ಮನೆ ಸಾಹಿತ್ಯ ಮೌನವೆಂದರೇನು?

ಮೌನವೆಂದರೇನು?

0

 ಒಂದು ಹಳ್ಳಿಯ ಹೊರೆಗೆ ಹೆಸರಾದ ಒಂದು ಮಠವಿತ್ತು ಜ್ಞಾನ ಹಾಗೂ ಬುದ್ಧಿಮತ್ತೆಗೆ ಅಲ್ಲಿನ ಮಠಾಧಿಪತಿ ಖ್ಯಾತರಾಗಿದ್ದರು ಹೀಗಾಗಿ ಆ ಪೂಜ್ಯ ಗುರುಗಳಿಗೆ ತಮ್ಮ ಗೌರವ ಸೂಚಿಸುವ ಜನರು ಬೀಡುಬೀಡಾಗಿ  ಬರುತ್ತಿದ್ದರು.ಇದರಿಂದ ಮಠದ ಶಾಂತಿ ಹಾಗೂ ನಿಮ್ಮದಿಗೆಜ್ಜಿ ಭಗವುಂಟಾಯಿತು. ಇದರಿಂದ ಶಿಷ್ಯರು ಚಡಪಡಿಸಿದರು.ಆದರೆ ಮೌನದೊಂದಿಗೆ ಇದ್ದ ಕಾರಣ ಗದ್ದಲದ ಬಗ್ಗೆ ಗುರುಗಳು ಚಿಂತಿಸಲಿಲ್ಲ.

Join Our Whatsapp Group

 ಪ್ರತಿಭಟಿಸುತ್ತಿದ್ದ ತಮ್ಮ ಶಿಷ್ಯರಿಗೆ ಗುರುಗಳು ಒಮ್ಮೆ ಹೀಗೆ ಹೇಳಿದರು.

 ಪ್ರಶ್ನೆಗಳು :

1. ಗುರುಗಳು ಏನು ಹೇಳಿದರು

2. ಈ ಕಥೆಯ ನೀತಿ ಏನು

 ಉತ್ತರಗಳು :

1. “ಮೌನ ಎಂದರೆ ಶಬ್ದ ಇಲ್ಲದಿರುವುದು ಎಂದಲ್ಲ ಅದು ತನ್ನತನದ ಅಭಾವವನ್ನು ಸೂಚಿಸುತ್ತದೆ”.

2. ಇಲ್ಲಿ ‘ತನ್ನತನ’ ಎಂದರೆ ಒಬ್ಬ ವ್ಯಕ್ತಿಯ ಅಸ್ತಿತ್ವದ ಭಾವ. ಇದು ಬದುಕಿನಲ್ಲಿ ಆಲೋಚಿಸಿದ. ಭಾವಿಸಿದ ಮತ್ತು ಮಾಡಿದಂತಹದ್ದು. ತನ್ನತನವು  ಒಬ್ಬ ವ್ಯಕ್ತಿಯ ವೈಯಕ್ತಿಕ ಅಂಶ ಇದು ವ್ಯಕ್ತಿಯ ಸಮಸ್ಯೆಗಳು ಆತಂಕ ಸಂತೋಷ ಹಗೂ ದುಃಖ ಇತ್ಯಾದಿಗಳನ್ನು ಒಳಗೊಂಡಿದೆ. ಆದರೆ ಈ ತನ್ನತನ  ಬದಿಗಿಡುವುದನ್ನು ಕಲಿಯುವುದರಿಂದ ಧ್ಯಾನಾವಸ್ಥೆಯನ್ನು ವ್ಯವಸ್ಥೆಯನ್ನು ಸಾಧಿಸಬಹುದೆಂದು ನಾವು ನೆನಪಿಸಿಡಬೇಕು. ಇದು ಬಟ್ಟೆಯನ್ ಕಳಚಿ ಶಾಂತ ಚಿತ್ತವಾಗಿ ಕುಳಿತುಕೊಳ್ಳುವಂತೆ.ಇದು ವಿಚಾರಗಳಿಲ್ಲದ ಆಕಾಂಕ್ಷೆ ಯಿಲ್ಲದ.ಮತ್ತು ಆಸೆಗಳಿರದ  ಮನಸ್ಸು.ವಿಶ್ವದ ಹಾಗೂ ಆತ್ಮದ ಬಗ್ಗೆ ಅರಿವಿಲ್ಲದ ಸ್ಥಿತಿಯಲ್ಲಿ ಮೌನವನ್ನು ಸಾಧಿಸಬಹುದು.