ಮನೆ ದೇವರ ನಾಮ ನಾಲಿಗೆ ದನ್ಯವಾಯಿತೆ

ನಾಲಿಗೆ ದನ್ಯವಾಯಿತೆ

0

ನಾಲಿಗೆ ಧನ್ಯವಾದಗಳು

ನಾಲಿಗೆ ಧನ್ಯವಾಯಿತೆ ಸ್ವಾಮಿ ನನ್ನ ನಾಲಿಗೆ ಧನ್ಯವಾಯಿತೆ |
ವೆಂಕಟರಮಣ ನಾಮಾಮೃತವ ನುಡಿಯಲು ನನಗೆ ಏನೋ ಸುಖವು |

ದೇಹವು ಹಗುರಾಗಿದೇ ನುಡಿದ ಪದವ
ಮರಳಿ ಮರಳಿ ನುಡಿಯುವ ಮನಸಾಗಿದೆ |
ನಾನು ಎಂಬುದು ನಶ್ವರವಾಗಿ ನಿನ್ನಲ್ಲಿ ಶರಣಾಗಿದೆ |
ಸ್ವಾಮಿ ನಾಲಿಗೆ ಧನ್ಯವಾಯಿತೆ |

ಪಾಮರ ನಾನು ಹರಿಯೆನು ಏನು ನಡೆದ ಅಫರಾಧ ಮುನ್ನಿಸೆ ಏನು |
ಭಕುತರನೆಂದು ಬೆರೆತವನಲ್ಲ ಭಕ್ತಿಯ ಅನುಭವ ಇಲ್ಲವೇ ಇಲ್ಲ |
ಜ್ಞಾನದ ಕಣ್ಣು ತೆರೆಯಲಿಲ್ಲಾ |
ಅಜ್ಞಾನವನ್ನು ಪೊರೆಯಲು ಇಲ್ಲಾ|
ಲೋಕದ ಪಾಪವ ತೊಳೆಯಲು ಸ್ವಾಮಿ ನನ್ನನ್ನು ಮುನ್ನಿಸೆ ಏನು |
ನಿನ್ನಯ ಪಾವನ ಚರಣ ಕಮಲದಿ ಧೂಳಾಗಿರುವೆನು ನಾನು |
ಶ್ರೀನಿವಾಸ ಸಪ್ತಾದ್ರೀ ವಾಸ ನಮೋ ತಿರುಮಲೇಶ ಶ್ರೀ ವೆಂಕಟೇಶ ||ನಾಲಿಗೆ ||

ಶ್ರೀ ವೆಂಕಟರಮಣ ಗೋವಿಂದಾ| ಗೋವಿಂದಾ|

ನಂಬಲು ಇಲ್ಲ ನಮಿಸಲು ಇಲ್ಲ ನಿನ್ನನ್ನು ಕೇವಲ ಕಲ್ಲೆಂದೆನಲ್ಲ |
ಚಿನ್ಮಯ ನಿನ್ನ ನೆನೆದವನಲ್ಲ ಚಿಂತಿಸಿ ಈಗ ಅಳುತಿಹೆನಲ್ಲ |
ದೀಪ ಧೂಪ ಹೋಮ ಅವನ ಗಂಧವ ನಾನು ಅರಿಯೆ |
ಪಾಪ ಪುಣ್ಯ ಸ್ವರ್ಗ ನರಕ ತಿಳಿಯೆನು ನಾನು ಪ್ರಭುವೆ |
ನೀನೆ ಎಲ್ಲ ನಿನ್ನಿಂದಲ್ಲ ತಿಳಿಯಿತು ಈಗ ಮನಕೆ |
ಸ್ವಾಮಿ ನಿನ್ನ ನಾಮವ ಜಪಿಸಿದ ಜನ್ಮವು ಏತಕೆ ನನಗೆ |
ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ | ವೆಂಕಟರಮಣ ಗೋವಿಂದ ವೆಂಕಟರಮಣ ಗೋವಿಂದ ||ನಾಲಿಗೆ ||