ಮನೆ ಮನೆ ಮದ್ದು  ಲಕ್ವ

 ಲಕ್ವ

0

1. ಬೆಳ್ಳುಳ್ಳಿಯ ತೋಳೆಗಳನ್ನು ನುಣ್ಣಗೆ ಅರೆದು,ಹಾಲಿನಲ್ಲಿ ಸೇರಿಸಿ, ಚೆನ್ನಾಗಿ ಕಾಯಿಸಿ ಕುಡಿಯುವ ಅಭ್ಯಾಸವನ್ನು ದೀರ್ಘಾವಧಿಯವರೆಗೆ ಮುಂದುವರಿಸುತ್ತಿದ್ದರೆ ಲಕ್ವ ಹೊಡೆತದಿಂದ ವಿಕ್ಷೂತಗೊಂಡ ದೇಹವನ್ನು ಅಂಗವನ್ನು ಮೊದಲು ವಿರೂಪಕ್ಕೆ ತರಬಹುದು.

 ವಾಂತಿ :-

1. ನಿಂಬೆ ಹಣ್ಣಿನ ರಸದಲ್ಲಿ ಸ್ವಲ್ಪ ಸ್ವಲ್ಪವೇ ಕುಡಿದರೆ ಹೊಟ್ಟೆ ತುಳಸಿ ವಾಂತಿ ಇದ್ದಾಗ ನಿಲ್ಲುವುದು.

2. ಅರ್ಧ ಬಟ್ಟಲು ತಣ್ಣೀರಿಗೆ ಒಂದು ಹೋಳು ನಿಂಬೆ ಹಣ್ಣು,ಪುಡಿ ಮಾಡಿದ ಜೀರಿಗೆ,ಏಲಕ್ಕಿ ಪುಡಿ ಬೆರೆಸಿ ದಿನವೂ ಮೂರು ಮೂರು ಬಾರಿ ಒಂದೆರಡು ದಿನ ಕುಡಿಯುತ್ತಿದ್ದರೆ ವಾಂತಿ ಪೂರ್ತಿ ನಿಲ್ಲುವುದು.

3. ಒಂದು ಟೀ ಚಮಚ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನುಣ್ಣಗೆ ಅರೆದು, ಒಂದು ಬಟ್ಟಲು ಅಕ್ಕಿ ತೊಳೆದು ನೀರಿನಲ್ಲಿ ಕದಡಿ, ಸಕ್ಕರೆ ಬೆರೆಸಿ ಸೇವಿಸುವುದರಿಂದ ವಾಂತಿ, ಓಕರಿಕೆ ನಿಲ್ಲುತ್ತದೆ. ಓಕರಿಕೆ ಹಾಗೂ ಉಬ್ಬಳ್ಳಿಗೆಯ ದೋಷಗಳೂ ನಿವಾರಣೆ ಆಗುವುವು.

4. ನಿಂಬೆಹಣ್ಣಿನ ಪಾನಕಕ್ಕೆ ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿದರೆ ವಾಂತಿ ಆಗುವುದು ನಿಲ್ಲುವುದು. ಗಂಟಲ ಬಳಿ ತೊಳೆಸುವುದು ಕಡಿಮೆ ಆಗುವುದು .

5. ನಿಂಬೆಹಣ್ಣಿನ ರಸವನ್ನು ಬಟ್ಟಲು ನೀರಿಗೆ ಸೇರಿಸಿ ಕುಡಿಯುವುದರಿಂದ ವಾಂತಿ ಥಟ್ಟನೆ ನಿಲ್ಲುವುದರ ಜೊತೆಗೆ ಆಯಾಸವು ಪರಿಹಾರ ಆಗುವುದು.

6. ಕತ್ತರಿಸಿದ ನಿಂಬೆಹಣ್ಣನ್ನು ಬಟ್ಟಲ ನೀರಿಗೆ ಬೆರೆಸಿ ಕುಡಿಯುವುದರಿಂದ ಹೊಟ್ಟೆ ತೊಳೆಯುವುದು ನಿಲ್ಲುವುದರ ಜೊತೆಗೆ ವಾಂತಿ ಆಗುವುದೂ ನಿಧಾನವಾಗಿ ಕಡಿಮೆ ಆಗುವುದು.

7. ಮೆಣಸಿನಕಾಳನ್ನು ಈರುಳ್ಳಿ ರಸದೊಂದಿಗೆ ಅರೆದು,ತೆಳುವಾದ ಬಟ್ಟೆಯಲ್ಲಿ ಗಂಟು ಕಟ್ಟಿ ಹಿಂಡಿ ಬರುವ ರಸವನ್ನು ಸೇವಿಸಿದರೆ ಅತಿಯಾಗಿ ಆಗುವ ವಾಂತಿ ನಿಲ್ಲುವುದು.