ಮನೆ ದೇವಸ್ಥಾನ ಶ್ರೀಕ್ಷೇತ್ರ ದರ್ಶನದ ಸಹ್ಯಾದ್ರಿ ಶ್ರೇಣಿ:  ಭಾಗ ಎರಡು

ಶ್ರೀಕ್ಷೇತ್ರ ದರ್ಶನದ ಸಹ್ಯಾದ್ರಿ ಶ್ರೇಣಿ:  ಭಾಗ ಎರಡು

0

     ತೀರ್ಥ ಕ್ಷೇತ್ರಗಳನ್ನು ಕುರಿತು ಶ್ರದ್ದೆ ಭಾರತೀಯ ಸಂಸ್ಕೃತಿಯ ಪ್ರಮುಖ ಅಂಗ, ಶತಶತಮಾನಗಳಿಂದ ತೀರ್ಥಕ್ಷೇತ್ರಗಳು ಭಾರತೀಯ ಜನ ಜೀವನದ ಮೇಲೆ ಅದ್ಬುತ ಪರಿಣಾಮವನ್ನು ಬೀರಿವೆ. ಪ್ರಾಚೀನ ಭಾರತದಲ್ಲಿ ತೀರ್ಥಯಾತ್ರೆ ಪ್ರತಿಯೊಬ್ಬ ಭಾರತೀಯನ ಸರ್ವಶ್ರೇಷ್ಠ ಕರ್ತವ್ಯವಾಗಿತ್ತು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಯತಿ ಎಂಬ ನಾಲ್ಕು ಬಗೆಯ ಆಶ್ರಮಕ್ಕೆ ಒಳಪಟ್ಟವರಿಗೂ ತೀರ್ಥ ಯಾತ್ರೆಯನ್ನು ವಿಧಿಸಿದ್ದರು. ಸಾಮಾನ್ಯವಾಗಿ ವ್ಯಾಪಾರಿ, ವಿದ್ವಾಂಸ,ರಾಜ ಮತ್ತು ಸನ್ಯಾಸಿಗಳು ಬೇರೆ ಬೇರೆ ಉದ್ದೇಶದಿಂದ ತೀರ್ಥಯಾತ್ರೆಯನ್ನು ಕೈಗೊಳ್ಳುತ್ತಿದ್ದರು. ವ್ಯಾಪಾರಿ ತನ್ನ ವೃತ್ತಿ ಸಂಬಂಧವಾಗಿ ದೇಶ ವಿದೇಶಗಳ ಯಾತ್ರೆ ಹೊರಡುತ್ತಿದ್ದನು. ವಿದ್ವಾಂಸನು ಸಂಬಂಧವಾಗಿ ದೇಶವಿದೇಶಗಳ ಯಾತ್ರೆ ಹೊರಡುತ್ತಿದ್ದನು. ವಿದ್ವಾಂಸರು ಜ್ಞಾನಪಿಪಾಸುವಾಗಿ ಮತ್ತು ಬೇರೆ ಬೇರೆ ಭಾಗಗಳ ವಿದ್ವಾಂಸರನ್ನು ವಾದದಲ್ಲಿ ಗೆದ್ದು ಜಯಪತ್ರವನ್ನು ಪಡೆಯಲು ಯಾತ್ರೆ ಮಾಡುತ್ತಿದರು. ರಾಜನಾದವನು ದ್ವಿಗಜಯಕ್ಕಾಗಿ, ಯತಿಯು ತೀರ್ಥ ಸ್ಥಾನ ಮತ್ತು ದೇವಾಲಯಗಳ ಸಂದರ್ಶನ ಮಾಡಲೋಸುಗ ಯಾತ್ರೆ ಹೊರಡುತ್ತಿದ್ದನು. ಗೃಹಸ್ಥನಾದವನ್ನು ಹೆಂಡತಿಯೊಡನೆ ತ್ತಿರ್ಥಯಾತ್ರೆ ಮಾಡಬೇಕೆಂಬುದು ನಿಯಮ. ಆದರೆ ಯಾತ್ರಿಕರು ಇಂಥ ಕಟ್ಟುಪಾಡುಗಳನ್ನು ಉಲ್ಲಂಘಿಸಿ ಯಾತೆ ಕೈಗೊಳ್ಳುತ್ತಿದ್ದ ಸಂದರ್ಭಗಳೂ ಇದ್ದವು ಪತಿಯು ಯಾತ್ರೆ ಹೊರಟ ಸಮಯದಲ್ಲಿ ಪತ್ನಿ ಆತನನ್ನು ತಡೆಯುವ ಮತ್ತು ಆಕೆ ವಿರಹವನ್ನು ತಿಳಿಸಲು ಅನೇಕ ಕೃತಿಗಳು ಸಂಸ್ಕೃತಿ ಸಾಹಿತ್ಯದಲ್ಲಿ ಲಭ್ಯವಿದೆ.

    ಪವಿತ್ರ ನದಿಗಳಿಗೆ ತೀರ್ಥವೆಂದು, ಪವಿತ್ರ ಸ್ಥಳಗಳಿಗೆ ಕ್ಷೇತ್ರವೆಂದು ಹೇಳುವರು.ಆದರೆ ತೀರ್ಥಯಾತ್ರೆ ಎಂದಾಗ ತೀರ್ಥ ಶಬ್ದ ಕ್ಷೇತ್ರದ ವ್ಯಾಪ್ತಿಯನ್ನು ಒಳಗೊಳ್ಳುತ್ತದೆ. ಇಲ್ಲಿ ತೀರ್ಥಯಾತ್ರೆ ಎಂಬುದು ಕೇವಲ ದಿನಗಳಲ್ಲಿ ಸ್ಥಾನ ಅನುಷ್ಠಾನಗಳಾಗದೆ ಪವಿತ್ರ ಕ್ಷೇತ್ರಗಳ ಸಂದರ್ಶನವು ನಡೆಯುತ್ತದೆ.ಋಷಿಗಳು ತಮ್ಮ ಸನ್ನಿಧ್ಯಯಿಂದ ತೀರ್ಥಗಳನ್ನು ಪಾವನಗೊಳಿಸಿದರು ಎಂಬ ನಂಬಿಕೆ ಜನಮನದಲ್ಲಿದೆ ಮಹಾಭಾರತದ ಅನುಶಾಸನ  ಪರ್ವದಲ್ಲಿ ಭೂಮಿಯಲ್ಲಿ ಕೆಲವು ಸ್ಥಳಗಳು ಅಧಿಕ ಪವಿತ್ರವಾಗಿರುತ್ತವೆ. ಕೆಲವು ಅವುಗಳ ನೆಲೆಯಿಂದ ಕೆಲವು ಅವುಗಳ ಥಳಥಳ ನೀರಿನಿಂದ ಇನ್ನೂ ಕೆಲವು ಋಷಿಗಳೊಂದಿಗಿರುವ ಸಂಬಂಧದಿಂದ ಪವಿತ್ರವಾಗಿರುತ್ತವೆ ಎಂದು ತೀರ್ಥ ಸ್ವರೂಪವನ್ನು ತಿಳಿಸಿದೆ.

     ಪುರಾಣಗಳು ತೀರ್ಥಯಾತ್ರೆಯನ್ನು ಪಾಪನಾಶಕ ಮತ್ತು ಮೋಕ್ಷದಾಯಕ ಎಂದು ನಿರೂಪಿಸಿವೆ. ತೀರ್ಥಳ ನಮಸ್ಕಾರಣೆ, ತೀರ್ಥ ಸ್ಥಾನ, ತರ್ಪಣ,ದಾನ  ಮೊದಲಾದವುಗಳಿಗೆ ವಿಶೇಷ ಮಹತ್ವವಿದೆ. ಆದ್ದರಿಂದಲೇ ವಿಜಯದಾಸರು ನದನದಿಗಳು ಸ್ಮರಿಸಿರೋ ನದನದಿಗಳು ಸ್ಮರಿಸಿ ಹೃದಯ ನಿರ್ಮಳವಾಗಿ ಎಂದು ಹಾಡಿದ್ದಾರೆ.ಜಗನ್ನಾಥ ವಿಠಲರು.

 ಸ್ಮರಿಸಿ ತೀರ್ಥಕ್ಷೇತ್ರ ಸಜ್ಜನರು ನಿರುತದಲಿ

 ಅರುಣೋದಯದಲೆದ್ದು ಭಕ್ತಿ ಪೂರಕವಾಗಿ

 ಕಾರಣ ತಂತ್ರ ಯಾದಿ ಮಾಳ್ವ ಪಾಪ ರಾಶಿಗಳ ಪರಿಹರಿ ಸಂತೈಸುವ

   ಎಂಬುದಾಗಿ ತೀರ್ಥ ನಮಸ್ಮರಣೆಗೆ ಒತ್ತು ಕೊಡುತ್ತಾರೆ. ತೀರ್ಥಯಾತ್ರೆ ಯಜ್ಞಕಿಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಯಜ್ಞ ದುಬಾರಿಯ ವ್ಯವಹಾರ. ರಾಜರು ಮತ್ತು ಶ್ರೀಮಂತರು ಮಾತ್ರ ಯಜ್ಞಗಳನ್ನು ನಡೆಸಲು ಶಕ್ತರು. ಆದರೆ ತೀರ್ಥವನ್ನು ಬಡವರಾದಿಯಾಗಿ ಎಲ್ಲರೂ ನಿರ್ವಹಿಸುವುದು. ಈ ಕಾರಣದಿಂದ ತೀರ್ಥಯಾತ್ರೆಯು ಯಜ್ಞಕ್ಕಿಂತ ಅತಿಶಯ ಎಂಬ ಹೇಳಿಕೆ ಇದೆ.