ಮನೆ ರಾಜ್ಯ ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ: ಹೆಚ್ಚಿದ ಆತಂಕ

ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ: ಹೆಚ್ಚಿದ ಆತಂಕ

0

ಮಡಿಕೇರಿ (Madikeri): ಕೊಡಗು ಜಿಲ್ಲೆಯ ಕೆಲವೆಡೆ ಶುಕ್ರವಾರ ನಸುಕಿನಲ್ಲಿ ಭೂಮಿ ಎರಡು ಬಾರಿ‌ ಕಂಪಿಸಿದೆ. ಪದೇ ಪದೇ ಭೂಕಂಪನ ಸಂಭವಿಸುತ್ತಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.

ಇಲ್ಲಿನ ಸಂಪಾಜೆ, ಪೆರಾಜೆ, ಗೂನಡ್ಕ ವ್ಯಾಪ್ತಿಯಲ್ಲಿ ನಸುಕಿನ‌ 1.15 ರಿಂದ 1.40 ರ ಅವಧಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಮಲಗಿದ್ದ ಜನರು ಗಾಬರಿಯಿಂದ ಮನೆಯಿಂದ ಹೊರಗೆ ಬಂದಿದ್ದಾರೆ.

ಕೊಡಗಿನಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರವಷ್ಟೆ ಭೂ ವಿಜ್ಞಾನಿಗಳ ತಂಡ ಇಲ್ಲಿ ಭೂಕಂಪನ ಮಾಪನ ಉಪ ಕೇಂದ್ರ ಸ್ಥಾಪಿಸಿತ್ತು.

ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಪರಿಣತ ಅನನ್ಯ ವಾಸುದೇವ್, ಭೂಮಿ ಕಂಪಿಸಿದ ಕುರಿತ ಮಾಹಿತಿ ಬಂದಿದೆ. ರಿಕ್ಟರ್ ಮಾಪಕದ ದತ್ತಾಂಶಗಳನ್ನು ವಿಶ್ಲೇಷಿಸುವ ಕಾರ್ಯ ನಡೆಯುತ್ತಿದೆ. ಬಳಿಕವಷ್ಟೇ ತೀವ್ರತೆಯನ್ನು ಹೇಳಬಹುದು ಎಂದಿದ್ದಾರೆ.

ಹಿಂದಿನ ಲೇಖನದಕ್ಷಿಣ ಕನ್ನಡದಲ್ಲಿ ಮತ್ತೆ ಕಂಪಿಸಿದ ಭೂಮಿ
ಮುಂದಿನ ಲೇಖನಮೊದಲ ಆಷಾಢ ಶುಕ್ರವಾರ: ಚಾಮುಂಡೇಶ್ವರಿ ತಾಯಿಯ ದರ್ಶನಕ್ಕೆ ಹರಿದು ಬಂದ ಭಕ್ತಸಾಗರ