ಮನೆ ದೇವಸ್ಥಾನ ಶಾಸ್ತ್ರ ಸಾಹಿತ್ಯದಲ್ಲಿ ಅನ್ನಪೂರ್ಣೇಶ್ವರಿ

ಶಾಸ್ತ್ರ ಸಾಹಿತ್ಯದಲ್ಲಿ ಅನ್ನಪೂರ್ಣೇಶ್ವರಿ

0

ಶಾಸ್ತ್ರ ಗ್ರಂಥಗಳಲ್ಲಿ ಅನ್ನದ ಮಹತ್ವ

Join Our Whatsapp Group

ಆದಿ ಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿಯ ಪ್ರತಿರೂಪ ಅನ್ನ ಎಂದು ಎಲ್ಲರೂ ನಂಬಲಾಗಿದೆ.ಅನ್ನವು ಪರಬ್ರಹ್ಮವೆನ್ನುತ್ತದೆ.ಉಪನಿಷತ್ತು.ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದನ್ನು ಪರಬ್ರಹ್ಮ ಸ್ವರೂಪದಲ್ಲೆ ನೋಡುವುದು ಸ್ವಾಭಾವಿಕ. ದೇವರಮೂರ್ತಿ ಪೂಜೆ, ಆರಾಧನೆಯೂ ಪರಬ್ರಹ್ಮ ಪುನರುಚ್ಚಾರಣೆಯ ಪುರಶ್ವರಣೆ ಮಂತ್ರ ವಿಜ್ಞಾನವು ಕಣ್ಣಿಗೆ ಕಾಣುವುದನ್ನು ನಂಬಬೇಕು ಎನ್ನುತ್ತದೆ.

ಆದರೆ ಆಧ್ಯಾತ್ಮ ಈ ಬ್ರಹ್ಮವು ಆತ್ಮಕ್ಕೆ ಮಾತ್ರ ವೇದ್ಯವಾಗುತ್ತದೆ ಎನ್ನುತ್ತದೆ. ಸೃಷ್ಟಿಯನ್ನು ವೇದ ವಿಜ್ಞಾನದಲ್ಲಿ ಹೇಳಿರುವಷ್ಟು ಸ್ಪಷ್ಟವಾಗಿ ಬೇರೆ ಯಾವುದೇ ಗ್ರಂಥಗಳಲ್ಲಿ ಹೇಳಿರುವುದಿಲ್ಲ. ಯಾವುದೇ ವೈಜ್ಞಾನಿಕ ಆವಿಷ್ಕಾರಗಳೂ ಈ ಕ್ರಮವನ್ನು ಅಲ್ಲಗಳೆದಿಲ್ಲ ಪರಬ್ರಹ್ಮ ತತ್ವದಿಂದ ಆಕಾಶ,ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ,ಅಗ್ನಿಯಿಂದ ಜಲ, ಜಲದಿಂದ ಪೃಥ್ವಿ ಇದು ದಿವ್ಯದೃಷ್ಟಿಯ ಕ್ರಮ.ದಿವ್ಯದೃಷ್ಟಿಯ ಕ್ರಮವೇ ದೇಹದ ಹೃದಯ ಭಾಗದಲ್ಲಿ ಆಕಾಶ ತತ್ವವಾಗಿ,ನಾಭಿಭಾಗದಲ್ಲಿ ಜಲತತ್ವವಾಗಿ ಅದರ ಕೆಳಭಾಗ ಭೂತತ್ತ್ವವಾಗಿ, ನಾಭಿಭಾಗದಲ್ಲಿ ಜಲತತ್ವವಾಗಿ ಕೆಳಭಾಗ ಭೂತತ್ವವಾಗಿ ಬಿಂಬಿಸಲ್ಪಟ್ಟಿದೆ.ಮನುಷ್ಯ ಮನುಷ್ಯರಲ್ಲಿಯ ಸಮಸ್ತ ವ್ಯತ್ಯಾಸಗಳು ಶಬ್ದ,ರೂಪ, ರಸ,ಸ್ಪರ್ಶ,ಗಂಧ ಎಂಬ ಐದು ತನ್ಮಾತ್ರಗಳಿಂದ ಬಿಂಬಿಸಲ್ಪಟ್ಟಿದೆ.  ಮೂಲಧಾರದಲ್ಲಿಯ ಕುಂಡಲಿನೀ ತತ್ವವೇ ಶಕ್ತಿಯಾಗಿ ರೂಪುಗೊಂಡಿದ್ದು. ಅನ್ನದಿಂದ ದೇಹಕ್ಕೆ ಪುಷ್ಟಿ ದೊರೆಯುವ ಕಾರಣ ಅನ್ನವನ್ನು ಪರಬ್ರಹ್ಮ ದೇವರೆಂದು ಭಾವಿಸಿ, ಅದರಿಂದ ದೊರೆಯುವ ಶಕ್ತಿಯನ್ನು ಪ್ರಕೃತಿಯೆಂದು ಭಾವಿಸಿ ಅದಕ್ಕೆ ಮೂರ್ತಿರೂಪಕೊಟ್ಟು ದೈವ ಸ್ವರೂಪಿ ಶ್ರೀಅನ್ನಪೂರ್ಣೇಶ್ವರಿ ಎಂದು ಕರೆಯಲಾಗಿದೆ. ಪೂಣಾ ಎಂಬ ಹೆಸರು ಸರ್ವಜ್ಞತೆಯ ಕಡೆಗೆ ಸಾಗುವುದೇ ಪೂರ್ಣ ಪದದ ಅರ್ಥ. ಈ ಶಕ್ತಿಯನ್ನು ದೈವೀ ರೂಪದಲ್ಲಿ ಅನ್ನ ಶಕ್ತಿಯಾಗಿ ತಿಳಿದು ಸಮಸ್ತ ಜೀವಿಗಳ ದೈಹಿಕ, ಮಾನಸಿಕ, ಭೌದ್ಧಿಕ, ಪಾರಮಾರ್ಥಿಕ  ಹಸಿವನ್ನು ತೀರಿಸುವವಳಾಗಿ ಬಿಂಬಿಸಿರುವ ಮೂರ್ತಿಯೇ ಅನ್ನಪೂರ್ಣೇ ಆಗಿದ್ದಾಳೆ. ಅವಳ ಕುರಿತು ಋಗ್ವೇದ ಮಂಡಲದಲ್ಲಿ.