1. ಈ ಹಿಂದೆ ವಿವರಿಸಿದಂತೆ, ಮೊದಲು ನಿತಂಬಗಳ ಆಧಾರದ ಮೇಲೆ ನೆಲದಲ್ಲಿ ಕುಳಿತುಕೊಂಡು,ಪಾದಗಳೆ ರಡನ್ನು ಜೊತೆಗೂಡಿಸಿ ಅಲ್ಲದೆ ಅಂಗಾಂಗಗಳನ್ನು ಹಿಮ್ಮಡಿ ಗಳೂ ನೆಲದ ಮೇಲೆ ಚೆನ್ನಾಗಿ ಉರಿಡಬೇಕು.ಬಳಿಕ ಆಸನವನ್ನು ನೆಲದಿಂದ ಮೇಲೆತ್ತಿ ದೇಹವನ್ನು ಸಮತೋಲನ ಸ್ಥಿತಿಯಲ್ಲಿ ನಿಲ್ಲಿಸಬೇಕು.
2. ಅನಂತರ ತೊಡೆ ಮಂಡಿಗಳನ್ನ ಗಲಿಸಿ ಮುಂಡವನ್ನು ಮುಂಗಡೆಗೆ ಬಾಗಿಸಿ, ಎರಡೂ ಕಂಕುಳುಗಳನ್ನು ಮಂಡಿಗಳಿಂದಚೆಗೆ ಮುಂಭಾಗಕ್ಕೆ ತರಬೇಕು.
3. ಆಮೇಲೆ ಮುಂದಕ್ಕೆ ಬಾಗಿ ಕಾಲ್ಗಿಣ್ಣುಗಳ ಹಿಂಬದಿಗಳನ್ನು ಹಿಡಿದುಕೊಳ್ಳಬೇಕು.
4. ತುರುವಾಯು, ಉಸಿರನ್ನು ಹೊರಕ್ಕೆಬಿಟ್ಟು ತಲೆಯನ್ನು ಕಾಲ್ಬೆರಳುಗಳ ಬಳಿ ಬರುವಂತೆ ಕೆಳಕ್ಕೆ ಸರಿಸಿ, ಹಣೆಯನ್ನು ಅವುಗಳ ಮೇಲಿಡಬೇಕು.
5. ಈ ಭಂಗಿಯಲ್ಲಿ, ಸಾಮಾನ್ಯವಾಗಿ ಉಸಿರಾಟದಿಂದ ಒಂದು ನಿಮಿಷಗಳ ಕಾಲ ನೆಲೆಸಬೇಕು.
6. ಕಡೆಯಲ್ಲಿ ಉಸಿರನ್ನು ಒಳಕ್ಕೆಳೆದು,ತಲೆಯನ್ನು ಮೇಲತ್ತಿ ಕಾಲ್ಗಿಣ್ಣುಗಳ ಮೇಲಿನ ಬಿಗಿತವನ್ನು ಸಡಿಲಿಸಿ ನೆಲದ ಮೇಲೆ ವಿಶ್ರಮಿಸಿಕೊಳ್ಳಬೇಕು.
ಪರಿಣಾಮಗಳು
ಈ ಆಸನದ ಅಭ್ಯಾಸದಿಂದ ಕಿಬ್ಬೊಟ್ಟೆಯೋಳಗಿನ ಅಂಗಗಳು ಒಳ್ಳೆಯ ವ್ಯಾಯಾಮವನ್ನು ಪಡೆದು ಆ ಮೂಲಕ ಬಲಗೊಳ್ಳುವುದು ಸ್ತ್ರೀಯರು ರಾಜಸ್ವಲೆಯಲ್ಲಿರುವಾಗ ಬೆನ್ನು ಛಳಕಿಗೊಳಗಾಗುವುದಾದರೆ ಅವರು ಈ ಆಸವನ್ನಭ್ಯಸಿಸುವುದರಿಂದ ಗುಣ ಹೊಂದುವರು. ಆಗ ಅವರ ಬೆನ್ನು ಉಪಶಮನಗೊಳ್ಳುವುದು.
ಈ ಮೇಲಿನ ಎರಡು ವಿಧವಾದ ಆಸನದಲ್ಲಿಯೂ ತೋಳುಗಳು ಹೂವಿನ ಹಾರದಂತೆ ಕುತ್ತಿಗೆಗೆ ನೇತಾಡುವುದಾದ್ದರಿಂದ ಈ ಆಸನಕ್ಕೆ ಹೆಸರು.