ಮನೆ ಅಪರಾಧ ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ

0

ವಿಜಯಪುರ: ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಕಲ್ಲಿನ ಮಂಟಪವನ್ನು ಕಿಡಿಗೇಡಿಗಳು ಹಾನಿಗೊಳಿಸಿರುವ ಘಟನೆ ನಗರದಲ್ಲಿ ನಡೆದಿದೆ.

Join Our Whatsapp Group

ಇಲ್ಲಿನ ಸಿದ್ದೇಶ್ವರ ದೇವಸ್ಥಾನ ಬಳಿಯ ಗಣಪತಿ ಚೌಕ್ ನಲ್ಲಿ ಈ ಘಟನೆ ಜರುಗಿದೆ. ಚತುರ್ಮುಖ ಗಣಪನ ಮೂರ್ತಿ ಇರುವ ಕಲ್ಲಿನ ಮಂಟಪ ಇಲ್ಲಿದೆ. ಕಿಡಿಗೇಡಿಗಳು ಕಲ್ಲು ತೂರಿ ಮಂಟಪದ ಎರಡು ಗಾಜುಗಳನ್ನು ಪುಡಿ-ಪುಡಿ ಮಾಡಿದ್ದಾರೆ.

ವಿಷಯ ತಿಳಿದು ಸ್ಥಳದಲ್ಲಿ‌ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಸ್ಥಳೀಯ ಜನರು ಜಮಾವಣೆಗೊಂಡಿದ್ದಾರೆ. ಅಲ್ಲದೇ, ಸ್ಥಳಕ್ಕೆ ಗಾಂಧಿ ಚೌಕ್ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.