ಮನೆ ಸ್ಥಳೀಯ ಮೈಸೂರು ದಸರಾ ಮಹೋತ್ಸವ 2024 : 19 ಉಪ ಸಮಿತಿಗಳ ರಚನೆ

ಮೈಸೂರು ದಸರಾ ಮಹೋತ್ಸವ 2024 : 19 ಉಪ ಸಮಿತಿಗಳ ರಚನೆ

0

ಮೈಸೂರು: ದಸರಾ ಮಹೋತ್ಸವದ ಆಚರಣೆಯ ಸಲುವಾಗಿ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಂಡು ದಸರಾ ಕಾರ್ಯಕ್ರಮಗಳನ್ನು ಆಯೋಜಿಸಲು 19 ಉಪಸಮಿತಿಗಳನ್ನು ರಚಿಸಿ ಅವುಗಳಿಗೆ ಉಪ ವಿಶೇಷಾಧಿಕಾರಿಗಳು ಕಾರ್ಯಾಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮಿಕಾಂತ ರೆಡ್ಡಿ ಅವರು ಆದೇಶ ಹೊರಡಿಸಿದ್ದಾರೆ.

Join Our Whatsapp Group

ಸ್ವಾಗತ ಆಮಂತ್ರಣ ಮತ್ತು ಸ್ಥಳಾವಕಾಶ ಉಪ ಸಮಿತಿಗೆ ಅಪರ ಜಿಲ್ಲಾಧಿಕಾರಿಗಳಾದ ಡಾ.ಪಿ.ಶಿವರಾಜು ಅವರನ್ನು ಉಪ ವಿಶೇಷಾಧಿಕಾರಿಯಾಗಿ, ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ರೂಪ ಅವರನ್ನು ಕಾರ್ಯಾಧ್ಯಕ್ಷರು, ಮೈಸೂರು ಮಹಾನಗರ ಪಾಲಿಕೆಯ ಅಧೀಕ್ಷಕ ಅಭಿಯಂತರರಾದ ಸಿಂಧು(ಸಹ ಕಾರ್ಯಾಧ್ಯಕ್ಷರು) ಮೈಸೂರು ಉಪ ವಿಭಾಗದ ಉಪ ವಿಭಾಗಾಧಿಕಾರಿಗಳಾದ ರಕ್ಷಿತ್ ಕೆ.ಆರ್ ಅವರನ್ನು ಸ್ಥಳಾವಕಾಶದ ಕಾರ್ಯಧ್ಯಕ್ಷರಾಗಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆದ ಕುಬೇರಪ್ಪ ಹಾಗೂ ಮೈಸೂರು ತಹಶೀಲ್ದಾರರಾದ ಮಹೇಶ್ ಕುಮಾರ್ ಅವರನ್ನು ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ. ಮೆರವಣಿಗೆ ಉಪ ಸಮಿತಿಗೆ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರನ್ನು ಉಪ ವಿಶೇಷಾಧಿಕಾರಿಯಾಗಿ, ಕಾರ್ಯಾಧ್ಯಕ್ಷರಾಗಿ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರಾದ ಮುತ್ತುರಾಜ್ ಹಾಗೂ ಕಾರ್ಯದರ್ಶಿಗಳಾಗಿ ದೇವರಾಜ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶಾಂತ ಮಲ್ಲಪ್ಪ ಹಾಗೂ ಸಮನ್ವಯಾಧಿಕಾರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ.ಸುದರ್ಶನ್ ಅವರನ್ನು ನೇಮಿಸಲಾಗಿದೆ.

ಪಂಜಿನ ಕವಾಯಿತು ಉಪ ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಕಾರ್ಯಾಧ್ಯಕ್ಷರಾಗಿ ನಗರ ಸಂಚಾರ ಉಪ ಪೊಲೀಸ್ ಆಯುಕ್ತರಾದ ಜಾಹ್ನವಿ, ಸಿ.ಎ.ಆರ್ ಉಪ ಪೊಲೀಸ್ ಆಯುಕ್ತರಾದ ಮಾರುತಿ ಅವರನ್ನು ಹಾಗೂ ಕಾರ್ಯದರ್ಶಿಗಳಾಗಿ ನರಸಿಂಹರಾಜ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಸಿ.ಕೆ ಅಶ್ವಥ್ ನಾರಾಯಣ್ ಹಾಗೂ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರೂಪಶ್ರೀ ಅವರನ್ನು ನೇಮಿಸಲಾಗಿದೆ. ಸ್ತದ್ಭಚಿತ್ರ ಉಪ ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ (ಪ್ರಭಾರ) ಪ್ರಭುಸ್ವಾಮಿ ಅವರನ್ನು, ಕಾರ್ಯಾಧ್ಯಕ್ಷರಾಗಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ರಂಜಿತ್ ಹಾಗೂ ಕಾರ್ಯದರ್ಶಿಗಳಾಗಿ ಜಿಲ್ಲಾ ಪಂಚಾಯತ್‌ನ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಉಪನಿರ್ದೇಶಕರಾದ ಮೇಘಲಾ ಅವರನ್ನು ನೇಮಿಸಲಾಗಿದೆ. ರೈತ ದಸರಾ (ಗ್ರಾಮೀಣ ದಸರಾ) ಉಪ ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಕೃಷ್ಣಂರಾಜು ಅವರನ್ನು, ಕಾರ್ಯಧ್ಯಕ್ಷರಾಗಿ ಜಂಟಿ ಕೃಷಿ ನಿರ್ದೇಶಕರಾದ ಚಂದ್ರಶೇಖರ್ ಅವರನ್ನು, ಸಹಕಾರ್ಯಾಧ್ಯಕ್ಷರಾಗಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಶಿವಲಿಂಗಯ್ಯ ಹಾಗೂ ಕಾರ್ಯದರ್ಶಿಗಳಾಗಿ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಅವರನ್ನು ನೇಮಿಸಲಾಗಿದೆ.

 ಕ್ರೀಡಾ ದಸರಾ ಉಪಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಪ್ರಸನ್ನ ಕುಮಾರ್ ವಿ.ಕೆ ಅವರನ್ನು, ಕಾರ್ಯಾಧ್ಯಕ್ಷರಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಡಾ.ಜಿತೇಂದ್ರ ಶೆಟ್ಟಿ ಅವರನ್ನು ಹಾಗೂ ಕಾರ್ಯದರ್ಶಿಗಳಾಗಿ ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಭಾಸ್ಕರ್ ನಾಯಕ್ ಅವರನ್ನು ನೇಮಿಸಲಾಗಿದೆ. ಸಾಂಸ್ಕೃತಿಕ ದಸರಾ ಉಪ ಸಮಿತಿಗೆ ಅರಮನೆ ವೇದಿಕೆಗೆ ಉಪ ವಿಶೇಷಾಧಿಕಾರಿಯಾಗಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಎಂ ಗಾಯಿತ್ರಿ ಅವರನ್ನು, ಕಾರ್ಯಧ್ಯಕ್ಷರಾಗಿ ಅರಮನೆ ಮಂಡಳಿಯ ಉಪ ನಿರ್ದೇಶಕರಾದ ಸುಬ್ರಮಣ್ಯ ಟಿ.ಎನ್ ಅವರನ್ನು ಹಾಗೂ ಕಾರ್ಯದರ್ಶಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ.ಸುದರ್ಶನ್ ಅವರನ್ನು ನೇಮಿಸಲಾಗಿದ್ದು, ಇತರೆ ವೇದಿಕೆ ಕಾರ್ಯಕ್ರಮಕ್ಕೆ ಕಾರ್ಯಧ್ಯಕ್ಷರಾಗಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರುದ್ರೇಶ್ ಅವರನ್ನು ನೇಮಿಸಲಾಗಿದೆ.

 ಲಲಿತ ಕಲೆ ಉಪಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಪ್ರಾಚ್ಯ ವಸ್ತು ಸಂಗ್ರಹಾಲಯದ ಆಯುಕ್ತರಾದ ದೇವರಾಜು ಅವರನ್ನು, ಕಾರ್ಯಾಧ್ಯಕ್ಷರಾಗಿ ಕಾವಾ ಕಾಲೇಜಿನ ಅನ್ವಯ ಕಲಾವಿಭಾಗದ ರೀಡರ್(ಪ್ರ) ಹಾಗೂ ಮುಖ್ಯಸ್ಥರಾದ ಬಿಂದುರಾಯ.ಆರ್.ಬಿರಾದಾರ್ ಅವರನ್ನು ಹಾಗೂ ಕಾರ್ಯದರ್ಶಿಗಳಾಗಿ ಕಾವಾ ಕಾಲೇಜಿನ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ಆದ ಹೆಚ್.ಬಿ ಜಯಶಂಕರ್ ಅವರನ್ನು ನೇಮಿಸಲಾಗಿದೆ. ದೀಪಾಲಂಕಾರ ಉಪಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಚೆಸ್ಕಾಂ ಮ್ಯಾನೇಜಿಂಗ್ ಡೈರೆಕ್ಟರ್‌ಗಳಾದ ಜಿ.ಶೀಲಾ, ಕಾರ್ಯಾಧ್ಯಕ್ಷರಾಗಿ ಚೆಸ್ಕಾಂನ ಅಧೀಕ್ಷಕ ಇಂಜಿನಿಯರ್ ಆದ ಸುನಿಲ್ ಹಾಗೂ ಕಾರ್ಯದರ್ಶಿಗಳಾಗಿ ಎನ್.ಆರ್ ಮೊಹಲ್ಲಾದ ಕಾರ್ಯಪಾಲಕ ಇಂಜಿನಿಯರ್ ಆದ ಪೂರ್ಣಚಂದ್ರ ತೇಜಸ್ವಿ ಆರ್ ಅವರನ್ನು ನೇಮಿಸಲಾಗಿದೆ. ಕವಿಗೋಷ್ಠಿ ಉಪಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಮಲ್ಲಿಕಾರ್ಜುನ ಸ್ವಾಮಿ, ಕಾರ್ಯಾಧ್ಯಕ್ಷರಾಗಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಲೋಲಾಕ್ಷಿ ಎನ್.ಕೆ. ಹಾಗೂ ಕಾರ್ಯದರ್ಶಿಗಳಾಗಿ ಮೈಸೂರು ತಾಲ್ಲೂಕಿನ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಅವರನ್ನು ನೇಮಿಸಲಾಗಿದೆ.

 ಯೋಗ ದಸರಾ ಉಪ ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕರಾದ ರಮ್ಯಾ ಅವರನ್ನು, ಆಯುಷ್ ಇಲಾಖೆಯ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಪುಷ್ಪ ಅವರನ್ನು ಕಾರ್ಯಾಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳಾದ ಅನಂತರಾಜು ಎಂ.ಆರ್ ಅವರನ್ನು ನೇಮಿಸಲಾಗಿದೆ. ಯುವ ಸಂಭ್ರಮ ಉಪಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ.ಎನ್, ಕಾರ್ಯಾಧ್ಯಕ್ಷರಾಗಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಶಿವಕುಮಾರ್.ಪಿ, ಸಹ ಕಾರ್ಯಾಧ್ಯಕ್ಷರಾಗಿ ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಪಾಲಕ ಇಂಜಿನಿಯರ್ ಆದ ಹರೀಶ್, ಕಾರ್ಯದರ್ಶಿಗಳಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ತಹಶೀಲ್ದಾರ್ ಆದ ಮೋಹನ ಕುಮಾರಿ ಹಾಗೂ ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ 3 ರ ವಲಯ ಆಯುಕ್ತ(ಪ್ರಭಾರ)ರಾದ ಸತ್ಯಮೂರ್ತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾದ ರಾಘವೇಂದ್ರ ಅವರನ್ನು ನೇಮಿಸಲಾಗಿದೆ.

 ಯುವ ದಸರಾ ಉಪ ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ವಿಷ್ಣುವರ್ಧನ ಎನ್ ಅವರನ್ನು, ಕಾರ್ಯಾಧ್ಯಕ್ಷರಾಗಿ ಮೈಸೂರು ಉಪ ವಿಭಾಗದ ಉಪ ವಿಭಾಗಾಧಿಕಾರಿಗಳಾದ ರಕ್ಷಿತ್ ಕೆ.ಆರ್ ಅವರನ್ನು ಹಾಗೂ ಕಾರ್ಯದರ್ಶಿಗಳಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಅಧಿಕಾರಿಯಾದ ಮಂಜುನಾಥ್ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶುಭ ಅವರನ್ನು ಮತ್ತು ಸಮನ್ವಯಾಧಿಕಾರಿಗಳಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿಯಾದ ಶೃತಿ ಎಸ್.ಟಿ ಅವರನ್ನು ನೇಮಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕರಾದ ಪ್ರಿಯದರ್ಶಿನಿ ಕೆ, ಕಾರ್ಯಾಧ್ಯಕ್ಷರಾಗಿ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕರಾದ ಪ್ರಭಾ ಬಿ.ಎಸ್, ಸಹ ಕಾರ್ಯಾಧ್ಯಕ್ಷರಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್ ಹಾಗೂ ಕಾರ್ಯದರ್ಶಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಸ್.ಟಿ.ಜವರೇಗೌಡ ಅವರನ್ನು ನೇಮಿಸಲಾಗಿದೆ.

 ಆಹಾರ ಮೇಳ ಉಪ ಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಘುನಂದನ್ ಎ ಎನ್, ಕಾರ್ಯಾಧ್ಯಕ್ಷರಾಗಿ ಆಹಾರ ಭದ್ರತೆ ಮತ್ತು ಸುರಕ್ಷತೆ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿಯಾದ ಡಾ. ಕಾಂತರಾಜು ಹಾಗೂ ಕಾರ್ಯದರ್ಶಿಗಳಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರತೀಕ್ ಜಿ. ಹೆಗ್ಡೆ ಅವರನ್ನು ನೇಮಿಸಲಾಗಿದೆ. ಸ್ವಚ್ಛತೆ ಮತ್ತು ವ್ಯವಸ್ಥೆ ಉಪಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಆಶಾದ್ ಉರ್ ರೆಹಮಾನ್ ಶರೀಫ್ ಅವರನ್ನು, ಕಾರ್ಯಾಧ್ಯಕ್ಷರಾಗಿ ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತ (ಕಂದಾಯ)ರಾದ ಸೋಮಶೇಖರ್ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿಯಾದ ಡಾ.ವೆಂಕಟೇಶ್ ಅವರನ್ನು ನೇಮಿಸಲಾಗಿದೆ.

 ಚಲನಚಿತ್ರ ಉಪಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಬಸವರಾಜು ಅವರನ್ನು, ಕಾರ್ಯಾಧ್ಯಕ್ಷರಾಗಿ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕರಾದ ಶಿವರಾಂ ಅವರನ್ನು ಹಾಗೂ ಸಹ ಕಾರ್ಯಾಧ್ಯಕ್ಷರಾಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ ಅವರನ್ನು ಹಾಗೂ ಕಾರ್ಯದರ್ಶಿಗಳಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಕೆ.ಹರೀಶ್ ಅವರನ್ನು ನೇಮಿಸಲಾಗಿದೆ.

ಕುಸ್ತಿ ಉಪಸಮಿತಿಗೆ ಉಪ ವಿಶೇಷಾಧಿಕಾರಿಯಾಗಿ ಮೈಸೂರು ಜಿಲ್ಲೆಯ ಅಪರ ಪೊಲೀಸ್ ಅಧೀಕ್ಷಕರನ್ನು, ಕಾರ್ಯಾಧ್ಯಕ್ಷರಾಗಿ ಕೆ.ಐ.ಎ.ಡಿ.ಬಿ ವಿಶೇಷ ಭೂ ಸ್ವಾಧೀನಾಧಿಕಾರಿಗಳಾದ ವೆಂಕಟರಾಜು ಅವರನ್ನು ಹಾಗೂ ನಂಜನಗೂಡು ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ರಘು ಅವರನ್ನು ನೇಮಿಸಲಾಗಿದೆ.

ಗಜಪಯಣ ಕಾರ್ಯಕ್ರಮದ ಉಪಸಮಿತಿಗೆ ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯಾದ ಮಾಲತಿ ಪ್ರಿಯ ಅವರನ್ನು, ಕಾರ್ಯಾಧ್ಯಕ್ಷರಾಗಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಪ್ರಭುಗೌಡ ಐ.ಬಿ ಅವರನ್ನು ಹಾಗೂ ಕಾರ್ಯದರ್ಶಿಗಳಾಗಿ ವನ್ಯಜೀವಿ ವಲಯದ ವಲಯ ಅರಣ್ಯ ಸಂರಕ್ಷಣಾಧಿಕಾರಿಯಾದ ಸಂತೋಷ್ ಹೂಗಾರ್ ಅವರನ್ನು ನೇಮಿಸಲಾಗಿದೆ ಎಂದು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮಿಕಾಂತ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.