ್ಪಷ್ಟವಾದ ಕೂಡಲೇ ಆತಂಕವು ಕಡಿಮೆಯಾಗುತ್ತದೆ.ನಾವೆಲ್ಲ ಒಂದಲ್ಲ ಒಂದು ಸಾರಿ ಅನುಭವಿಸುವ ಈ ಆತಂಕವ ಆಯಾ  ಸನ್ನಿವೇಶಕ್ಕೆ ವಿಶಿಷ್ಟವಾದದು.ಅದರ ಪ್ರಮಾಣ, ಲಕ್ಷಣ ಆ ಸನ್ನಿವೇಶವನ್ನೂ ಅವಲಂಬಿಸಿರುತ್ತದೆ.ಇದು ಸಹಜವಾದ ಆತಂಕ. ಆರೋಗ್ಯವಂತನಾದ ವ್ಯಕ್ತಿ ಸ್ವಲ್ಪ ಪ್ರಯತ್ನದಿಂದಲೇ ಇದನ್ನು ನಿವಾರಿಸಿಕೊಳ್ಳಬಲ್ಲ ಹೆಚ್ಚು ತೊಂದರೆಪಡುವುದಿಲ್ಲ.ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುವುದಿಲ್ಲ.

     ಕೆಲವು ಸಾರಿ ವ್ಯಕ್ತಿ ನಿರೀಕ್ಷೆಗಿಂತ,  ಅನವಶ್ಯಕವಾಗಿ ಹೆಚ್ಚು ಆತಂಕ ಪಡವುದಲ್ಲದೆ, ಮಾಮೂಲಿಗಿಂತ ಹೆಚ್ಚು ಅವಧಿಯವರೆಗೆ ಆದರಿಂದ ಬಾದೆ ಪಡುವಬಹುದು ಹೆಚ್ಚಿನ ಆತಂಕದಿಂದ ಆತನ ದೈನಂದಿನ ಚಟುವಟಿಕೆಗಳಿಗೆ ಅಡ್ಡಿ ಬರಬಹುದು. ಆತಂಕದ ಚಿಹ್ನೆಗಳಿಂದ ಆತ ನರಳುತ್ತಾನೆ ಕೆಲವರು  ಅಲ್ಪ ಸ್ವಲ್ಪ ಕಾರಣಗಳಿಂದ ಅಥವಾ ಮೇಲ್ನೋಟಕ್ಕೆ ಯಾವ ಕಾರಣವೂ ಇಲ್ಲದೇ ಯಾವಾಗಲೂ ಆತಂಕ ಪಡುತ್ತಿರುತ್ತಾರೆ.ಆದ್ದರಿಂದ ಅವರ ಸಾಮರ್ಥ್ಯ ಕುಗ್ಗಿ ಸ್ಪರ್ಧಾತ್ಮಕ ಸಮಾಜದಲ್ಲಿ ಹಿಂದುಳಿಯುತ್ತಾರೆ. ಈ ಪ್ರಮಾಣದ ಆತಂಕ ಅಸಹಜವಾದುದು.ಈ ಬಗೆಯ ಆತಂಕವಿರುವ ವ್ಯಕ್ತಿಗೆ ಹುಶಾರಿಲ್ಲವೆಂದೂ ಆತನಿಗೆ ಸಹಾಯದ ಅಗತ್ಯವಿದೆ ಎಂದು ತಿಳಿಯಬೇಕು.ಅಂದರೆ ವ್ಯಕ್ತಿಯ ದಿನನಿತ್ಯ ಚಟುವಟಿಕೆ, ಕೆಲಸಗಳಿಗೆ ಅಡ್ಡಿಬರುವಷ್ಟು ಮತ್ತು ಆತನ ಮಟ್ಟಿಗೆ ಆತಂಕ ಮೈ ಮನಸ್ಸಿಗೆ ಹಿಂಸೆ ಆಗುವಷ್ಟರ ಮಟ್ಟಿಗೆ ಆತಂಕವಿದ್ದರೆ, ಅದು ಖಾಯಿಲೆ ಎನಿಸಿಕೊಳ್ಳುತ್ತದೆ. ಆಗ ಅದನ್ನು ಆತಂಕ ಚಿತ್ತ ಚಂಚಲತೆ ಎಂದು ಕರೆಯಲಾಗುತ್ತದೆ.