ಮನೆ ಮನೆ ಮದ್ದು ಗರ್ಭಿಣಿ ಸ್ತ್ರೀಯರಿಗಾಗಿ

ಗರ್ಭಿಣಿ ಸ್ತ್ರೀಯರಿಗಾಗಿ

0

1. ಗರ್ಭ ಧರಿಸಿದ  ಪ್ರಾರಂಭದ ದಿನದಲ್ಲಿ ಗರ್ಭಪಾತ ಆಗ ಬಯಸುವವರು ಕರಿ ಎಳ್ಳಿಗೆ ನಾಟಿ ಬೆಲ್ಲ ಸೇರಿಸಿ, ಚಗಲಿ ಉಂಡೆ ಮಾಡಿಕೊಂಡು ದಿನವೂ ಮೂರು ಮೂರು  ಬಾರಿ ಸ್ವಲ್ಪ ಸ್ವಲ್ಪವೇ ತಿನ್ನುತ್ತಿದ್ದರೆ ಗರ್ಭಪಾತ ಆಗುವುದು.

Join Our Whatsapp Group

2. ಗರ್ಭಿಣಿ ಸ್ತ್ರೀಯರಿಗೆ, ಹಾಲುಣಿಸುವ ತಾಯಂದಿರಿಗೆ ಬೆಲ್ಲ ಬೆರೆಸಿದ ಹುರಿಗಡಲೆಕಾಯಿ ಬೀಜ ಅತ್ಯುತ್ತಮವಾದ ಆಹಾರ.

3. ಗರ್ಭಿಣಿ ಸ್ತ್ರೀಯರು ಮೋಸಂಬಿ ರಸವನ್ನು ಹೇರಳವಾಗಿ ಸೇವಿಸುವುದರಿಂದ ಹೆರಿಗೆ ಸುಲಭವಾಗುವುದು. ತಾಯಿ, ಮಗು ಇಬ್ಬರು ರೋಗ ನಿರೋಧಕ ಶಕ್ತಿ ಪಡೆದು ಆರೋಗ್ಯವಂತರಾಗುವರು.

4. ದಿನವೂ ಗರ್ಭಿಣಿಯರು ಒಣ ಖರ್ಜೂರ, ಬಾದಾಮಿ ಬೀಜವನ್ನು ಹಾಲಿನಲ್ಲಿ ಅರೆದು ಜೇನುತುಪ್ಪ ಬೆರೆಸಿ, ಒಂದು ಸಾರಿ ಆದರೂ ಎರಡು ಟೀ ಸ್ಪೂನ್ ನಷ್ಟು ಸೇವಿಸಿದರೆ ನರ ದೌರ್ಬಲ್ಯ ನಿವಾರಣೆ ಆಗುವುದು.

5. ಹೆರಿಗೆಯ ನಂತರ ಬಾಣಂತಿಗೆ ದಾಲ್ಚಿನಿಯ ಕಷಾಯ ಕುಡಿಸಿದರೆ ನೋವು ಕೆಲವೇ ಕಾಲದಲ್ಲಿ ನಿವಾರಣೆ ಆಗುವುದು. 

6. ಎಳೆಯ ಮುಸುಕಿನ ಜೋಳದ ಕಾಳುಗಳನ್ನು ಹಸಿದಾಗಿಯೇ ತಿನ್ನುತ್ತಿದ್ದರೆ ಎದೆಹಾಲು ಹೆಚ್ಚುವುದು.

7. ಹಸಿರಾಗಿ ತೆನೆಗಳನ್ನು ಕೆಂಡದ ಮೇಲೆ ಸುಟ್ಟು ಉಜ್ಜಿದಾಗ ಉದುರಿದ ಕಾಳಿಗೆ ಕೊಬ್ಬರಿ ಬೆಲ್ಲ ಸೇರಿಸಿ ತಿನ್ನುವುದರಿಂದ ಎದೆ ಹಾಲು ಹೆಚ್ಚುವುದು.

8. ಹೆರಿಗೆಯ ನಂತರ ಸಬ್ಬಕ್ಕಿ ಸೊಪ್ಪಿನ ಸಾರವನ್ನು ಉಪಯೋಗಿಸುತ್ತಿದ್ದರೆ ಎದೆ ಹಾಲು ಹೆಚ್ಚುವುದು.

9. ಹಸಿ ಹಳಸುಂಡೆ ಕಾಳುಗಳನ್ನು ತಿನ್ನುವುದರಿಂದ ಎದೆ ಹಾಲು ಹೆಚ್ಚುವುದರ ಜೊತೆಗೆ ದೇಹದಲ್ಲಿ ಶಕ್ತಿಯು ಹೆಚ್ಚುವುದು.

10. ಖರ್ಜೂರದ ಹಣ್ಣಿನ ಸೇವನೆಯಿಂದಲೂ ಎದೆಹಾಲು ಹೆಚ್ಚುವುದರ ಜೊತೆಗೆ ದೇಹಾರೋಗ್ಯವನ್ನು ಸ್ಥಿಮಿತದಲ್ಲಿಡುವುದು.

11. ಗರ್ಭಿಣಿ ಸ್ತ್ರೀಯರಿಗೆ ಹಾಗೂ ಮಕ್ಕಳಿಗೆ ಕಬ್ಬಿಣದ ಅಂಶ ಕಡಿಮೆ ಇದ್ದಾಗ ಬಸಳೆ ಸೊಪ್ಪನ್ನು ಅಡಿಗೆಯಲ್ಲಿ ಉಪಯೋಗಿಸುವುದರಿಂದ ಆಗಿರುವ ಕೊರತೆ ನಿವಾರಣೆ ಆಗುವುದು.

12. ಜೀರಿಗೆ ಕಸಾಯಕ್ಕೆ ಹಾಲು, ಜೇನುತುಪ್ಪ ಬೆರೆಸಿ ಗರ್ಭಧಾರಣೆಯ ಸಮಯದಲ್ಲಿ ದಿನವೂ ಸೇವಿಸುವುದರಿಂದ ಎದೆ ಹಾಲು ವೃದ್ಧಿ ಆಗುವುದು.

13. ಹುರಿದ ಮೆಂತ್ಯದಿಂದ ಗಂಜಿ ತಯಾರಿಸಿ ಹಾಲು ಸಕ್ಕರೆ ಬೆರೆಸಿ ಸೇವಿಸುವುದರಿಂದ ಎದೆಹಾಲು ವೃದ್ಧಿಸುವುದು.

14. ಒಂದು ಟೀ ಚಮಚ ಕೊತ್ತಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಪುಡಿಯನ್ನು ನೀರಿನಲ್ಲಿ ನೆನೆಹಾಕಿ,ಚೆನ್ನಾಗಿ ಕಿವುಚಿ ಶೋಧಿಸಿದ ಕಷಾಯವನ್ನು ಹಾಲು ಸಕ್ಕರೆ ಬೆರೆಸಿ ಸೇವಿಸಿದರೆ ಗರ್ಭಧಾರಣೆಯ ಸಮಯದಲ್ಲಿ ಆಗುವ ವಾಂತಿ ನಿಲ್ಲುವುದು.

15. ಹಳೆ ಅಕ್ಕಿ ನುಚ್ಚನ್ನು  ನೀರಿನಲ್ಲಿ ನೆನೆ ಹಾಕಿ,ಚೆನ್ನಾಗಿ ಕಿವುಚಿ ನಂತರ ನೀರನ್ನು ಬಸಿದು, ಒಂದು ಬಟ್ಟಲು ಬಸಿದ, ನೀರಿಗೆ ಒಂದು ಟೀ ಚಮಚ ಕೊತ್ತಂಬರಿ ಬೀಜದ ಪುಡಿ ಮತ್ತು ಕಲ್ಲುಸಕ್ಕರೆ ಸೇರಿಸಿ, ಚೆನ್ನಾಗಿ ಗೊಟಾಯಿಸಿ ಕುಡಿಯುವುದರಿಂದ ಗರ್ಭಿಣಿ ಸ್ತ್ರೀಯರಲ್ಲಿ ತಲೆದೋರುವ ವಾಂತಿ ನಿಲ್ಲುವುದು.

16. ನೀರು ಬೇರೆ ಬೆರೆಸಿ ಹಸುವಿನ ಹಾಲನ್ನು ದಿನವೂ

 ಸೇವಿಸುವುದರಿಂದ ಗರ್ಭಿಣಿಯರ ಸ್ತ್ರೀಯರ  ಆರೋಗ್ಯ ವೃದ್ಧಿಸುವುದು.

17. ನೆನೆಸಿದ ಉದ್ದಿನಬೇಳೆಯನ್ನು ತುಪ್ಪದಲ್ಲಿ ಹುರಿದು ಗರ್ಭಿಣಿಯರು ದಿನವು ತಿನ್ನುತ್ತಿದ್ದರೆ ಎದೆ ಹಾಲು ಹೆಚ್ಚುವುದರ ಜೊತೆಗೆ ಗರ್ಭಾಶಯಗಳು ಯಾವ ತೊಂದರೆಯೂ ಆಗುವುದಿಲ್ಲ.

18. ಪ್ರತಿದಿನವೂ ಗರ್ಭಧಾರಣೆಯಾದ ಸಮಯದಲ್ಲಿ ಬೆಳ್ಳುಳ್ಳಿ ಸೇವಿಸುತ್ತಿದ್ದರೆ ಗರ್ಭನಾಶದಲ್ಲಿ ಯಾವ ತೊಂದರೆಯೂ ಆಗುವುದಿಲ್ಲ.

19. ಗರ್ಭಿಣಿಯರು ದಿನವೂ ಬಾಳೆಹಣ್ಣನು ತಿನ್ನುತ್ತಿದ್ದರೆ ಹೆರಿಗೆಯ ಸಮಯದಲ್ಲಿ ತೊಂದರೆ ಕಡಿಮೆ ಆಗುವುದು.

20. ಒಂದು ತಿಂಗಳೂಳಗಿನ ಗರ್ಭಿಣಿ ಸ್ತ್ರೀಯರು ಪರಂಗಿಯನ್ನು ತಿಂದರೆ ಗರ್ಭ ನಿಲ್ಲದೆ ಗರ್ಭ ಸ್ರಾವ ಆಗುವುದು.

21. ಪರಂಗಿ ಹಣ್ಣು ಗರ್ಭಿಣಿ ಸ್ತ್ರೀ ಯರಿಗೆ ಶಕ್ತಿಯುತ ಆಹಾರ, ಎದೆಹಾಲು ವೃದ್ಧಿಸುವುದು.

22. ನುಗ್ಗೆ ಸೊಪ್ಪಿನ ಸಾರು ಗರ್ಭಿಣಿಯರಿಗೆ, ಬಾಣಂತಿಯರಿಗೆ ಇಬ್ಬರಿಗೂ ಆರೋಗ್ಯವಾದ ಪುಷ್ಟಿ ಹೆಚ್ಚಿಸುವ ಆಹಾರ.

23. ಅವರೆಕಾಳನ್ನು ಬಾಣಂತಿಯರು ಬೇಯಿಸಿ ತಿಂದರೆ ಎದೆ ಹಾಲು ಹೆಚ್ಚುವುದು.