“ಆಯುರ್ವೇದ” ಎಂಬುದು ಸಂಸ್ಕೃತ ಶಬ್ದ.”ಆಯು” ಅಂದರೆ ಆಯಸ್ಸು ಅಂದರೆ ಜೀವನ “ಆಯುರ್ವೇದ” ಅಂದರೆ ”ಜ್ಞಾನ ”ಆಂದರೆ ಪರಿಪೂರ್ಣ ತಿಳುವಳಿಕೆ ಆಯುರ್ವೇದ ಆದರೆ ಜೀವನದ ಬಗ್ಗೆ ಪರಿಪೂರ್ಣ ತಿಳಿವಳಿಕೆಯನ್ನು ತಿಳಿಸುವುದು ಎಂದರ್ಥ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಜೀವನ ಜ್ಞಾನ ಹಾಗೂ ಜೀವನ ಶಾಸ್ತ್ರ ಎಂದೂ ತಿಳಿಯಬಹುದು. “ಜೀವ” ಅಂದ ಕೂಡಲೇ ಅದರ ಸಂಬಂಧ ಕೇವಲ ದೇಹದೊಂದಿಗೆ ಅಲ್ಲದೆ ಮನುಸ್ಸು ಹಾಗೂ ಪಂಚೇಂದ್ರಿಯಗಳಾದ ಕಣ್ಣು,ಕಿವಿ,ಮೂಗು, ನಾಲಿಗೆ,ಚರ್ಮದೊಂದಿಗೂ ಇರುತ್ತದೆ. ಆದ್ದರಿಂದ ಆಯುರ್ವೇದವು ದೇಹ ಹಾಗೂ ದೇಹಾಂಗಗಳ ಆರೋಗ್ಯ ಹಾಗೂ ಅನಾರೋಗ್ಯಗಳ ಬಗ್ಗೆ ವಿವರವಾಗಿ ತಿಳಿಯುವುದೊಂದಿಗೆ ಅವುಗಳ ನಿವಾರಣೋಪಾಯೋಗಗಳ ಬಗ್ಗೆಯೂ ತಿಳಿಸುವ ಕೈಗನ್ನಡಿಯ ರೂಪದ ಶಾಸ್ತ್ರ ಆಗಿದೆ. ಆದ್ದರಿಂದಲೇ ಇದನ್ನು ಜೀವನ ಶಾಸ್ತ್ರ ಎಂದು ಕರೆಯುವುದು ಸೂಕ್ತ ಎನಿಸಿದೆ.
ಸ್ವಾಸ್ಥ, ಆರೋಗ್ಯ ಎರಡೂ ಬಹುಮಟ್ಟಿಗೆ ಒಂದೇ ಅರ್ಥವನ್ನು ನೀಡುವ ಪರ್ಯಾಯ ಪದಗಳೇ ಆಗಿವೆ. ‚ಸ್ವ’ ಅಂದರೆ “ತನ್ನದೇ ಆದ” ಅಂದರೆ ಪ್ರಾಕೃತಿಕವಾಗಿ ”ಸ್ಥ”ಅಂದರೆ “ಇರುವುದು” ಎಂದರ್ಥ. ಆಯುರ್ವೇದದ ದೃಷ್ಟಿಯಲ್ಲಿ ಮಾನವನ ಜೀವನದ ಪರಿಧಿಯಲ್ಲಿ ಶರೀರ,ಇಂದ್ರಿಯ,ಮನಸ್ಸು ಹಾಗೂ ಆತ್ಮ ಈ ನಾಲ್ಕೂ ಅಂಶಗಳೂ ಪ್ರಾಕೃತಿಕ ಸ್ಥಿತಿಯಲ್ಲಿರುವುದೇ “ಸ್ವಾಸ್ಥ್ಯ” ಎನಿಸುವುದು.
‘ಆರೋಗ್ಯ’ ಎಂದಾಗ ಇಷ್ಟೊಂದು ವಿಶಾಲ ರೂಪದ ಅರ್ಥ ಬರುವುದಿಲ್ಲ ಆರೋಗ್ಯ ಎಂಬುದರ ಅರ್ಥ ರೋಗರಹಿತ ಹಾಗೂ ರೋಗಮುಕ್ತ ಎಂದಷ್ಟೇ ಆಗುತ್ತದೆ.ರೋಗರಹಿತ ಸ್ಥಿತಿ ಎಂದಾಗ “ಸ್ವಾಸ್ಥ್ಯ” ಎಂಬ ಪದದಲ್ಲಿ ಕಾಣುವಷ್ಟು ಪರಿಪೂರ್ಣ ಅರ್ಧ ಬಾರದು. ಕೇವಲ ಸೀಮಿತ ಕ್ಷೇತ್ರದಲ್ಲಿ ಇದರ ಅರ್ಥ ಕೊನೆ ಕಾಣುವುದು.
“ಆಯುರ್ವೇದದ” ಅಂದಾಗ ಯಾವ ಜೀವನ ಸುಗಮಯ ಯಾವುದು ದುಃಖಮಯ ಇವುಗಳ ನೈಜ ಕಾರಣಗಳೇನು? ಆರೋಗ್ಯ ಹಾಗೂ ಆದರ್ಶದ ಬದುಕನ್ನು ಹೀಗೆ ಸಾಧಿಸಬಹುದು? ಜೀವನದ ಮೂಲಸ್ವರೂಪವಾದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಅದಕ್ಕೆ ಬಾಧಕವನ್ನು ತರುವ ರೋಗವು ಹೇಗೆ ಉಂಟಾಗುತ್ತದೆ? ಮುನ್ನೆಚ್ಚರಿಕೆ ಹಾಗೂ ನಿವಾರಣೆಯ ಕ್ರಮಗಳೇನು? ಮೊದಲಾದವುಗಳನ್ನು ಕೂಲಂಕುಶವಾಗಿ ತಿಳಿಸುವ ಶಾಸ್ತ್ರವನ್ನು” ಆಯುರ್ವೇದ” ಅನ್ನಬಹುದು.
ಆಯುರ್ವೇದದ ಮೊದಲ ಗುರಿ ಸ್ವಾಸ್ಥ್ಯ ಸಂರಕ್ಷಣೆ. ಅಂದರೆ ರೋಗ ಭಾರದಂತೆ ಮುನ್ನೆಚ್ಚರಿಕೆಯಿಂದ ನಡೆಯುಲು ಬೇಕಾದ ಸುಲಭೋಪಾಯಗಳನ್ನು ತಿಳಿಸುತ್ತದೆ ರೋಗವೇನಾದರೂ ಬಂದರೆ ಅದರ ಮೂಲಕ ಕಾರಣ ಹಾಗೂ ನಿವಾರಣೋಪಾಯವನ್ನು ತಿಳಿಸುವುದು ಆಯುರ್ವೇದದಲ್ಲಿ ಅನಂತರದ ಗುರಿ.ಇದರಲ್ಲಿ ದೇಹ, ಚಿತ್ತ ಎರಡರ ಆರೋಗ್ಯವು ಅನಿವಾರ್ಯ ಎನಿಸಿದೆ. ಇದನ್ನೇ ಆಂಗ್ಲ ಭಾಷೆಯಲ್ಲಿ “Sound mind in sound body”ಎನ್ನುವರು.
ಆಯುರ್ವೇದ ತತ್ವದಂತೆ ಆರೋಗ್ಯವ್ಯವಸ್ಥೆ ಅಂದಕೂಡಲೇ “ನಿತ್ಯವೂ ಹಿತಮಿತದ ಆಹಾರ ಸೇವನೆ. ಕೆಟ್ಟ ವಿಷಯಗಳ ಕಡೆ ಯೋಚಿಸದಿರುವುದು, ಸತ್ಯವನ್ನೇ ಅವಲಂಬಿಸಿರುವುದು,ಗುರು ಹಿರಿಯರ ಸೇವೆಯಲ್ಲಿ ನಿರಂತರಾಗಿರುವುದು” ಇತ್ಯಾದಿ ದೈಹಿಕ ಹಾಗೂ ಮಾನಸಿಕ ವಿಷಯಗಳೆರಡೂ ಸೇರಿವೆ.ಸ್ವಾಸ್ಥ್ಯ ಪ್ರಾಪ್ತಿಗೆ ಅಡ್ಡಿಯಾಗಿ ಋತು ವೈಪರಿತ್ಯವು ಎದುರು ಬರುವುದಿಲ್ಲದೆ, ಮಾನವನ ತಪ್ಪು ತಿಳವಳಿಕೆ ಹಾಗೂ ನಡವಳಿಕೆಗಳಿಗೂ ಕಾರಣ ಎನಿಸಿವೆ. ಅಡ್ಡಿ ಆತಂಕಗಳನ್ನು ಸ್ವಾಸ್ಥ್ ಸಂರಕ್ಷಣೆಯ ನಿಟ್ಟಿನಲ್ಲಿ ಇಟ್ಟಿವೆ. ಆದ್ದರಿಂದ ಆಯುರ್ವೇದದಲ್ಲಿ ಆರೋಗ್ಯ ಸಂರಕ್ಷಣೆಯ ದೃಷ್ಟಿಯಿಂದ ದೇಹ,ಮನಸ್ಸು ಎರಡರ ಮೇಲೂ ಉಂಟಾಗುವ ಪರಿಣಾಮಗಳ ಬಗ್ಗೆ ಗಮನ ಹರಿಸಬೇಕಿದೆ.