ಮನೆ ರಾಜ್ಯ ಕೇಂದ್ರ ಸರ್ಕಾರದ ಯೋಜನೆಗಳಿಂದ ಜನರ ಬದುಕು ಹಸನು: ಸಚಿವ ಕೆ.ಗೋಪಾಲಯ್ಯ

ಕೇಂದ್ರ ಸರ್ಕಾರದ ಯೋಜನೆಗಳಿಂದ ಜನರ ಬದುಕು ಹಸನು: ಸಚಿವ ಕೆ.ಗೋಪಾಲಯ್ಯ

0

ಬೆಂಗಳೂರು(Bengaluru): ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿಯವರು  ನಡೆಸಿಕೊಟ್ಟ ನೇರ ಸಂವಾದ ಕಾರ್ಯಕ್ರಮವನ್ನು ಜಿಕೆವಿಕೆ ಸಭಾಂಗಣದಲ್ಲಿಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ವೀಕ್ಷಿಸಿದರು.  

ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಕೆ.ಗೋಪಾಲಯ್ಯ, ಕೇಂದ್ರ ಸರ್ಕಾರದ ಜನಪರ ಕಾಳಜಿಯ ಹತ್ತಾರು ಯೋಜನೆಗಳು ದೇಶದ ಪ್ರತಿ ಕುಟುಂಬಕ್ಕೂ ಲಭಿಸಿವೆ. ಮುಖ್ಯವಾಗಿ ದೇಶದ ಬೆನ್ನೆಲುಬು ಅನ್ನದಾತನ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಕಾರ್ಯಕ್ರಮಗಳು, ಜನರ ಆರೋಗ್ಯದ ಕಾಳಜಿಗಾಗಿ ಆರಂಭಿಸಿರುವ ಆಯುಷ್ಮಾನ್ ಭಾರತ್ ಇಂಥಹ ಹತ್ತು ಹಲವು ಯೋಜನೆಗಳಿಂದಾಗಿ ಜನರ ಬದುಕು ಹಸನಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಡಿಎ ಅಧ್ಯಕ್ಷ ವಿಶ್ವನಾಥ್, ವಿಧಾನಪರಿಷತ್  ಸದಸ್ಯ ಗೋಪಿನಾಥ್, ಬಿಜೆಪಿ ಉತ್ತರ ಜಿಲ್ಲಾಧ್ಯಕ್ಷ ನಾರಾಯಣ ಮಂಡಲದ ಅಧ್ಯಕ್ಷ ಸತೀಶ್ ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.