ಮನೆ ರಾಜ್ಯ ಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಳ: ಶ್ರೀ ಪರಶುರಾಮ ದೇವಾಲಯಕ್ಕೆ ನುಗ್ಗಿದ ನೀರು

ಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಳ: ಶ್ರೀ ಪರಶುರಾಮ ದೇವಾಲಯಕ್ಕೆ ನುಗ್ಗಿದ ನೀರು

0

ಮೈಸೂರು(Mysuru): ಕಬಿನಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಕಪಿಲ ನದಿಗೆ ಹರಿಸಲಾಗುತ್ತಿದ್ದು, . ಪುರಾತನ ಪ್ರಸಿದ್ಧ ಶ್ರೀ ಪರಶುರಾಮ ದೇವಾಲಯಕ್ಕೆ ಪ್ರವಾಹದ ನೀರು ನುಗ್ಗಿದ ಹಿನ್ನೆಲೆ ಶ್ರಾವಣ ಮಾಸದ ಪೂಜೆ ರದ್ದಾಗಿದೆ.

ಕೇರಳದ ವಯನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಹಾಗಾಗಿ ಕಬಿನಿ ಜಲಾಶಯ ಭರ್ತಿ ಆಗಿದೆ. ಹೆಚ್ಚುವರಿ ನೀರನ್ನು ಕಪಿಲ ನದಿಗೆ ಬಿಡಲಾಗುತ್ತಿದೆ. ಇದರಿಂದ ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ ಸಮೀಪದ ಸ್ನಾನ ಘಟ್ಟ, ಮಂಟಪಗಳು ಹಾಗೂ ಭಕ್ತರು ಬಟ್ಟೆ ಬದಲಾಯಿಸುವ ಶೆಡ್​ಗಳಿಗೆ ಪ್ರವಾಹದ ನೀರು ನುಗ್ಗಿದೆ.

ಕಪಿಲ ನದಿ ದಡದಲ್ಲಿರುವ ಐತಿಹಾಸಿಕ 16 ಸಾಲು ಮಂಟಪ ಭಾಗಶಃ ಮುಳುಗಡೆಯಾಗಿದೆ. ಮಳೆ ಹೀಗೆ ಮುಂದುವರಿದರೆ ಹೆಚ್ಚುವರಿ ನೀರನ್ನು ನದಿಗೆ ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ನಂಜನಗೂಡಿನ ಜನತೆಯಲ್ಲಿ ಪ್ರವಾಹ ಭೀತಿ ಹೆಚ್ಚಾಗಲಿದೆ.

ಹಿಂದಿನ ಲೇಖನಪೆನ್ಷನ್ ಹಣ, ದಾನ ಮಾಡಿ ಮಾನವೀಯತೆ ಮೆರೆದ ಓಂಕಾರ್ ರಾಮಾಚಾರ್ !: ಇವರು ಸರ್ಕಾರಿ ನಿವೃತ್ತ ಮುಖ್ಯೋಪಾಧ್ಯಾಯರು
ಮುಂದಿನ ಲೇಖನದಸರಾ ಮಹೋತ್ಸವ: ಗಜಪಡೆಗಳ ಮಾಹಿತಿಯ ಪೋಸ್ಟರ್ ಬಿಡುಗಡೆ