ಹನೂರು: ನರೇಗಾ ಕಾಮಗಾರಿಗೆ 80 ಸಾವಿರ ಹಣದ ಬೇಡಿಕೆ ಇಟ್ಟಿದ್ದ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಕೌದಳ್ಳಿಯ ರಾಮಾಪುರ ವಲಯದ ಆರ್.ಎಫ್.ಓ ಕಾಂತರಾಜು 60 ಸಾವಿರ ಲಂಚದ ಹಣ ಪಡೆಯುವ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ತಾಲ್ಲೋಕಿನ ಮಾರ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ನಾಲ್ ರೋಡ್ ಅರಣ್ಯ ವ್ಯಾಪ್ತಿಯ ಮೊರನೂರು ಕೆರೆ ಅಭಿವೃದ್ಧಿ ಕಾಮಗಾರಿಯನ್ನು ನರೇಗಾ ಯೋಜನೆಯಲ್ಲಿ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಅನುಮತಿ ನೀಡಲು ಲಂಚದ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
RFO ಕಾಂತರಾಜು ರವರು ಕೌದಳ್ಳಿಯ ತಮ್ಮ ವಸತಿ ಗೃಹದಲ್ಲಿ ಮಾರ್ಟಳ್ಳಿ ಗ್ರಾ.ಪಂ. ಸದಸ್ಯ ಜೋಸೆಫ್ ಎಂಬುವರಿಂದ 60 ಸಾವಿರ ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರು ಸೆರೆ ಹಿಡಿದಿದ್ದಾರೆ.