ಮನೆ ಮಕ್ಕಳ ಶಿಕ್ಷಣ ಸುಳ್ಳು ಹೇಳುವ ಮಕ್ಕಳು

ಸುಳ್ಳು ಹೇಳುವ ಮಕ್ಕಳು

0

        ಚಿಕ್ಕ ಚಿಕ್ಕ ವಿಷಯಕ್ಕೂ ಸುಳ್ಳು ಹೇಳುವ ಮಕ್ಕಳನ್ನು ಕಂಡು ತಾಯಿ ತಂದೆಯರು ಬೇಪ್ಪಾಗುತ್ತಿ ರುತ್ತಾರೆ. “ಹೋಮ್ ವರ್ಕ್ ಕೊಟ್ಟಿದ್ದಾರಾ”  ಎಂದರೆ, “ಇಲ್ಲಾ” ಅನ್ನುತ್ತಾರೆ.ಶಾಲೆಯಲ್ಲಿ ಲಂಚ್ ಬಾಕ್ಸ್ ನಲ್ಲಿ ಇಟ್ಟಿದ್ದನ್ನೆಲ್ಲವನ್ನೂ ತಿಂದು ಮುಗಿಸಿದೆಯಾ? ” “ಹೌದು”. ಈ ರೀತಿಯಾಗಿ ಪ್ರತಿಯೊಂದುಕ್ಕೂ ಸುಳ್ಳು ಹೇಳುತ್ತಿದ್ದರೆ.ತಾಯಿ ತಂದೆಯರು  ತಲೆ ಕೆಡಿಸಿಕೊಳ್ಳುತ್ತಾರೆ. ಹೆಂಡರ್ಸನ್ ಎಂಬ ಸೈಕಾಲಜಿಸ್ಟ್, ಅದಕ್ಕೆ ಕಾರಣ ಶೇಕಡ 99 ರಷ್ಟು ತಾಯಿ ತಂದೆಯರೇ ಎನ್ನುತ್ತಾರೆ. ಉಳಿದ ಶೇಕಡ 10 ಸ್ನೇಹಿತರು, ಕುಟುಂಬದಲ್ಲಿ ಇತರರನ್ನು ಅನುಕರಣೆ ಮಾಡುವುದರಿಂದ ಎನ್ನುತ್ತಾರೆ.ಮನೆಯಲ್ಲಿ ತಾಯಿ ತಂದೆಯರು ಸಣ್ಣ ಪುಟ್ಟ ಸುಳ್ಳುಗಳನ್ನು ಹೇಳುವುದು, ಯಾರಾದರೂ ಫೋನ್ ಮಾಡಿದರೆ ಇಲ್ಲವೆಂದು ಹೇಳು ಎನ್ನುವುದರಿಂದ ಹಿಡಿದು, ತಾಯಿ ಹಣ ಕೇಳಿದರೆ ಇದ್ದೂ ಕೂಡಾ ಇಲ್ಲವೆನ್ನುವುದರ ತನಕ ಮಕ್ಕಳು ಗಮನಿಸುತ್ತಿದ್ದಾರೆ.

Join Our Whatsapp Group

 ಸಾಮಾನ್ಯವಾಗಿ ಮಕ್ಕಳು ಸುಳ್ಳು ಹೇಳುವುದಕ್ಕೆ ಹೇಳು ಕಾರಣಗಳಿರುತ್ತವೆ.

1. ಶಿಕ್ಷೆಯಿಂದ ಪರಾಗಬೇಕೆಂದು ನಿಜ ಹೇಳುವುದಿಲ್ಲ

2. ತಾಯಿ ತಂದೆಯರಿಗೆ ಕೋಪ ಬರಬಾರದೆಂಬುದಕ್ಕೆ

3. ತಂದೆ, ತಾಯಿಯಂದಿರ ಗಮನವನ್ನು ತನ್ನಡೆಗೆ ಸೆಳೆಯಲು

4. ಮನೆಯಲ್ಲಿರುವವರು ತಾನು ಹೇಳುವ ಸುಳ್ಳುಗಳ ಬಗ್ಗೆ ಅಷ್ಟೇನೂ ತೀವ್ರವಾಗಿ ಪರಿಗಣಿಸುವುದಿಲ್ಲವೆಂದೂ

5. ತನ್ನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು

6. ಹಿರಿಯರನ್ನು ಅನುಕರಿಸುವ ಅಭ್ಯಾಸದಿಂದ

7. ತನಗೆ ಸಹಾಯಬೇಕೆಂದು ತಿಳಿಸಲು

    ಮಕ್ಕಳು ಈ ರೀತಿ ಸುಳ್ಳು ಹೇಳದಂತಿರಲು ಚಿಕಿತ್ಸೆಯ ಅಗತ್ಯವಿಲ್ಲ ತಾಯಿ ತಂದೆಯರ ಪರಿವರ್ತನೆ ಬದಲಾಗಬೇಕು ಸುಳ್ಳು ಹೇಳುವುದರಿಂದ ಉಂಟಾಗುವ ಕಷ್ಟಗಳ ಬಗ್ಗೆ ಸಮಾಧಾನವಾಗಿ ತಿಳಿ ಹೇಳಬೇಕು. ಅಥವಾ ಇತರ ಹಿರಿಯರಿಂದ ಬುದಿವಾದ ಹೇಳಿಸಬೇಕು.

ಕಳ್ಳತನ

      ತಮ್ಮ ಮಗ ಮಗಳು ಮನೆಯಲ್ಲಿ ಹಣ ಕಳ್ಳತನ ಮಾಡುತ್ತಿದ್ದಾರೆಂದು ಗೊತ್ತಾದರೆ ತಾಯಿ ತಂದೆಯರು ದೊಡ್ಡ ಆಘಾತಕ್ಕೊಳಗಾಗುತ್ತಾರೆ. ಅದನ್ನು ಒಂದೇ ಬಾರಿಗೆ ನಂಬಲಾರರು. ಆದರೆ ಅದು ನಂಬಲಾಗದ ನಗ್ನಸತ್ಯ ಎಂದು ತಿಳಿದುಕೊಂಡ ನಂತರ ವಿವಿಧ ರೀತಿಯಲ್ಲಿ ಪ್ರತಿಕ್ರಿಸುತ್ತಾರೆ.ಕೆಲವರು ಬೆದರಿಸಿದರೆ, ಮತ್ತೆ ಕೆಲವರು ತಮ್ಮೆಲ್ಲಾ ಬಂಧುಗಳಿಗೆ ಹೇಳುತ್ತಾರೆ. ಮತ್ತೆ ಕೆಲವರು ತಮ್ಮ ಮಕ್ಕಳೊಂದಿಗೆ ಮಾತನಾಡುವುದೇ ಬಿಟ್ಟುಬಿಡುತ್ತಾರೆ.ಆದರೆ,ಈ ಮೂರು ಕ್ರಮಗಳು ಉತ್ತಮವಲ್ಲ.

    ಮಗ ಮನೆಯಲ್ಲಿ ಹಣ ತೆಗೆದುಕೊಂಡಿದ್ದಾನೆಂದರೆ ಆತನಿಗೆ ಅಗತ್ಯವಾದ ಪಾಕೆಟ್ ಮನಿ ಇಲ್ಲದಿರುವುದರಿಂದ ಕಾರಣವಾಗಬಹುದು. ಅಥವಾ ಅವನ ಶ್ರೀಮಂತ ಸ್ನೇಹಿತರ ಮುಂದೆ ದರ್ಪ ಪ್ರದರ್ಶಿಸಲು ಆಗಿರಬಹುದು.ಅಥವಾ ಸಹಪಾಠಿಗಳ ಪೈಕಿ ಆ ರೀತಿಯ ಅಭ್ಯಾಸ ಇರುವವರು ಪ್ರೋತ್ಸಾಹಿಸಿರಬಹುದು.ಅಂತಹ ಪರಿಸ್ಥಿತಿಯಲ್ಲಿ ಆತನೊಂದಿಗೆ ತಾಯಿ ತಂದೆಯರ ಪೈಕಿ ಒಬ್ಬರು ವಯಕ್ತಿಕವಾಗಿ ಮಾತನಾಡಬೇಕು. ಮನೆಯಲ್ಲಿನ ಇತರ ಕುಟುಂಬ ಸದಸ್ಯರೆಂದುರಿಗೆ ಅದನ್ನು ದೊಡ್ಡ ರಾದಾಂತವನ್ನಾಗಿ ಮಾಡಬಾರದು.

      ಕೆಲವು ಕುಟುಂಬಗಳು ತಾಯಿ ತಂದೆಯರು ಬೇಕಾಬಿಟ್ಟಿಯಾಗಿ ಖರ್ಚು ಮಾಡುವುದರಿಂದ ಮಕ್ಕಳು ಕೂಡ ಅದೇ ಹಾದಿಯನ್ನಿ ಡಿದು ಹಣ ಕಳವು ಮಾಡಬಹುದು ಅಥವಾ ಹಣವನ್ನು ನೋಡಿದಾಕ್ಷಣ ಕಳ್ಳತನ ಮಾಡಬೇಕೆಂಬ ಪ್ರೇರಣೆ ಒಂದು ರೋಗ  ಸಮಸ್ಯೆಯಾಗಿ ಕೃತ್ಯ ಎಸೆಗಬಹುದು. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಕ್ಲಿಪ್ಪೋಮೇನಿಯಾ ಎನ್ನುತ್ತಾರೆ. ಕೇವಲ ಹಣವೇ ಅಲ್ಲ. ಶಾಲೆಯಲ್ಲಿ ಸಹಪಾಠಿಗಳ ಪೆನ್ನು, ಪೆನ್ಸಿಲ್, ಮತ್ತು ಸ್ಕೇಲ್ ಗಳನ್ನು ಕೂಡಾ ಲಪಟಾಯಿಸಿ,ಅವುಗಳನ್ನು ಆಗಾಗ್ಗೆ ನೋಡಿ ತೃಪ್ತಿಹೊಂದುತ್ತಾರೆ. ಸೈಕಾಲಜಿಸ್ಟ್ ಮೂಲಕ ಕೌನ್ಸಿಲಿಂಗ್ ಮಾಡಿಸಿ ಸಮಸ್ಯೆಗಳನ್ನು ಹೋಗಲಾಡಿಸಬಹುದು .