ಮನೆ ರಾಜಕೀಯ ತಿರುಪತಿ ಪ್ರಸಾದ ಲಾಡುವಿನ ಬಗ್ಗೆ ಸಮಗ್ರ ತನಿಖೆಯಾಗಬೇಕು: ಪ್ರಲ್ಹಾದ ಜೋಶಿ

ತಿರುಪತಿ ಪ್ರಸಾದ ಲಾಡುವಿನ ಬಗ್ಗೆ ಸಮಗ್ರ ತನಿಖೆಯಾಗಬೇಕು: ಪ್ರಲ್ಹಾದ ಜೋಶಿ

0

ಹುಬ್ಬಳ್ಳಿ:  ತಿರುಪತಿ ಪ್ರಸಾದ ಲಾಡುವಿನ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದೆ. ಆಂಧ್ರಪ್ರದೇಶದ ಹಿಂದಿನ‌ ಸರ್ಕಾರ ಲಾಡು ತಯಾರಿಕೆಗೆ ರಾಜ್ಯದ ನಂದಿನಿ ತುಪ್ಪ‌ ತರಿಸಿಕೊಳ್ಳಲಾಗುತ್ತಿತ್ತು. ಅದನ್ನು ನಿಲ್ಲಿಸಿ, ಬೇರೆ ಕಡೆಯಿಂದ ತುಪ್ಪ ತರಿಸಿಕೊಳ್ಳಲು ಆರಂಭಿಸಿದಾಗಿನಿಂದ ಈ ರೀತಿ ಘಟನೆಗಳು ನಡೆದಿವೆ ಎಂದು ಕೇಂದ್ರ ಸಚಿವ ಪಲ್ಹಾದ ಜೋಶಿ ಹೇಳಿದರು.

Join Our Whatsapp Group

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೆ ಸಂಬಂಧಿಸಿದ ಪ್ರಯೋಗಾಲಯದ ವರದಿಯನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಅಗಬೇಕು ಎಂದರು.

ಎಲ್ಲ‌ ದೇವಸ್ಥಾನಗಳಲ್ಲಿ ಸ್ವಚ್ಛತೆ, ಜನರ ಶ್ರದ್ಧೆಗೆ‌ ಧಕ್ಕೆ‌ ಆಗದಂತೆ ದೇವಸ್ಥಾನದ ಆಡಳಿತ ಮಂಡಳಿಯವರು ಕಾಲಕಾಲಕ್ಕೆ ಪರಿಶೀಲಿಸಬೇಕು. ಇದರಲ್ಲಿ ಸರ್ಕಾರ ಕೈಹಾಕಬಾರದು.‌ ಇದು ದೇಶದ ಜನರ ಶ್ರದ್ಧೆ, ಸಂಸ್ಕೃತಿಯ ಪ್ರಶ್ನೆ. ಈ ರೀತಿ ದ್ರೋಹ ಮಾಡುವುದು ಸರಿಯಲ್ಲ. ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ತಾರ್ಕಿಕ ಅಂತ್ಯಕ್ಕೆ ಕೊ‌ಂಡೊಯ್ಯುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ‌‌ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಬಿಜೆಪಿಯವರನ್ನು ಹುಡುಕಿ‌ ಹುಡುಕಿ ಪ್ರಕರಣ ದಾಖಲಿಸಲಾಗುತ್ತಿದೆ. ಎಲ್ಲ ಪ್ರಕರಣಗಳಲ್ಲಿ ಕಾಂಗ್ರೆಸ್ ನವರು ಸಿಕ್ಕಿ‌ಹಾಕಿಕೊಂಡಿದ್ದು, ಬೇರೆಯವರನ್ನೂ ಕಳ್ಳರು ಎಂದು ಬಿಂಬಿಸುತ್ತಿದ್ದಾರೆ ಎಂದರು.

ಪ್ರೀತಿಯ ಅಂಗಡಿ ತೆರೆಯಿರಿ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ ರಾಜ್ಯದಲ್ಲಿ ರಾಜಕೀಯ ಹಗೆತನ ಸಾಧಿಸಲಾಗಯತ್ತಿದೆ‌. ದಾವಣಗೆರೆಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ನಡೆದ ಗಲಾಟೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಾಗಿಯಾಗಿದ್ದಾನೆ. ಅವನ ವಿರುದ್ಧ ಕ್ರಮ‌ ಕೈಗೊಂಡಿಲ್ಲ. ಇಷ್ಟಾದರೂ ಕೇವಲ ಎರಡು ಘಟನೆಗಳು ನಡೆದಿವೆ ಎಂದು ಮುಖ್ಯಮಂತ್ರಿ ಸಮರ್ಥಿಸಿಕೊಳ್ಳುತ್ತಿದ್ದಾರೆ‌. ಈ ರೀತಿಯ ತುಷ್ಟೀಕರಣ ರಾಜಕಾರಣ ಖಂಡನೀಯ ಎಂದರು.

ಹುಬ್ಬಳ್ಳಿಯಲ್ಲಿ ಸಿಖ್ಖರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿದ್ದರೂ ಇಲ್ಲಿ ಗುರುದ್ವಾರ ಇದೆ. ಅದರೆ ರಾಹುಲ್ ಗಾಂಧಿ ಅವರು ಭಾರತದಲ್ಲಿ ಸಿಖ್ಖರಿಗೆ ಟರ್ಬನ್ ಹಾಕಿಕೊಳ್ಳಲು ಬಿಡುತ್ತಿಲ ಎಂದು ಸುಳ್ಳು ಹೇಳಿ  ವಿದೇಶದಲ್ಲಿ ಭಾರತದ ಸಂಸ್ಕೃತಿಯನ್ನು ಅಪಮಾನ ಮಾಡಿದ್ದಾರೆ ಎಂದು ಹೇಳಿದರು.

ಶಾಸಕ ಮುನಿರತ್ನ ವಿರುದ್ಧ ಗಂಭೀರ ಸ್ವರೂಪದ ಆರೋಪ ಕೇಳಿ ಬಂದಿದೆ.‌ ಈ ಬಗ್ಗೆ ತನಿಖೆ ನಡೆಯಲಿ.‌ಉಪ್ಪು‌ ತಿಂದವರು‌‌ ನೀರು ಕುಡಿಯಲೇ ಬೇಕು ಎಂದರು.

ಕೊಪ್ಪಳದಲ್ಲಿ ಮಸೀದಿಯ ಮುಂದೆ ಗಣೇಶ ವಿಸರ್ಜನಾ ಮೆರವಣಿಗೆ ನಿಲ್ಲಿಸುವಂತೆ ಹೇಳುತ್ತಾರೆ. ನಾವು ಬೆಳಿಗ್ಗೆ ಪೂಜೆ ಮಾಡುವಾಗ ಅವರು ನಮಾಜ್ ಮಾಡುವುದು ನಿಲ್ಲಿಸುತ್ತಾರಾ? ನಾಗಮಂಗಲದಲ್ಲಿ ಗಣಪತಿ ಕೂರಿಸಿದವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಇದು ಹಿಂದೂ ವಿರೋಧಿ ನೀತಿಗೆ ಸ್ಪಷ್ಟ ಉದಾಹರಣೆ ಎಂದರು‌.