ಮನೆ ದೇವಸ್ಥಾನ ಜಾನಪದ ಸಾಹಿತ್ಯದಲ್ಲಿ ಹೊರನಾಡ ಅನ್ನಪೂರ್ಣೆ

ಜಾನಪದ ಸಾಹಿತ್ಯದಲ್ಲಿ ಹೊರನಾಡ ಅನ್ನಪೂರ್ಣೆ

0

ಉದಯರಾಗ

ಅನ್ನಪೂರ್ಣಾಂಬಿಕೆ ಅಮೃತ ಪ್ರಸಾಧಿನಿಯೆ |
ಬೆಳಗಾಯಿತೇಳು | ತಾಯೆ ಜಗದಂಬ||
ಅನ್ನದಲ್ಲಿ ಚಿನ್ನಿಗನ ಸಲಹಿ ಸರ್ವತ ಕಾಯ್ವ |
ಹೊನ್ನಮ್ಮ ಏಳು ತಾಯೇ ಜಗದಂಬ | ಹೊನ್ನಮ್ಮ ಹೇಳು ತಾಯಿ | ||ಪ||

ಕೋಳಿ ಕೂಗಿತು ಜಗದ ತಮ ಹರಿದು ಬೆಳಗಾಯಿ |
ಹೇಳಮ್ಮ ಏಳು ತಾಯೆ| ಜಗದಾಂಬ ||
ತಾಳ ಮೇಳದಿ ಜನರು ಊಳಿಗಕೆ ಬಂದಿರುವ |
ವೇಳೆ ಇದು ಏಳು ತಾಯೇ ಜಗದಾಂಬ ವೇಳೆ ಇದು ಏಳು ತಾಯೇ || 1||

ಶ್ರೀ ದಕ್ಷಿಣ ಕಾಶಿ ಹೊರನಾಡು ಪುರವಾಸಿ |
ಗಿರಿರಾಜ ಕುವರಿ ತಾಯೇ| ಜಗದಂಬ ||
ಸುರಕ್ಷಣೆಯ ಬಯಸಿ ಜನರು ಸಂದಣಿ ಗೂಡಿ |
ಬಂದಿಹರು ನೋಡು ತಾಯೇ| ಜಗದಂಬ ಬಂದಿಹರು ನೋಡು ತಾಯೇ || 2 ||

ವಿಘ್ನೇಶನರ್ಚಿಸಲು ವಾಗ್ದೇವಿ ಧ್ಯಾನಿಸಲು
ಬುದ್ಧಿ ಬೆಳಕು ಹರಿಸು ತಾಯಿ| ಜಗದಂಬ||
ಸುಜ್ಞಾನ ರೂಪಿಣಿಯೇ ಅಜ್ಞಾನ ಹಾರಿಣೀಯೆ,|
ಪ್ರಜ್ಞೆಯನ್ನು ಅರುಹು ತಾಯೇ| ಜಗದಂಬ | ಪ್ರಜ್ಞೆಯನ್ನು ಅರುಹು ತಾಯೇ || 3 ||

ಅಗಸ್ತ್ಯಮುನಿಗಳರ್ಚಿಸುತ ಸ್ಥಾಪಿಸಿದ |
ಪೂರ್ಣಾಂಬ ಏಳು ತಾಯೇ| ಜಗದಂಬ |
ಜಗತ್ತಿನೊಳಗಿರುವ ಜೀವಕೋಟೆಯನ್ನೆಲ್ಲಾ |
ಸೌಖ್ಯದಿಂ ಸಲಹು ತಾಯೇ |ಜಗದಂಬ | ಸೌಖ್ಯದಿಂ ಸಲಹು ತಾಯಿಯೇ || 4 ||